For the best experience, open
https://m.suddione.com
on your mobile browser.
Advertisement

ಮನಶಾಂತಿಗೆ, ವಿಶ್ವಶಾಂತಿಗೆ, ವಿಶ್ವ ಭಾತೃತ್ವಕ್ಕೆ ಯೋಗವೇ  ಔಷಧ : ವೈದ್ಯಾಧಿಕಾರಿ ಡಾ. ಶಿವಕುಮಾರ್

05:58 PM Feb 16, 2024 IST | suddionenews
ಮನಶಾಂತಿಗೆ  ವಿಶ್ವಶಾಂತಿಗೆ  ವಿಶ್ವ ಭಾತೃತ್ವಕ್ಕೆ ಯೋಗವೇ  ಔಷಧ   ವೈದ್ಯಾಧಿಕಾರಿ ಡಾ  ಶಿವಕುಮಾರ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಫೆ. 16 :  ಯೋಗವನ್ನು ಮಾಡುವುದರಿಂದ ಶಾರೀರಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಆರೋಗ್ಯ ಸಹಾ ಸುಧಾರಣೆಯನ್ನು ತರಲಿದೆ. ಮನಶಾಂತಿಗೆ, ವಿಶ್ವಶಾಂತಿಗೆ, ವಿಶ್ವ ಭಾತೃತ್ವಕ್ಕೆ ಯೋಗ ಔಷಧವಾಗಿದೆ ಯೋಗವನ್ನು ಎಲ್ಲಡೆ ಪಸರಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದರು.

Advertisement
Advertisement

ನಗರದ ವಿದ್ಯಾನಗರದ ಕ್ಷೇಮಾಭಿವೃದ್ದಿ ಸಂಘ, ಪತಂಜಲಿ ಯೋಗ ಸಮಿತಿಯ ಸಂಯುಕ್ತಾ ಶ್ರಯದಲ್ಲಿ ವಿದ್ಯಾನಗರದ ವೀರ ಸಾವಕ್ಕರ್ ಉದ್ಯಾನವನದಲ್ಲಿ ರಥ ಸಪ್ತಮಿಯ ಅಂಗವಾಗಿ ಹಮ್ಮಿಕೊಂಡಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಥಸಪ್ತಮಿಯ ನಂತರ ಸೂರ್ಯ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ ಇದರಿಂದ ಮಾನವರಾದ ನಮಗೆ ತೊಂದರೆಯಾಗಬಾರದೆಂದು ರಥಸಪ್ತಮಿಯಂದು ಸೂರ್ಯವನ್ನು ಆರಾಧನೆ ಮಾಡುವುದರ ಮೂಲಕ ಸೂರ್ಯನಿಗೆ ನಮಸ್ಕಾರ ಮಾಡುವುದರ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ನಾವು ಆಚರಣೆ ಮಾಡುವ ಹಬ್ಬ ಹರಿದಿನಗಳು ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸುವ ಕಾರ್ಯವನ್ನು ಮಾಡಲಾಗುತ್ತದೆ. ನಾವು ಪ್ರತಿಯೊಂದಕ್ಕೂ ಸಹಾ ಪ್ರಕೃತಿಗೆ ಶರಣರಾದರೆ ನಮ್ಮಲ್ಲಿನ ಆಹಂಕಾರ ಕಡಿಮೆಯಾಗುತ್ತದೆ ಎಂದರು.

ನಮಗೆ ಬರುವ ಖಾಯಿಲೆಗಳು ಪೂರ್ಣ ಪ್ರಮಾಣದಲ್ಲಿ ವಾಸಿಯಾಗುವುದಿಲ್ಲ ಇದರ ಬದಲಾಗಿ ನಾವುಗಳು ಖಾಯಿಲೆಗೆ ಹೊಂದಿಕೊಂಡು ಬದುಕುವಂತೆ ಮಾಡುತ್ತದೆ. ವೈದ್ಯರು ರೋಗಿಗಳನ್ನು ಬದಲಾಯಿಸುತ್ತಿದ್ದಾರೆ ಹೊರೆತು ರೋಗಿಗಳ ಖಾಯಿಲೆಗೆ ಔಷಧಿ ಸಿಗುತ್ತಿಲ್ಲ, ಇದರಿಂದ ಖಾಯಿಲೆಗಳು ವಾಸಿಯಾಗುತ್ತಿಲ್ಲ ನಮ್ಮ ಜೀವನ ಶೈಲಿಯನ್ನು ಬದಲಾಯಿಸದಿದ್ದರೆ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಯಾವುದೇ ಕಾರಣಕ್ಕೂ ಖಾಯಿಲೆ ವಾಸಿಯಾಗುವುದಿಲ್ಲ ಎಂದ ಅವರು ಈ ಮುಂಚೆ ಎಲ್ಲೂ ಇದ್ದ ಡಯಾಲಿಸಿಸಿ ಸೆಂಟರ್‍ಗಳು ಇಂದು ನಮ್ಮ ಮನೆ ಬಾಗಿಲಿಗೆ ಬಂದಿದೆ. ಇದೇ ರೀತಿ ರಸ್ತೆಗೆ ಹಲವಾರು ಜನ ವೈದ್ಯರು ಇದ್ದಾರೆ, ಆಸ್ಪತ್ರೆಗಳು ಪ್ರಾರಂಭವಾಗುತ್ತಿವೆ ಎಂದು ನುಡಿದರು.

ನಮ್ಮ ಜೀವನ ಶೈಲಿಯಲ್ಲಿ ಆಗುವ ಬದಲಾವಣೆಗಳು ಆಸ್ಪತ್ರೆಗಳು ನಮ್ಮ ಹತ್ತಿರ ಬರುವಂತೆ ಮಾಡುತ್ತವೆ. ಪ್ರಕೃತಿಯೊಂದಿಗೆ ಹೊಂದಿಕೊಂಡು ಜೀವನ ಮಾಡುವುದನ್ನು ಕಲಿತರೆ ಆರೋಗ್ಯ ಚನ್ನಾಗಿ ಇರಲು ಸಾಧ್ಯವಿದೆ. ಖಾಯಿಲೆ ಬಂದಾಗ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ನಿವಾರಣೆಯನ್ನು ಮಾಡಿಕೊಳ್ಳಬಹುದು ಖರ್ಚನ್ನೇ ಮಾಡದೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುವುದರ ಮೂಲಕ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪತಂಜಲಿ ಯೋಗ ಸಮಿತಿಯ ಗುರುಗಳಾದ ಶ್ರೀನಿವಾಸ ಮಾತನಾಡಿ, ಯೋಗದಿಂದ ಚಿತ್ತ ಶಾಂತಿಯಾಗಿ ವೃದ್ದಿಯಾಗಬೇಕಿದೆ. ನಮ್ಮ ಜೀವನದಲ್ಲಿ ಬರುವಂತ ತಾಪತ್ರಯಗಳನ್ನು ನಿಧಾನವಾಗಿ ಶಾಂತ ರೀತಿಯಿಂದ ಅವುಗಳನ್ನು ಬಗೆಹರಿಸಿಕೊಳ್ಳುವಂತ ಗುಣವನ್ನು ಹೊಂದಬೇಕಿದೆ. ಮಾನವನಿಗೆ ತಾತ್ಕಾಲಿಕವಾಗಿ ಸಂತೋಷವನ್ನು ನೀಡುವಂತ ಸನ್ನಿವೇಶಗಳು ಬೇಗನೇ ಪ್ರಾರಂಭವಾಗುತ್ತವೆ ಆದರೆ ಈಂತಹ ಯೋಗ ಶಿಬಿರಗಳು ನಿಧಾನವಾಗಿ ಪ್ರಾರಂಭವಾಗಿ ಮುಂದೆ ಉತ್ತಮವಾದ ಪ್ರಯೋಜವನ್ನು ನೀಡುತ್ತವೆ ಎಂದರು.

ಚಿತ್ರದುರ್ಗದಲ್ಲಿ ಯೋಗ ಭವನವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ ಇದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಹಣವೂ ಸಹಾ ಸಂಗ್ರಹವಾಗಿದೆ ಇದಕ್ಕೆ ಸಹಾಯ ಮಾಡುವವರು ಮುಂದೆ ಬಂದರೆ ಶೀಘ್ರದಲ್ಲಿಯೇ ಯೋಗ ಭವನಕ್ಕೆ ನಿವೇಶನವನ್ನು ಖರೀದಿ ಮಾಡಲಾಗುವುದು ಎಂದ ಅವರು ಯೋಗವನ್ನು ಯುವ ಜನತಗೆ ಪರಿಚಯ ಮಾಡವ ಕಾರ್ಯವಾಗಬೇಕಿದೆ ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಇದರತ್ತ ಬಂದರೆ ಮುಂದಿನ ದಿನದಲ್ಲಿ ಹೆಚ್ಚಿನ ಉಪಯೋಗವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾನಗರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷರಾದ ಜಿ.ಆರ್.ಪ್ರತಾಪ್ ರೆಡ್ಡಿ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶಿವರಾಂ, ಉಪಾಧ್ಯಕ್ಷರಾದ ಎಂ.ಸಿ.ಶಂಕರ್, ಸಹ ಕಾರ್ಯದರ್ಶಿ ಮಂಜುನಾಥ್, ಖಂಜಾಚಿ ಮುಕುಂದರೆಡ್ಡಿ, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ಮೋತ್ಕೂರ್, ಶ್ರೀಮತಿ ಸಲೋಚನಾ ಶಂಕರ್, ಆರ್.ನಿರಂಜನ, ಶ್ರೀಮತಿ ವನಜಾಕ್ಷಿ, ಶ್ರೀಮತಿ ರೀನಾ ವೀರಭದ್ರಪ್ಪ, ಗುರುಮೂರ್ತಿ, ವೀಣಾ, ವಿಜಯ, ಸೇರಿದಂತೆ ಇತರರು ಭಾಗವಹಿಸಿದ್ದರು. ಆರುಣ್ ಪ್ರಾರ್ಥಿಸಿದರೆ, ಲೀಲಾ ಸ್ವಾಗತಿಸಿದರು.

ಇದಕ್ಕೂ ಮುನ್ನಾ ಸುಮಾರು 150 ಜನರು 108 ಭಾರಿ ಸೂರ್ಯ ನಮಸ್ಕಾರವನ್ನು ಮಾಡುವುದರ ಮೂಲಕ ರಥ ಸಪ್ತಮಿಯನ್ನು ಆಚರಣೆ ಮಾಡಿದರು.

Advertisement
Tags :
Advertisement