For the best experience, open
https://m.suddione.com
on your mobile browser.
Advertisement

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮಹಿಳಾ ಕ್ರೀಡಾಕೂಟ : ಸಭೆಯಲ್ಲಿ ನಿರ್ಧಾರ

06:47 PM Sep 09, 2024 IST | suddionenews
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮಹಿಳಾ ಕ್ರೀಡಾಕೂಟ   ಸಭೆಯಲ್ಲಿ ನಿರ್ಧಾರ
Advertisement

ಸುದ್ದಿಒನ್, ಚಿತ್ರದುರ್ಗ, ಸೆ. 09 : ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಯುವ ಶರಣಸಂಸ್ಕøತಿ ಉತ್ಸವದಲ್ಲಿ ಮಹಿಳಾ ಕ್ರೀಡಾಕೂಟದಲ್ಲಿ ಸ್ಪೂನ್ ಅಂಡ್ ಲೆಮನ್, ಹಗ್ಗ-ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಥ್ರೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲು ಶ್ರೀಮಠದಲ್ಲಿಂದು ನಡೆದ ಮಹಿಳಾ ಕ್ರೀಡಾಕೂಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement
Advertisement

20-50 ವಯೋಮಾನದ ಮಹಿಳೆಯರು ಹಾಗೂ 50ರ ವಯೋಮಾನದ ನಂತರದ ಮಹಿಳೆಯರು ಪಾಲ್ಗೊಳ್ಳಬಹುದಾಗಿದ್ದು, ವಿಜೇತರಿಗೆ ಪ್ರಥಮ ಬಹುಮಾನ 3 ಸಾವಿರ ರೂ, ದ್ವಿತೀಯ ಬಹುಮಾನ 2 ಸಾವಿರ ರೂ. ಹಾಗು ತೃತೀಯ ಬಹುಮಾನ 1 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಕ್ರೀಡಾಸಕ್ತರು ಆಧಾರ್ ಕಾರ್ಡ್‌ ನೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Advertisement

ಕ್ರೀಡಾಕೂಟದ ಮಹಾಪೋಷಕರಾದ ಡಾ. ಬಸವ ಕುಮಾರ ಸ್ವಾಮಿಗಳು, ಡಾ. ಬಸವಪ್ರಭು ಸ್ವಾಮಿಗಳು, ಮಹಿಳಾ ಕ್ರೀಡಾಕೂಟದ ಅಧ್ಯಕ್ಷೆ ಶ್ರೀಮತಿ ರುದ್ರಾಣಿ ಗಂಗಾದರ್, ಶ್ರೀಮತಿ ದೇವಿಕುಮಾರಿ, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ಶ್ರೀಮತಿ ಆಶಾ ಹಾಲಪ್ಪನಾಯಕ, ಶ್ರೀಮತಿ ಪುಷ್ಪವಲ್ಲಿ, ಶ್ರೀಮತಿ ಸುಮಾ ರಾಜಶೇಖರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Advertisement
Tags :
Advertisement