Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಒನಕೆ ಓಬವ್ವ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಇಡುವ ಅಗತ್ಯವೇನಿದೆ ? ಬಸವನಾಗಿದೇವಸ್ವಾಮಿ ಗರಂ

04:42 PM Dec 25, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.25 : ಒನಕೆ ಓಬವ್ವ ವೃತ್ತದಲ್ಲಿ ರಾತ್ರೋರಾತ್ರಿ ಕೆಲವು ಕಿಡಿಗೇಡಿಗಳು ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಇರಿಸುವ ಅಗತ್ಯವಾದರೂ ಏನಿತ್ತು ಎಂದು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಪ್ರಶ್ನಿಸಿದರು.?

Advertisement

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹನ್ನೆರಡನೆ ಶತಮಾನದ ಕ್ರಾಂತಿಕಾರಿ ಬಸವಣ್ಣನವರಿಗೆ ವೀರಶೈವ-ಲಿಂಗಾಯಿತರೆ ಅವಮಾನ ಮಾಡುವಂತೆ ಕಾಣುತ್ತಿದೆ. ಬಸವಣ್ಣನವರ ಜೊತೆ ರೇವಣಸಿದ್ದ, ರೇಣುಕಾಚಾರ್ಯರಿಗೂ ಅಪಮಾನ ಮಾಡಲು ಹೊರಟಿದ್ದಾರೆ. ಹೀನಾಯ, ದುರ್ಬಲ ಮನಸ್ಥಿತಿಯುಳ್ಳವರಿಂದ ಮಾತ್ರ ಇಂತಹ ಹೀನ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.

ದೂರದೃಷ್ಟಿಯಿಲ್ಲದವರಿಗೆ ಬಸವಣ್ಣನವರ ಪ್ರತಿಮೆಯನ್ನು ಒನಕೆ ಓಬವ್ವ ವೃತ್ತದಲ್ಲಿರುವ ಹೈಮಾಸ್ಟ್ ದೀಪದ ವೃತ್ತದಲ್ಲಿ ಇಡುವ ಅನಿವಾರ್ಯತೆಯೇನು? 450 ವರ್ಷಗಳ ಇತಿಹಾಸವಿರುವ ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವಳ ನಾಡಿನಲ್ಲಿ ಇಂತಹ ಹೇಯ ಕೃತ್ಯ ಬೇಡ ಎಂದು ಕಿಡಿಕಾರಿದರು.

ನಗರಸಭೆ ಮಾಜಿ ಅಧ್ಯಕ್ಷ ಛಲವಾದಿ ಸಮಾಜದ ಮುಖಂಡ ಹೆಚ್.ಸಿ.ನಿರಂಜನಮೂರ್ತಿ ಮಾತನಾಡುತ್ತ ಸರ್ಕಾರದಿಂದಲೇ ಪ್ರತಿಷ್ಠಾಪಿಸಲ್ಪಟ್ಟಿರುವ ಒನಕೆ ಓಬವ್ವ ವೃತ್ತದಲಿ ರಾತ್ರೋರಾತ್ರಿ ಕಳ್ಳರಂತೆ ವಿಶ್ವಗುರು ಬಸವಣ್ಣನವರ ಪುಟ್ಟ ಪ್ರತಿಮೆ ಇರಿಸುವ ಅಗತ್ಯವಾದರೂ ಏನು? ಬಸವಣ್ಣನವರ ಪ್ರತಿಮೆಯಿಡಲು ನಮ್ಮದೇನು ಅಭ್ಯಂತರವಿಲ್ಲ. ಎಲ್ಲರನ್ನು ಜೊತೆಗೆ ಸೇರಿಸಿಕೊಂಡು ಬೇರೆ ಎಲ್ಲಿಯಾದರೂ ಬಸವಣ್ಣನವರ ಅದ್ಬುತವಾದ ಪ್ರತಿಮೆ ನಿರ್ಮಾಣ ಮಾಡಲಿ ಎಂದು ಸಲಹೆ ನೀಡಿದರು.

ಅಧಿಕೃತವಾಗಿ ಘೋಷಣೆಯಾಗಿರುವ ಒನಕೆ ಓಬವ್ವ ವೃತ್ತದಲ್ಲಿ ಬಸವಣ್ಣವರ ಪ್ರತಿಮೆ ಅವಶ್ಯಕತೆಯಿದೆಯೇ? ಇದು ಬಸವಣ್ಣನವರಿಗೆ ಎಸಗುತ್ತಿರುವ ಅವಮಾನ. ಇಂತಹ ಕಿಡಿಗೇಡಿ ಕೃತ್ಯ ಇನ್ನು ಮುಂದೆ ನಡೆಯಬಾರದು. ಒಂದು ವೇಳೆ ಅಲ್ಲಿ ಬಸವಣ್ಣನ ಪ್ರತಿಮೆ ಇರಿಸಿದರೆ ಛಲವಾದಿ ಜನಾಂಗದಿಂದ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.

ಶಾರದಾ ಬ್ರಾಸ್‍ಬ್ಯಾಂಡ್‍ನ ಗುರುಮೂರ್ತಿ ಮಾತನಾಡಿ ಕಾನ್ವೆಂಟ್ ಶಾಲೆ ಬಳಿಯಿರುವ ತಿಪ್ಪರ್ಜಿ ಸರ್ಕಲ್‍ಗೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿ ಬಸವಣ್ಣನವರ ಪ್ರತಿಮೆ ಕೂರಿಸಲಿ ಎಂದು ಕಿಡಿಗೇಡಿಗಳ ಕೃತ್ಯಕ್ಕೆ ತಿರುಗೇಟು ನೀಡಿದರು.

ಛಲವಾದಿ ಜನಾಂಗದ ಜಿಲ್ಲಾಧ್ಯಕ್ಷ ಶೇಷಪ್ಪ, ಹೆಚ್.ಅಣ್ಣಪ್ಪಸ್ವಾಮಿ, ಪ್ರಸನ್ನಕುಮಾರ್, ಧನಂಜಯ, ರವೀಂದ್ರ, ಜೈರಾಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Tags :
Basavanagidevaswamyobavva circleVishwaguru Basavanna's statueಒನಕೆ ಓಬವ್ವ ವೃತ್ತಗರಂಚಿತ್ರದುರ್ಗಬಸವನಾಗಿದೇವಸ್ವಾಮಿವಿಶ್ವಗುರು ಬಸವಣ್ಣನವರ ಪ್ರತಿಮೆ
Advertisement
Next Article