ಯೋಗವು ಶಿಸ್ತು ಮತ್ತು ಆರೋಗ್ಯವನ್ನು ಜೋಪಾನ ಮಾಡುತ್ತದೆ : ಶ್ರೀಮತಿ ಹೇಮಾವತಿ
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 25 : ಶಿಸ್ತು ಆರೋಗ್ಯ ಪಡೆಯಲು ಯೋಗ ಬಹಳ ಉಪಯೋಗವಾಗುತ್ತದೆ ಮಕ್ಕಳಿಗೆ ಏಕಾಗ್ರತೆಯೊಂದಿಗೆ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ದ್ವೇಷ ,ಅಸೂಯೆಯನ್ನು ತೊಡೆದು ಹಾಕುವ ಶಕ್ತಿ ಯೋಗ ಮಾಡುವುದರಿಂದ ಬರುತ್ತದೆ ಎಂದು ಪತಂಜಲಿ ಮಹಿಳಾ ಯೋಗ ಸಂಸ್ಥೆಯ ಅಧ್ಯಕ್ಷರು ಹಾಗೂ ಯೋಗ ಶಿಕ್ಷಕಿ ಹೇಮಾವತಿ ಹೇಳಿದರು.
ನಗರದ ಶ್ರೀ ಸಿದ್ದರಾಮೇಶ್ವರ ವಸತಿ ಶಾಲೆಯಲ್ಲಿ
ರಾಜ್ಯಬಾಲ ಭವನ ಸೊಸೈಟಿ ಬೆಂಗಳೂರು,
ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಬಾಲ ಭವನ ಸಮಿತಿ ಚಿತ್ರದುರ್ಗ ಇವರ ವತಿಯಿಂದ 25/8/2024 ಭಾನುವಾರದಂದು ನಡೆದ ವಾರಾಂತ್ಯ ಕಾರ್ಯಕ್ರಮದ ದಲ್ಲಿ ಯೋಗ ತರಬೇತಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಯೋಗ ಶಿಕ್ಷಕಿ ಕಾವ್ಯ ಮಾತನಾಡಿ ಶಿಕ್ಷಣದಲ್ಲಿ ಯೋಗ ಕಲಿಕೆಯಿಂದ ಏಕಾಗ್ರತೆ ಹೆಚ್ಚಾಗುತ್ತದೆ ಯೋಗ ಕಲಿಯುವುದರಿಂದ ಬಹಳ ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಬಾಲ ಭವನ ಕಾರ್ಯಕ್ರಮ ಸಂಯೋಜಕ ಡಿ .ಶ್ರೀ ಕುಮಾರ್ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ವಾರಂತ್ಯದಲ್ಲಿ ಮಕ್ಕಳು ಸಮಯವನ್ನು ಪಠ್ಯತರ ಚಟುವಟಿಕೆಗಳೊಂದಿಗೆ ಕಳೆಯುವ ನಿಟ್ಟಿನಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಯೋಗ ಶಿಕ್ಷಕಿ ಶಾಂತ ಮಾತನಾಡಿದರು ಕಾರ್ಯಕ್ರಮದಲ್ಲಿ ನಿಲಯ ಪಾಲಕರಾದ ಆನಂದ್ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.