For the best experience, open
https://m.suddione.com
on your mobile browser.
Advertisement

ಜ್ಞಾನ ಸಿಗದ ಶಿಕ್ಷಣದಿಂದ ಏನು ಪ್ರಯೋಜನವಿಲ್ಲ : ಡಾ.ಸಿ.ಸೋಮಶೇಖರ್

05:42 PM Mar 19, 2024 IST | suddionenews
ಜ್ಞಾನ ಸಿಗದ ಶಿಕ್ಷಣದಿಂದ ಏನು ಪ್ರಯೋಜನವಿಲ್ಲ   ಡಾ ಸಿ ಸೋಮಶೇಖರ್
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.19  : ಸ್ಪರ್ಧಾತ್ಮಕ ಯುಗದಲ್ಲಿ ಸ್ವಾವಲಂಭಿಯಾಗಿ ಜೀವಿಸುವಂತ ಶಿಕ್ಷಣ ಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.

Advertisement

ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ, ಪ್ರಥಮ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಿ.ಇ.ಡಿ. ವಿಶೇಷವಾದ ಕೋರ್ಸ್. ಮಕ್ಕಳ ಬದುಕನ್ನು ರೂಪಿಸುವ ಶಕ್ತಿ ನಿಮ್ಮಲ್ಲಿರಬೇಕು. ಶಿಕ್ಷಕ ಕೆಲಸವೆಂದರೆ ಅನನ್ಯ. ತೃಪ್ತಿ ನೀಡಬೇಕು. ವಿದ್ಯೆ ಅನ್ನ ಕೊಡುವುದರ ಜೊತೆಗೆ ಅಂತರ್ ವೀಕ್ಷಣೆಯ ಆವಿಷ್ಕಾರವಾಗಬೇಕು. ಶಿಕ್ಷಣದಿಂದ ಮಾತ್ರ ಮನುಷ್ಯ ಚಾರಿತ್ರ್ಯವಂತ, ಶೀಲವಂತನಾಗಬಹುದು. ಜ್ಞಾನ ಸಿಗದ ಶಿಕ್ಷಣದಿಂದ ಏನು ಪ್ರಯೋಜನವಿಲ್ಲ. ಶಿಕ್ಷಣದಿಂದ ಜೀವನದಲ್ಲಿ ಶಿಸ್ತು ಕಲಿಯಬಹುದು ಎಂದು ಹೇಳಿದರು.

ಶಿಕ್ಷಣದ ನಂತರ ನೀವುಗಳು ಎಷ್ಟೆ ಎತ್ತರಕ್ಕೆ ಹೋದರು ಚಿಕ್ಕಂದಿನಿಂದ ನಿಮ್ಮನ್ನು ಸಾಕಿ ಸಲಹಿದೆ ತಂದೆ-ತಾಯಿಗಳನ್ನು ಮರೆಯಬೇಡಿ. ಶಿಕ್ಷಕರಲ್ಲಿ ಪ್ರತಿಭೆಯಿರಬೇಕು. ಏಕೆಂದರೆ ಈಗಿನ ಮಕ್ಕಳಲ್ಲಿ ಅಗಾಧವಾಗಿ ಬುದ್ದಿವಂತಿಕೆಯಿರುತ್ತದೆ. ಪದವಿ ಪಡೆಯುವುದು ಮುಖ್ಯವಲ್ಲ. ಸಾಮಾನ್ಯ ಜ್ಞಾನವಿರಬೇಕು. ಆದರ್ಶ ಶಿಕ್ಷಕನಿಂದ ಮಾತ್ರ ಸಮಾಜದಲ್ಲಿ ಆದರ್ಶ ಮಕ್ಕಳನ್ನು ರೂಪಿಸಲು ಸಾಧ್ಯ. ಬದುಕಿಗೆ ನಂಬಿಕೆ ಮುಖ್ಯ. ಕತ್ತಲನ್ನು ನಿವಾರಿಸುವುದು ನಿಜವಾದ ಶಿಕ್ಷಣ. ಬಿ.ಇ.ಡಿ. ಮುಗಿದ ಮೇಲೆ ಶಿಕ್ಷಕರೆ ಆಗಬೇಕೆಂದೇನು ಇಲ್ಲ. ಕೆ.ಎ.ಎಸ್. ಐ.ಎ.ಎಸ್. ಪರೀಕ್ಷೆಗಳನ್ನು ಬರೆದು ಉನ್ನತ ಮಟ್ಟದ ಅಧಿಕಾರಿಯಾಗುವ ಅವಕಾಶಗಳಿವೆ. ಸದುಪಯೋಗಪಡಿಸಿಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಶಿಕ್ಷಣ ನಿಕಾಯ ಮುಖ್ಯಸ್ಥರು ದಾವಣಗೆರೆ ವಿಶ್ವವಿದ್ಯಾನಿಲಯದ ಡಾ.ಕೆ.ವೆಂಕಟೇಶ್ ಮಾತನಾಡಿ ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭವಲ್ಲ. ಸರ್ಕಾರ, ಸಮಾಜ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರುಗಳ ಪಾತ್ರ ಮುಖ್ಯ. ಹತ್ತು ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಕೆ.ಎಂ.ವೀರೇಶ್‍ರವರ ಸಾಧನೆ ಅಪಾರ. ಶಿಕ್ಷಣ ಕ್ಷೇತ್ರದಲ್ಲಿನ ಇವರ ಸೇವೆಯನ್ನು ಗುರುತಿಸಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಅವರ ಶ್ರಮಕ್ಕೆ ತಕ್ಕ ಪುರಸ್ಕಾರ ಎಂದು ಗುಣಗಾನ ಮಾಡಿದರು.

ಮಗುವಿನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹೊರ ತೆಗೆಯುವ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ. ಬಿ.ಇ.ಡಿ. ಶ್ರೇಷ್ಠವಾದುದು. ಶಿಕ್ಷಕರುಗಳಿಗೆ ಬೇಕಾದ ಕೌಶಲ್ಯವನ್ನು ಬಿ.ಇ.ಡಿ.ಕಲಿಸಿ ಆತ್ಮವಿಶ್ವಾಸ ಮೂಡಿಸುತ್ತದೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಬೇಕಾಗಿದೆ ಎಂದರು.
ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರಶ್ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್, ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ.ಚೇತನ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಂಶುಪಾಲರಾದ ಪ್ರೊ.ಹೆಚ್.ಎನ್.ಶಿವಕುಮಾರ್, ನಿವೃತ್ತ ಸಾರಿಗೆ ಅಧಿಕಾರಿ ಹಂಪಯ್ಯ, ಹೊನ್ನಲಿಂಗಯ್ಯ ವೇದಿಕೆಯಲ್ಲಿದ್ದರು.

Tags :
Advertisement