ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಹಿಂಪಡೆಯಿರಿ : ಚಿತ್ರದುರ್ಗ ಟ್ರಕ್ ಅಸೋಸಿಯೇಷನ್ ಒತ್ತಾಯ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 21 : ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಜಿಲ್ಲಾ ಟ್ರಕ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪೆಟ್ರೋಲ್-ಡೀಸೆಲ್ ಬೆಲೆ ಜಾಸ್ತಿಯಾಗಿರುವುದರಿಂದ ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಾಗಿದ್ದು, ಲಾರಿ ಮಾಲೀಕರ ಜೀವನ ದುಸ್ತರವಾಗಿದೆ. ವಿಎಲ್‍ಟಿ ಮತ್ತು ಪ್ಯಾನಿಕ್ ಬಟನ್ ಹೊರೆಯೂ ಲಾರಿ ಮಾಲೀಕರ ಮೇಲೆ ಹೇರಿದಂತಾಗಿದೆ. ಇದೆಲ್ಲದರ ಪರಿಣಾಮ ಸಾಗಾಣಿಕೆ ವೆಚ್ಚವು ದುಬಾರಿಯಾಗುತ್ತದೆ.
ರಸ್ತೆ ತೆರಿಗೆಯ ಮೇಲೆ ಮೂರರಷ್ಟು ಸೆಸ್ ಜಾಸ್ತಿಯಾಗಿದೆ. ಎಲ್ಲಾ ಹೆಚ್ಚುವರಿಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಲಾರಿ ಉದ್ಯಮ ನಡೆಸುತ್ತಿರುವ ಡಿಮಾಂಡ್ ಅಂಡ್ ಸಪ್ಲೈನಲ್ಲಿ ಸಾಧ್ಯವಾಗುವುದಿಲ್ಲ. ಲಾರಿ ಮಾಲೀಕರು ವಿಮುಖರಾಗುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯುವಂತೆ ಜಿಲ್ಲಾ ಟ್ರಕ್ಕರ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ್ ಒತ್ತಾಯಿಸಿದರು.
ಉಪಾಧ್ಯಕ್ಷ ಸುರೇಶ್ ಸಿಂಗನಾಳ್, ಅಬ್ದುಲ್ ಸತ್ತಾರ್, ಸಂತೋಷ್, ಅನ್ವರ್ ಬಿ. ಎಂ.ಎಸ್.ನಸ್ರುಲ್ಲಾ, ಸಲೀಂ, ಮುಜೀಬ್ ಈ ಸಂದರ್ಭದಲ್ಲಿ ಹಾಜರಿದ್ದರು.