Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯೋಗಿ ನಾರೇಯಣ ಯತಿಗಳು ಜಾತಿ, ವರ್ಗ, ಧರ್ಮ ಮೀರಿದ ಮಹರ್ಷಿಗಳಾಗಿದ್ದರು : ಮಾದಾರ ಚೆನ್ನಯ್ಯ ಸ್ವಾಮೀಜಿ

09:21 PM Feb 14, 2024 IST | suddionenews
Advertisement

ಹಿರಿಯೂರು: ಬಲಿಜ ಜನಾಂಗದಲ್ಲಿ ಯಶಸ್ವಿ ಉದ್ಯಮಿಗಳು, ನೌಕರರಿದ್ದು ಅವರು ಸಹ ಸಮಾಜದ ಏಳ್ಗೆ ಬೆಳವಣಿಗೆಗೆ ಶ್ರಮಿಸಬೇಕು ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಟ್ರೆಹಳ್ಳಿ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಲಕ್ಷ್ಮೀವೆಂಕಟೇಶ್ವರ, ಶ್ರೀ ಮಹಾಗಣಪತಿ, ಹಾಗೂ ಸದ್ಗುರು ಶ್ರೀ ಯೋಗಿನಾರೇಯಣಸ್ವಾಮಿ ತಾತಯ್ಯನವರ ನೂತನ ಬಿಂಬ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಬಲಿಜ ಶ್ರೇಯ ಭವನ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹದಿನೆಂಟನೇ ಶತಮಾನದಲ್ಲಿದ್ದ ಯೋಗಿ ನಾರೇಯಣ ಯತಿಗಳು ಎಲ್ಲಾ ಜಾತಿ, ವರ್ಗ, ಧರ್ಮಗಳನ್ನು ಮೀರಿದ ಮಹರ್ಷಿಗಳಾಗಿದ್ದರು.

ಕಲ್ಯಾಣ ಮಂಟಪಗಳು ಯಾವ ಜಾತಿ, ಧರ್ಮಕ್ಕೂ ಸೀಮಿತವಾಗದೇ ಎಲ್ಲರಿಗೂ ಉಪಯೋಗವಾಗಲಿ. ಬಲಿಜ ಜನಾಂಗದಲ್ಲಿ ಯಶಸ್ವಿ ಉದ್ಯಮಿಗಳು, ನೌಕರರಿದ್ದು ಅವರು ಸಹ ಸಮಾಜದ ಏಳ್ಗೆ ಬೆಳವಣಿಗೆಗೆ ಶ್ರಮಿಸಬೇಕು. ಹೆದ್ದಾರಿ ಪಕ್ಕದ ಈ ಭವನ ಎಲ್ಲರಿಗೂ ಸದ್ಭಳಕೆಯಾಗಲಿ. ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ. ಆತ ದೇವರು ಎಂಬುದಕ್ಕಿಂತ ಎಲ್ಲರಿಗೂ ಆದರ್ಶ ಪುರುಷನಾಗಿದ್ದ. ರಾಮನಂತಹವರ ಆದರ್ಶಗಳು ನಮಗೆಲ್ಲ ಮಾದರಿಯಾಗಬೇಕು.

Advertisement

ಸಣ್ಣ ಸಮುದಾಯವೊಂದರ ಜನರೆಲ್ಲ ಸೇರಿ ದೊಡ್ಡ ಭವನ ನಿರ್ಮಿಸಿರುವುದು ಅವರಲ್ಲಿನ ಕಾರ್ಯ ಕ್ಷಮತೆಗೆ ಸಾಕ್ಷಿ. ಇದು ಸರ್ವಜನಾಂಗದವರ ಕಲ್ಯಾಣ ಕಾರ್ಯಗಳಿಗೆ ನೆರವಾಗುವುದರ ಜೊತೆಗೆ ಇದರಿಂದ ಬರುವ ಆದಾಯವನ್ನು ಸಮಾಜದ ಅಭಿವೃದ್ಧಿಗೆ, ಬಡ ಮಕ್ಕಳ ಶೈಕ್ಷಣಿಕ ಉನ್ನತಿಗೆ ಬಳಸಿ ಎಂದು ಸಲಹೆ ನೀಡಿದರು. ಬೆಂಗಳೂರಿನ ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ ಶಿಕ್ಷಣದಲ್ಲಿ ಧರ್ಮ, ತ್ಯಾಗ, ಸೇವೆ, ಪರೋಪಕಾರದ ಗುಣವಿರಬೇಕು. ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಯಾವ ದೇವರಲ್ಲೂ ಜಾತಿ,ಮತಗಳ ಬೇಧವಿಲ್ಲ. ಹಾಗಾಗಿ ಜನರೂ ಸಹ ಜಾತಿ ಬೇಧವಿಟ್ಟುಕೊಳ್ಳದೆ ಮನುಷ್ಯ ಜಾತಿ ಒಂದೇ ಎಂದು ಬದುಕಬೇಕು ರೂಪಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವ ಡಿ ಸುಧಾಕರ್, ಬಾಲ್ಡ್ ವಿನ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್, ಯೋಗಿ ನಾರೇಯಣ ಬಲಿಜ ಸಂಘದ ಅಧ್ಯಕ್ಷ ತಿಮ್ಮಶೆಟ್ಟಿ, ಬಾಜಪ ರಾಜ್ಯ ಕಾರ್ಯದರ್ಶಿ ಮುನಿರಾಜು,ಮಾಜಿ ಸಂಸದ ಜನಾರ್ದನ ಸ್ವಾಮಿ,
ಮಾಜಿ ಶಾಸಕ ಜಿಹೆಚ್. ತಿಪ್ಪಾರೆಡ್ಡಿ, ಕಾಂತರಾಜು ಚಿದಾನಂದ್, ವೆಂಕಟಾಚಲ,ರಾಮಲಿಂಗಪ್ಪ, ನರಸಿಂಹ ಮೂರ್ತಿ, ಸೇತುರಾo, ಗಿರಿಜಾ ಶಂಕರ್, ಅಶೋಕ್, ಪದ್ಮನಾಭ್, ಬಿ ಎನ್ ಪ್ರಕಾಶ್,ನರೇಂದ್ರ ಬಾಬು, ವೆಂಕಟೇಶ್, ಅಣ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
chitradurgaclass and religionMadara Chennaiahtranscended casteYogi Narayanaಚಿತ್ರದುರ್ಗಜಾತಿಧರ್ಮಮಾದಾರ ಚೆನ್ನಯ್ಯಯೋಗಿ ನಾರೇಯಣವರ್ಗ
Advertisement
Next Article