Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾಟಕಗಳನ್ನು ವೀಕ್ಷಿಸಿ ರಂಗಭೂಮಿ ಕಲಾವಿದರನ್ನು ಉಳಿಸಿ, ಬೆಳೆಸಿ : ಕೆ.ಎಂ.ವೀರೇಶ್

05:49 PM Oct 03, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 03 : ನಾಟಕಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ರಂಗಕಲಾವಿದರ ಬದುಕು ಕಷ್ಟದಲ್ಲಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ವಿಷಾಧಿಸಿದರು.

Advertisement

ಪದ್ಮಭೂಷಣ ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರ ಹದಿನಾಲ್ಕನೆ ಪುಣ್ಯಸ್ಮರಣೋತ್ಸವ ಅಂಗವಾಗಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕಂದಗಲ್ಲು ಹನುಮಂತರಾಯ ಕಲಾ ಸಂಘ ಸೂಲದ ಹಳ್ಳಿ ಇವರ ನೇತೃತ್ವದಲ್ಲಿ ಚಳ್ಳಕೆರೆಯ ರಂಗಭಾರತಿ ಸಾಂಸ್ಕøತಿಕ ಕಲಾ ಸಂಘದಿಂದ ತ.ರಾ.ಸು.ರಂಗಮಂದಿರದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ಕುರುಕ್ಷೇತ್ರ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಟಿ.ವಿ. ಮೊಬೈಲ್, ವಾಟ್ಸ್‍ಪ್, ಫೇಸ್‍ಬುಕ್‍ಗಳ ಹಾವಳಿಯಿಂದ ರಂಗಭೂಮಿ ನಶಿಸುತ್ತಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸಬೇಕಿದೆ ಎಂದು ಮನವಿ ಮಾಡಿದರು.

ಮುರುಘರಾಜೇಂದ್ರ ಮಠದ ಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನ್ಯಾಯವಾದಿ ಸಿ.ಶಿವುಯಾದವ್, ಜಾನಪದ ಹಾಡುಗಾರ ಹರೀಶ್, ಜಂಬುನಾಥ್, ಹಾರ್ಮೋನಿಯಂ ಮಾಸ್ತರ್ ಕೆ.ತಿಪ್ಪೇಸ್ವಾಮಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.

ಶ್ರೀಕೃಷ್ಣನ ಪಾತ್ರದಲ್ಲಿ ಟಿ.ತಿಪ್ಪೇಸ್ವಾಮಿ, ಧರ್ಮರಾಯನ ಪಾತ್ರದಲ್ಲಿ ಜಿ.ತಿಮ್ಮಾರೆಡ್ಡಿ, ಭೀಮನಾಗಿ ಎಂ.ಜಿ.ಬೋರಯ್ಯ, ದುರ್ಯೋಧನ ಹೆಚ್.ಗಂಗಾಧರಪ್ಪ, ಶಕುನಿ ಪಾತ್ರದಲ್ಲಿ ಟಿ.ಚನ್ನಕೇಶವ, ಅರ್ಜುನನಾಗಿ ವಿ.ಶಿವನಪ್ಪ, ಕರ್ಣನಾಗಿ ಬಿ.ಗೋವಿಂದರಾಜು, ದುಶ್ಯಾಸನ ಎಸ್.ಪಿ.ಸುಧೀರ್, ಅಭಿಮನ್ಯು ಪಿ.ರಾಜಣ್ಣ, ಅಶ್ವಥಾಮನಾಗಿ
ಪಿ.ರಾಜಣ್ಣ, ಸಾಲುಮನೆ ಬೊಮ್ಮಯ್ಯ ವಿಧುರ, ವಿ.ಯಶವಂತಪ್ಪ ದ್ರೋಣ, ರುದ್ರಮುನಿ ಭೀಷ್ಮ, ದೃತರಾಷ್ಟ್ರನಾಗಿ ಹನುಮಂತಪ್ಪ, ಲೋಕೇಶ್ ಶಿಖಂಡಿ, ಶ್ರೀಮತಿ ಲಕ್ಷ್ಮಿ ಶ್ರೀಧರ್ ದ್ರೌಪದಿ, ಕುಂತಿ, ಗಾಂಧಾರಿ, ಮಂಜುಶ್ರಿ ರುಕ್ಮಿಣಿ/ಉತ್ತರೆ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದರು.

Advertisement
Tags :
bengaluruchitradurgasuddionesuddione newsಉಳಿಸಿಕೆ.ಎಂ.ವೀರೇಶ್ಚಿತ್ರದುರ್ಗನಾಟಕಬೆಂಗಳೂರುಬೆಳೆಸಿರಂಗಭೂಮಿ ಕಲಾವಿದರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article