For the best experience, open
https://m.suddione.com
on your mobile browser.
Advertisement

ಯೋಗೀಶ್ ಸಹ್ಯಾದ್ರಿ ಅವರಿಗೆ "ವರ್ಷದ ಅತ್ಯುತ್ತಮ ಶಿಕ್ಷಕ - 2024" ಪ್ರಶಸ್ತಿ ಪ್ರದಾನ

01:01 PM Sep 16, 2024 IST | suddionenews
ಯೋಗೀಶ್ ಸಹ್ಯಾದ್ರಿ ಅವರಿಗೆ  ವರ್ಷದ ಅತ್ಯುತ್ತಮ ಶಿಕ್ಷಕ   2024  ಪ್ರಶಸ್ತಿ ಪ್ರದಾನ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ ಸೆ. 16 : ಉಪನ್ಯಾಸಕ ಹಾಗೂ ಲೇಖಕ ಯೋಗೀಶ್ ಸಹ್ಯಾದ್ರಿ ಅವರಿಗೆ ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ವತಿಯಿಂದ ಶುಕ್ರವಾರದಂದು ಶಿಕ್ಷಕ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ "ವರ್ಷದ ಅತ್ಯುತ್ತಮ ಶಿಕ್ಷಕ" ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು, ಯಾವುದೇ ಪ್ರಶಸ್ತಿ, ಬಿರುದು, ಸನ್ಮಾನಗಳು ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತವೆ ಮತ್ತು ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತವೆ ಎಂದು ಹೇಳುತ್ತಾ ಇಂದು ನನಗೆ ನೀಡಿದ ಪುರಸ್ಕಾರ ನನಗೆ ವಿದ್ಯೆ ಕಲಿಸಿದ ಗುರುಗಳಿಗೆ ಸಮರ್ಪಿಸುವುದಾಗಿ ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರೊ| ಪಿ.ಹೆಚ್.ಎಫ್ ಎಂ.ಕೆ. ರವೀಂದ್ರ ಅವರು ಯಾವುದೇ ಒಂದು ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಅತ್ಯುತ್ತಮ ಶಿಕ್ಷಣ ಹಾಗು ಶಿಕ್ಷಕರ ಕಾರ್ಯ ಮಹತ್ವದ್ದಾಗಿದೆ. ಜಿಲ್ಲೆಯ ಗ್ರಾಮೀಣ ಹಾಗು ಸ್ಲಂ ಪ್ರದೇಶದ ವಿದ್ಯಾರ್ಥಿಗಳಿಗೆ ಸಹ್ಯಾದ್ರಿ ಅವರ ಉಚಿತ ಇಂಗ್ಲಿಷ್ ತರಬೇತಿಯ ನಿಸ್ವಾರ್ಥ ಸೇವೆ ಮತ್ತು ಮಕ್ಕಳ ಸಾಹಿತ್ಯ ಪರಿಷತ್ ನ ಸೇವೆ ಮುಂದುವರೆಯಲಿ ಎಂದು ಆಶಿಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ರೊ|| ಮಂಜುನಾಥ್ ಭಾಗವತ್, ಯೋಗೀಶ್ ಸಹ್ಯಾದ್ರಿ ಅವರು ತಮ್ಮ ಎಜುಕೇಷನ್ ಟ್ರಸ್ಟ್ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆ-ಕಾಲೇಜುಗಳು, ಸ್ಲಂ ಪ್ರದೇಶದ ಹಾಗೂ ಹಾಸ್ಟೆಲ್ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸಿಕೊಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೃತಿಗಳನ್ನು ರಚಿಸಿರುವ ಇವರ ಸಾಧನೆ ಹಾಗೂ ಸಾಮಾಜಿಕ, ಶೈಕ್ಷಣಿಕ ಕೊಡುಗೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ, ತಾಲೂಕು ಕಂದಾಯಾಧಿಕಾರಿ ಪ್ರಾಣೇಶ್, ನಿವೃತ್ತ ಪೊಲೀಸ್ ಎ.ಎಸ್.ಐ ಪ್ರಾಣೇಶ್, ರೋಟರಿ ಕ್ಲಬ್ ಉಪಾಧ್ಯಕ್ಷ ರೊ| ಗುರುಮೂರ್ತಿ, ಮಕ್ಕಳ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕುರುಬ ಸಮಾಜದ ಮುಖಂಡರುಗಳಾದ ಮೃತ್ಯುಂಜಯ, ಮಾಳೇಶ್, ಸುರೇಶ್ ಉಗ್ರಾಣ, ಉಮೇಶ್, ಮಹೇಶ್, ಮಂಜುನಾಥ್ ಹಾಗು ಸಹ್ಯಾದ್ರಿ ಅವರ ವಿದ್ಯಾರ್ಥಿಗಳು ಹಾಗು ಅಭಿಮಾನಿಗಳು ಮತ್ತು ರೋಟರಿ ಕ್ಲಬ್ ಸದಸ್ಯರಾದ ಅರುಣ್ ಕುಮಾರ್, ಶ್ರೀನಿವಾಸ್ ಮಳಲಿ, ವೀರಣ್ಣ ಇನ್ನಿತರರು ಪಾಲ್ಗೊಂಡಿದ್ದರು.

Tags :
Advertisement