For the best experience, open
https://m.suddione.com
on your mobile browser.
Advertisement

ಶ್ರೀಗಳ ಸಹಕಾರದಿಂದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ಹರಿಯಿತು : ಶಾಸಕ ಡಾ.ಎಂ.ಚಂದ್ರಪ್ಪ

05:53 PM Sep 25, 2024 IST | suddionenews
ಶ್ರೀಗಳ ಸಹಕಾರದಿಂದ  ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ಹರಿಯಿತು   ಶಾಸಕ ಡಾ ಎಂ ಚಂದ್ರಪ್ಪ
Advertisement

ಸುದ್ದಿಒನ್, ಹೊಳಲ್ಕೆರೆ, ಸೆಪ್ಟೆಂಬರ್. 25 : ಸಾವಿರಾರು ಕೋಟಿ ರೂ.ಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

Advertisement

ಮುತ್ತುಗದೂರು ಸರ್ಕಲ್‍ನಲ್ಲಿ ನಡೆಯುತ್ತಿರುವ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32 ನೇ ಶ್ರದ್ದಾಂಜಲಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬಹಳಷ್ಟು ಸಲ ಸರ್ಕಾರ ಎಚ್ಚರಿಕೆ ಕೊಟ್ಟರು ಇಂಜಿನಿಯರ್, ಗುತ್ತಿಗೆದಾರರು ಕೆಲಸ ಮಾಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳು ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಇವರುಗಳು ಮುಖ್ಯಮಂತ್ರಿಗಳಾಗಿದ್ದಾಗ ಸಾಕಷ್ಟು ಒತ್ತಡ ತಂದ ಪರಿಣಾಮ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ತಾಲ್ಲೂಕಿನ ಮುತ್ತುಗದೂರು ಗ್ರಾಮದ ಕೆರೆಗೆ ನೀರು ಹರಿಯಲು ಸಾಧ್ಯವಾಯಿತು. ಜಿ.ಎಂ.ಸಿದ್ದೇಶ್ವರ್‍ರವರು ಕೇಂದ್ರ ಮಂತ್ರಿಯಾಗಿದ್ದಾಗ ಸಾಕಷ್ಟು ಹಣ ಮಂಜೂರು ಮಾಡಿಸಿದ್ದಾರೆಂದು ಹೇಳಿದರು.

Advertisement

ರೈತರು, ಜನಸಾಮಾನ್ಯರ ಬಗ್ಗೆ ಅಪಾರವಾದ ಕಾಳಜಿಯಿಟ್ಟುಕೊಂಡಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಾಲ ಕಾಲಕ್ಕೆ ಇಂಜಿನಿಯರ್, ಗುತ್ತಿಗೆದಾರರುಗಳಿಗೆ ಎಚ್ಚರಿಕೆ ನೀಡುತ್ತ ಬಂದ ಪರಿಣಾಮ ಮುತ್ತುಗದೂರು ಗ್ರಾಮದ ಕೆರೆಗೆ ನೀರು ಬರುತ್ತಿದೆ. 2019 ರಲ್ಲಿ ಭರಮಸಾಗರ ಏತ ನೀರಾವರಿಗೆ 680 ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೆ. ಮೂರು ವರ್ಷಗಳಲ್ಲಿ ನಲವತ್ತು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಸಾಸಲು ಸರ್ಕಲ್‍ನಿಂದ ಹಿರೇಬೆನ್ನೂರು ಸರ್ಕಲ್‍ವರೆಗೆ 105 ಕೋಟಿ ರೂ.ಗಳಲ್ಲಿ ಕಾಂಕ್ರಿಟ್ ರಸ್ತೆಯಾಗಿದೆ. ಹಳ್ಳಕ್ಕೆ ಬ್ರಿಡ್ಜ್ ನಿರ್ಮಿಸಲು ಯಾರಾದರೂ ಜಾಗ ಕೊಟ್ಟರೆ ಹತ್ತು ಕೋಟಿ ರೂ.ಗಳಾಗಲಿ ಕಾಮಗಾರಿಗೆ ಆರಂಭಿಸುತ್ತೇನೆ.

ಸಾಸಲು ಸರ್ಕಲ್‍ನಿಂದ ರುದ್ರಪ್ಪ ಪೆಟ್ರೋಲ್ ಬಂಕ್‍ವರೆಗೆ ರಸ್ತೆಗೆ ಆರು ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇನೆ. ಭೂತಪ್ಪನ ದೇವಸ್ಥಾನದ ಹತ್ತಿರ ಫ್ಲೈ ಓವರ್‍ಗೆ 34 ಕೋಟಿ ರೂ.ಗಳನ್ನು ಕೊಟ್ಟಿದ್ದೇನೆಂದರು.

ಶಾಂತಿವನ ವಿಶ್ರಾಂತಿ ಧಾಮದವರೆಗೆ ಸಿ.ಸಿ.ರಸ್ತೆ ಮಾಡಿಸುತ್ತೇನೆ. ಅಲ್ಲಿ ಬಿಲ್ಡಿಂಗ್ ಕಟ್ಟಲು ಹಣ ಮಂಜೂರು ಮಾಡಿಸುವೆ. ಮುತ್ತುಗದೂರು ಕೆರೆಗೆ ಎಸ್ಟಿಮೇಷನ್ ಮಾಡಿಸಿಕೊಟ್ಟರೆ ಹಣ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಲಾಗುವುದು. ಭರಮಸಾಗರ ಕೆರೆ ಮಧ್ಯೆ ನೀರು ಉಕ್ಕಿ ಹರಿಯುತ್ತಿರುವುದನ್ನು ಕಂಡು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪುಳಕಿತರಾದರು ಎಂದು ಡಾ.ಎಂ.ಚಂದ್ರಪ್ಪ ನುಡಿದರು.

ದಾವಣಗೆರೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಪುಟ್ಟಣ್ಣ, ರುದ್ರಣ್ಣ, ನಾಗರಾಜ್, ಕೃಷ್ಣಪ್ರಸಾದ್, ಶಶಿಪಾಟೀಲ್ ಮತ್ತಿತರ ಪ್ರಮುಖರು ಶ್ರದ್ದಾಂಜಲಿ ಸಮಾರಂಭದಲ್ಲಿ ಭಾಗವಹಿಸಿದ್ದರು.

Tags :
Advertisement