Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನೊಂದ ಜೀವಿಗಳಿಗೆ ಯೋಗ ಒಂದು ವರದಾನ : ಮಹದೇವಿ.ಎಂ. ಮರಕಟ್ಟಿ

08:38 PM Jun 22, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಜೂನ್.22 : ನೊಂದ ಜೀವಿಗಳಿಗೆ ಯೋಗ ಒಂದು ವರದಾನವಾಗಿದೆ. ಧ್ಯಾನಾಸಕ್ತ ಚಟುವಟಿಕೆಗಳು ಮನಸ್ಸಿಗೆ ಏಕಾಗ್ರತೆ, ನೆಮ್ಮದಿ, ಶಾಂತಿಯನ್ನು ನೀಡುತ್ತದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹದೇವಿ.ಎಂ. ಮರಕಟ್ಟಿ ತಿಳಿಸಿದರು.


ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹತ್ತು ದಿನಗಳ ಯೋಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Advertisement

ನಾಲ್ಕು ಗೋಡೆಗಳ ಬಂಧನದಿಂದ ಬೇಸತ್ತು ಕಾಲನೂಕುತ್ತಿರುವ ಖೈದಿ ಬಂಧುಗಳಿಗೆ ಗುಣಮಟ್ಟದ ಕೌಶಲ್ಯಾಧಾರಿತ ಉತ್ತಮ ಜೀವನಮೌಲ್ಯ ಬಿತ್ತುವ ಸರಳ ಆಸನಗಳ ಅಭ್ಯಾಸಗಳು ಮನಸ್ಸಿನ ಸದೃಢತೆಯನ್ನು ಗಟ್ಟಿಗೊಳಿಸುತ್ತವೆ. ಈ ಸಂದರ್ಭದಲ್ಲಿ ಪಡೆದ ಯೋಗ ತರಬೇತಿಯನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆಯಿತ್ತರು.

ಸಹಾಯಕ ಜೈಲರ್ ರಾಮಣ್ಣ ಹೇರ್‍ಕಲ್, ಶಿಕ್ಷಕ ಶ್ರೀರಾಮರೆಡ್ಡಿ ಹಾಗೂ ಮತ್ತಿತರ ಕಾರಾಗೃಹದ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ರಾಜ್ಯಾತ್ಸವ ಪ್ರಶಸ್ತಿ ಪುರಸ್ಕøತ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಮುರುಳಿ ನಿರ್ದೇಶನದಲ್ಲಿ ನೂರಕ್ಕೂ ಹೆಚ್ಚು ಖೈದಿ ಬಾಂಧವರು ಯೋಗಾಸನದ ಮಹತ್ವವನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು.

ಫೋಟೋ ಮತ್ತು ವರದಿ ಕೃಪೆ
ಕೆಪಿಎಂ ಗಣೇಶಯ್ಯ, ಚಿತ್ರದುರ್ಗ
ಮೊ: 9448664878

Advertisement
Tags :
bengaluruboonchitradurgaMahadevi.M. marakattisuddionesuddione newssufferingYogaಚಿತ್ರದುರ್ಗನೊಂದ ಜೀವಿಬೆಂಗಳೂರುಮಹದೇವಿ.ಎಂ. ಮರಕಟ್ಟಿಯೋಗವರದಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article