ಯಾದಗಿರಿಯ ಪಿ.ಎಸ್.ಐ. ಅನುಮಾನಾಸ್ಪ ಸಾವು : ಸಿ.ಬಿ.ಐ. ತನಿಖೆಗೆ ವಹಿಸಿ : ಕರುನಾಡ ವಿಜಯಸೇನೆ ಒತ್ತಾಯ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 03 : : ಯಾದಗಿರಿಯ ಪಿ.ಎಸ್.ಐ. ಪರಶುರಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದನ್ನು ಸಿ.ಬಿ.ಐ. ತನಿಖೆಗೆ ವಹಿಸುವಂತೆ ಕರುನಾಡ ವಿಜಯಸೇನೆಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಯಾದಗಿರಿ ಶಾಸಕ ಚೆನ್ನಾರೆಡ್ಡಿಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ಯಾದಗಿರಿ ಪೊಲೀಸ್ ಠಾಣೆಯಲ್ಲಿಯೇ ಮುಂದುವರೆಯಬೇಕಾದರೆ ಮೂವತ್ತು ಲಕ್ಷ ರೂ.ಗಳನ್ನು ನೀಡುವಂತೆ ಪದೆ ಪದೆ ನನ್ನ ಪತಿ ಪರಶುರಾಮ್‍ಗೆ ಹಿಂಸಿಸುತ್ತಿದ್ದರೆಂದು ಪತ್ನಿ ಶ್ವೇತಾ ರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ಕೇವಲ ಏಳು ತಿಂಗಳಲ್ಲಿ ಪರಶುರಾಮ್‍ರನ್ನು ಸಿ.ಇ.ಎನ್.ಪೊಲೀಸ್ ಠಾಣೆಗೆ ವರ್ಗಾಯಿಸಿ ಯಾದಗಿರಿಯಲ್ಲಿಯೇ ಮುಂದುವರೆಯಬೇಕಾದರೆ ಹಣ ನೀಡುವಂತೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ಹಣಕ್ಕೆ ಪೀಡಿಸುತ್ತಿದ್ದುದನ್ನು ನೋಡಿದರೆ ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಪರುಶುರಾಮ್‍ರವರ ಅನುಮಾನಾಸ್ಪದ ಸಾವನ್ನು ಸಿ.ಬಿ.ಐ.ಗೆ ವಹಿಸಿದರೆ ನಿಜಾಂಶ ಬಯಲಿಗೆ ಬರುತ್ತದೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ
ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನಿಸಾರ್, ನಾಗರಾಜ್, ಅಖಿಲೇಶ್, ಪ್ರದೀಪ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.