For the best experience, open
https://m.suddione.com
on your mobile browser.
Advertisement

ಕೀರ್ತಿ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ | ತಾಯಿಯ ಹಾಲು ಮಕ್ಕಳಿಗೆ ಅಮೃತಕ್ಕೆ ಸಮಾನ : ಡಾ. ಮಲ್ಲಿಕಾರ್ಜುನ ಕೀರ್ತಿ

11:36 AM Aug 06, 2024 IST | suddionenews
ಕೀರ್ತಿ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ   ತಾಯಿಯ ಹಾಲು ಮಕ್ಕಳಿಗೆ ಅಮೃತಕ್ಕೆ ಸಮಾನ   ಡಾ  ಮಲ್ಲಿಕಾರ್ಜುನ ಕೀರ್ತಿ
Advertisement

ಸುದ್ದಿಒನ್, ಚಿತ್ರದುರ್ಗ. ಆ.06:  ತಾಯಿ ಹಾಲು ಅಮೃತಕ್ಕೆ ಸಮಾನ ಮಗು ಜನಿಸಿದ ತಕ್ಷಣ ತಾಯಿಯ ಹಾಲನ್ನು ನೀಡಬೇಕು, ಹೊರಗಿನ ಹಾಲನ್ನು ಹಾಕದೆ ತಾಯಿ ಹಾಲನ್ನೇ ಅತಿ ಹೆಚ್ಚು ಹಾಕಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ಕೀರ್ತಿ ಆಸ್ಪತ್ರೆಯ ಮುಖ್ಯಸ್ಥರು ಡಾ. ಬಿ. ಮಲ್ಲಿಕಾರ್ಜುನ ಕೀರ್ತಿ ಅವರು ಹೇಳಿದರು.

Advertisement

ನಗರದ ಪ್ರತಿಷ್ಠಿತ ಕೀರ್ತಿ ಆಸ್ಪತ್ರೆಯಲ್ಲಿ ಭಾನುವಾರ (ಆಗಸ್ಟ್.04)  ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯ ಪಾನ ಸಪ್ತಾಹವನ್ನು ಡಾ.ಬಿ.ಮಲ್ಲಿಕಾರ್ಜುನ ಕೀರ್ತಿ ಅವರ ಮಾರ್ಗದರ್ಶನದಲ್ಲಿ ಆಚರಿಸಲಾಯಿತು.

Advertisement

ವಿಶ್ವ ಸ್ತನ್ಯಪಾನ ಸಪ್ತಾಹ 2024ರ ಘೋಷ ವಾಕ್ಯ 'ಕೊರತೆಗಳನ್ನು ಕೊನೆಗೊಳಿಸಿ ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ' ಎನ್ನುವ ಘೋಷವಾಕ್ಯದಂತೆ ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ಮಕ್ಕಳ ತಾಯಂದಿರಿಗೆ ಎದೆಯ ಹಾಲಿನ ಮಹತ್ವವನ್ನು ಸಾರಿದರು.

ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನರ್ಸ್‍ಗಳಿಗೆ
ರಸಪ್ರಶ್ನೆ, ರಂಗೋಲಿ ಬಿಡಿಸುವ, ಪೋಸ್ಟರ್ ಮತ್ತು ಗ್ರೀಟಿಂಗ್ ಕಾರ್ಡ್ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ, ಆಡಳಿತ ಮಂಡಳಿ ಮತ್ತು ಭಾಗವಹಿಸಿದ್ದ ಸ್ಪರ್ಧಿಗಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸ್ಪರ್ಧಾತ್ಮಕ ಕಾರ್ಯಕ್ರಮಕ್ಕೆ ಜಡ್ಜ್ ಗಳಾಗಿ ಡಾ. ಪೃಥ್ವೀಶ್, ಡಾ. ರಾಘವೇಂದ್ರ ಮತ್ತು ಡಾ. ಸ್ಮಿತಾ ಕೀರ್ತಿ, ಅವರು ಭಾಗವಹಿಸಿದ್ದರು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags :
Advertisement