ಯುವಜನತೆ ಮೊಬೈಲ್ ಬಿಟ್ಟು ರಂಗಭೂಮಿಯೆಡೆಗೆ ಆಸಕ್ತಿ ವಹಿಸಬೇಕು : ಶ್ರೀ ಶಿವಲಿಗಾಂನದ ಸ್ವಾಮೀಜಿ
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 28 :
ನಾಟಕಗಳು ಮನುಷ್ಯನಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಿ ಶಿಸ್ತು, ಕಲ್ಪನಾಶಕ್ತಿ, ವಿವೇಚನಾಶಕ್ತಿ, ತಾರ್ಕಿಕತೆ, ಗ್ರಹಿಕೆ, ಅನುಕರಣೆ, ಸಮಯ ಪಾಲನೆ, ಏಕಾಗ್ರತೆ ಹೆಚ್ಚುಸುವಲ್ಲಿ ಸಹಕಾರಿಯಾಗಿದೆ ಆದರಿಂದ ಯುವಜನತೆ ತಮ್ಮನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಗಾಂನದ ಸ್ವಾಮೀಜಿ ತಿಳಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿದ್ದ ಬಾದರದಿನ್ನಿ ರಂಗೋತ್ಸವ 2024 ಎರಡು ದಿನಗಳ ನಾಟಕಗಳ ಪ್ರದರ್ಶನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಹರಿಯುವ ನದಿ ಇದಂತೆ. ನಾವು ಎಷ್ಟೇ ಆಧುನಿಕತೆ ಕಡೆ ನಡೆದರೂ ಇಂದಿಗೂ ಕೂಡ ರಂಗಭೂಮಿ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಇಲ್ಲಿ ನೂರಾರು ಕಲಾವಿದರು ತಮ್ಮ ಜೀವನವನ್ನು ಕಟ್ಟಿಕೊಂಡು ಸಾಧನೆ ಮಾಡಿದ ಉದಾಹರಣೆ ಇದೆ. ರಾಜ್ಯದಲ್ಲಿ ಹಲವಾರ ಸಂಘ ಸಂಸ್ಥೆಗಳು ಕಲಾವಿದರನ್ನು ಸಂಘಟಿಸಿ ನಾಟಕ ತಯಾರು ಮಾಡಿ ರಾಜ್ಯದ ನಾನಾ ಭಾಗಗಳಿಗೆ ಸಂಚರಿಸಿ ಪ್ರದರ್ಶನ ನೀಡಿವ ಮೂಲಕ ರಂಗಭೂಮಿಯನ್ನು ಬೆಳಸುವಲ್ಲಿ ಕೊಡುಗೆ ನೀಡಿದ್ದಾರೆ. ನಾಟಕಗಳಿಂದ ತಮ್ಮ ಪ್ರತಿಭೆಯನ್ನು ಸಾಬಿತು ಮಾಡಿ ಬಹಳಷ್ಟು ಕಲಾವಿದರು ದಾರವಾಹಿ ಹಾಗೂ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದಾರೆ.
ಯುವಜನ ಮೊಬೈಲ್‍ದಿಂದ ದೂರವಾಗಿ ಇಂತಹ ಕಲೆಗಳಲ್ಲಿ ತಮ್ಮನು ತೊಡಗಿಸಿಕೊಂಡು ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ಏಕಾಗ್ರತೆ ಹೆಚ್ಚಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು. ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯು ಪ್ರತಿ ವರ್ಷ ನಾಟಕೋತ್ಸವ ಆಯೋಜಿಸುವ ಮೂಲಕ ನಗರದಲ್ಲಿ ಹೊಸ ಕಲಾವಿದರನ್ನು ಹುಟ್ಟುಹಾಕುತ್ತಿದ್ದಾರೆ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಮಾತನಾಡಿ, ಅಶೋಕ ಬಾದರದಿನ್ನಿ ಅವರು ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬಂದ ಪರಿಸರ, ಮೂಡನಂಭಿಕೆ, ಕಂದಾಚಾರ ಮುಂತಾದ ರೂಪಕಗಳು ಸಮಾಜದಲ್ಲಿ ಮೌಡ್ಯಗಳನ್ನು ಕಿತ್ತೋಗೆಯುವಂತೆ ಸಂದೇಶ ನೀಡಿದೆ. ರಂಗಭುಮಿಗೆ ಅನೇಕ ಕಲಾವಿದರನ್ನು ಹಾಗೂ ಕಲಾ ತಂಡಗಳನ್ನು ಹಟ್ಟುಹಾಕುವಲ್ಲಿ ಪ್ರಥಮರಾಗಿದ್ದಾರೆ. ಅವರಿಂದ ತರಬೇತಿಗೊಂಡ ಅನೇಕ ಕಲಾ ತಂಡಗಳು ಇಂದು ರಾಷ್ಟಮಟ್ಟದಲ್ಲಿ ದಾಖಲೆಗಳನ್ನು ಸೃಷ್ಠಿಸಿದ್ದಾವೆ. ರಂಗಭೂಮಿ ಒಂದು ಪ್ರಭಲವಾದ ಮಾಧ್ಯಮ ಅದಿರಂ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಕಲಾವಿದರು ಪ್ರಕಾಶ್ ಬಾದರದಿನ್ನಿ ನಿರ್ದೇಶನದ ನಾ.ಶ್ರೀನಿವಾಸ ಪಾಪು ರಚನೆಯ ಕನಸಿನವರು ನಾಟಕವನ್ನು ಪ್ರದರ್ಶಿಸಿದರು.
ಇಳಕಲ್‍ನ ರಂಗಕರ್ಮಿ ಮಹಂತೇಶ್ ಗಜೇಂದ್ರಗÀಡ, ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಸಾಹತಿ ಡಾ.ಯಶೋಧಾ ರಾಜಶೇಖರಪ್ಪ, ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಅಧ್ಯಕ್ಷೆ ಅನಸೂಯಾ ಬಾದರದಿನಿ, ರಂಗಕರ್ಮಿಗಳಾದ ಕೆ.ಪಿ.ಎಂ.ಗಣೇಶಯ್ಯ, ಎಂ.ಕೆ.ಹರೀಶ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಜಂಬುನಾಥ್‍ಮತ್ತಿತರರು ಇದ್ದರು.