Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಹಿಂಪಡೆಯಿರಿ : ಚಿತ್ರದುರ್ಗ ಟ್ರಕ್ ಅಸೋಸಿಯೇಷನ್ ಒತ್ತಾಯ

04:34 PM Jun 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 21 : ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಜಿಲ್ಲಾ ಟ್ರಕ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಪೆಟ್ರೋಲ್-ಡೀಸೆಲ್ ಬೆಲೆ ಜಾಸ್ತಿಯಾಗಿರುವುದರಿಂದ ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಾಗಿದ್ದು, ಲಾರಿ ಮಾಲೀಕರ ಜೀವನ ದುಸ್ತರವಾಗಿದೆ. ವಿಎಲ್‍ಟಿ ಮತ್ತು ಪ್ಯಾನಿಕ್ ಬಟನ್ ಹೊರೆಯೂ ಲಾರಿ ಮಾಲೀಕರ ಮೇಲೆ ಹೇರಿದಂತಾಗಿದೆ. ಇದೆಲ್ಲದರ ಪರಿಣಾಮ ಸಾಗಾಣಿಕೆ ವೆಚ್ಚವು ದುಬಾರಿಯಾಗುತ್ತದೆ.

ರಸ್ತೆ ತೆರಿಗೆಯ ಮೇಲೆ ಮೂರರಷ್ಟು ಸೆಸ್ ಜಾಸ್ತಿಯಾಗಿದೆ. ಎಲ್ಲಾ ಹೆಚ್ಚುವರಿಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಲಾರಿ ಉದ್ಯಮ ನಡೆಸುತ್ತಿರುವ ಡಿಮಾಂಡ್ ಅಂಡ್ ಸಪ್ಲೈನಲ್ಲಿ ಸಾಧ್ಯವಾಗುವುದಿಲ್ಲ. ಲಾರಿ ಮಾಲೀಕರು ವಿಮುಖರಾಗುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯುವಂತೆ ಜಿಲ್ಲಾ ಟ್ರಕ್ಕರ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ್ ಒತ್ತಾಯಿಸಿದರು.

ಉಪಾಧ್ಯಕ್ಷ ಸುರೇಶ್ ಸಿಂಗನಾಳ್, ಅಬ್ದುಲ್ ಸತ್ತಾರ್, ಸಂತೋಷ್, ಅನ್ವರ್ ಬಿ. ಎಂ.ಎಸ್.ನಸ್ರುಲ್ಲಾ, ಸಲೀಂ, ಮುಜೀಬ್ ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
bengaluruchitradurgaChitradurga Truck AssociationdemandsDieselPetrolPrice hikesuddionesuddione newsWithdrawಒತ್ತಾಯಚಿತ್ರದುರ್ಗಚಿತ್ರದುರ್ಗ ಟ್ರಕ್ ಅಸೋಸಿಯೇಷನ್ಡೀಸೆಲ್ಪೆಟ್ರೋಲ್ಬೆಂಗಳೂರುಬೆಲೆ ಹೆಚ್ಚಳಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article