Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೃತ ಕಟ್ಟಡ ಕಾರ್ಮಿಕ ರಮೇಶ್ ಕುಟುಂಬಕ್ಕೆ ನೆರವಾದ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ : ಐವತ್ತು ಸಾವಿರ ರೂ.ಗಳ ಪರಿಹಾರದ ಚೆಕ್ ವಿತರಣೆ

05:42 PM Jun 13, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ : ದಾವಣಗೆರೆ ಆಜಾದ್ ನಗರಕ್ಕೆ ಕೂಲಿ ಕೆಲಸಕ್ಕೆಂದು ಹೋಗಿ ಹೃದಯಾಘಾತದಿಂದ ಬುಧವಾರ ನಿಧನರಾದ ಗೋನೂರಿನ ಕಟ್ಟಡ ಕಾರ್ಮಿಕ ರಮೇಶ್ ಕುಟುಂಬಕ್ಕೆ ಮನೆ ಮಾಲೀಕರಿಂದ ಐವತ್ತು ಸಾವಿರ ರೂ.ಗಳ ಪರಿಹಾರದ ಚೆಕ್ ನೀಡಲಾಯಿತು.

Advertisement

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಪರಿಹಾರದ ಚೆಕ್ಕನ್ನು ಕಾರ್ಮಿಕ ರಮೇಶ್‍ರವರ ಪತ್ನಿ ಲಕ್ಷ್ಮಮ್ಮನಿಗೆ  ವಿತರಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ರಾಜ್ಯ ಉಪಾಧ್ಯಕ್ಷರುಗಳಾದ ಕೆ.ಗೌಸ್‍ಪೀರ್, ಎಂ.ಆರ್.ನರಸಿಂಹಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಖಜಾಂಚಿ ಡಿ.ಈಶ್ವರಪ್ಪ, ಗೋನೂರು ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್, ಸಂಘದ ನಿರ್ದೇಶಕರುಗಳಾದ ರಾಜಪ್ಪ, ನಿಂಗರಾಜು ಈ ಸಂದರ್ಭದಲ್ಲಿದ್ದರು.

Advertisement
Tags :
bengaluruchitradurgaconstruction worker RameshDistributing a compensationsuddionesuddione newsWorkers' Welfare Associationಐವತ್ತು ಸಾವಿರ ರೂ.ಕಟ್ಟಡ ಕಾರ್ಮಿಕಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಚಿತ್ರದುರ್ಗಪರಿಹಾರದ ಚೆಕ್ ವಿತರಣೆಬೆಂಗಳೂರುರಮೇಶ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article