Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಿರಾಸೆ ಮಾತನ್ನಾಡಿದ್ದ ಯೋಗೀಶ್ವರ್ ಗೆಲುವಿನ ನಗೆ: 30 ಸಾವಿರ ಅಂತರದಿಂದ ಗೆಲ್ಲುವ ವರದಿ ಸಲ್ಲಿಕೆ..!

04:17 PM Nov 20, 2024 IST | suddionenews
Advertisement

ಬೆಂಗಳೂರು: ನವೆಂಬರ್ 23ಕ್ಕೆ ಬೈಎಲೆಕ್ಷನ್ ವರದಿ ಹೊರ ಬೀಳಲೊದೆ. ಇದರ ನಡುವೆ ಆಶ್ಚರ್ಯಕರ ಬೆಳವಣಿಗೆಯು ನಡೆದಿದೆ. ಈ ಬಾರಿ ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಇಲ್ಲಿ ಸಿಪಿ ಯೋಗೀಶ್ವರ್ ವರ್ಸಸ್ ನಿಖಿಲ್ ಕುಮಾರಸ್ವಾಮಿ ನಡುವೆ ನೆಕ್ ಟು ನೆಕ್ ಸ್ಪರ್ಧೆ ನಡೆದಿತ್ತು. ಬಿಜೆಪಿ ಘಟಾನುಘಟಿ ನಾಯಕರೆಲ್ಲ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಿದ್ದರು. ಮೇಲ್ನೋಟದ ವರದಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜಯ ಎಂಬ ಚರ್ಚೆಗಳು ನಡೆದಿತ್ತು.

Advertisement

ಇದಕ್ಕೆ ಪೂರಕವಾಗಿ ಸಿಪಿ ಯೋಗೀಶ್ವರ್ ಅವರು ಸೋಲಿನ ಅನುಮಾನ ವ್ಯಕ್ತಪಡಿಸಿದ್ದರು. ಚುನಾವಣೆ ಮುಗಿದ ಕೂಡಲೇ ಸುದ್ದಿಗೋಷ್ಟಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಫಲಿತಾಂಶಕ್ಕೆ ಎರಡು ದಿನ ಇರುವಾಗಲೇ ಗೆಲುವಿನ ನಗೆ ಬೀರಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಗೆಲುವಿನ ನಗೆ ಬೀರಿದ್ದಾರೆ. ಇವರ ಭೇಟಿಗೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಜೊತೆಗೆ ಭೇಟಿ ಮಾಡಿದ್ದಾರೆ.

ಈ ವೇಳೆ, ಮೂವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುವ ಭರವಸೆ ನೀಡಿದ್ದಾರೆ. ಮಾಹಿತಿಯ ಪ್ರಕಾರ, ಯಾವ್ಯಾವ ಹೋಬಳಿಗಳಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮತದಾನ ಆಗಿದೆ. ಅಂತಿಮವಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕನಿಷ್ಠ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವರದಿ ಬಂದಿದೆ ಎಂಬುದನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ರಹಸ್ಯ ವರದಿ ಇದಾಗಿದ್ದು, ತಾವೇ ಗೆಲ್ಲುವುದಾಗಿ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಮಾತು ಕೇಳಿ ಸಿಎಂ ಹಾಗೂ ಡಿಸಿಎಂ ಕೂಡ ಖುಷಿಯಾಗಿದ್ದಾರೆ ಎನ್ನಲಾಗಿದೆ.

Advertisement

Advertisement
Tags :
bengaluruchannapatnaChannapatna by-electioncp yogeshwarಚನ್ನಪಟ್ಟಣಚನ್ನಪಟ್ಟಣ ಉಪಚುನಾವಣೆಬೆಂಗಳೂರುಸಿ ಪಿ ಯೋಗೀಶ್ವರ್
Advertisement
Next Article