For the best experience, open
https://m.suddione.com
on your mobile browser.
Advertisement

ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಯವರಿಗೆ ಮತ ನೀಡಿ : ಕೆ.ಎಸ್.ನವೀನ್ ಮನವಿ

05:26 PM Jun 01, 2024 IST | suddionenews
ಬಿಜೆಪಿ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿಯವರಿಗೆ ಮತ ನೀಡಿ   ಕೆ ಎಸ್ ನವೀನ್ ಮನವಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜೂ. 01:  ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿಯನ್ನು ತೋರದೆ ವಿವಿಧ ರೀತಿಯಾ ಆದೇಶಗಳನ್ನು ಜಾರಿ ಮಾಡುವುದರ ಮೂಲಕ ಮಕ್ಕಳು ಮತ್ತು ಶಿಕ್ಷಕರಿಗೆ ಹೊರೆಯಾಗಿದೆ ಇದನ್ನು ತಪ್ಪಿಸಲು ಪರಿಷತ್‌ನಲ್ಲಿ ಬಿಜೆಪಿಯ ಸಂಖ್ಯಾ ಬಲ ಹೆಚ್ಚಾಗಿರಬೇಕು.

Advertisement

ಈ ಹಿನ್ನಲೆಯಲ್ಲಿ ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಯವರಿಗೆ ಮತವನ್ನು ಹಾಕುವಂತೆ ಮತದಾರರಿಗೆ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮನವಿ ಮಾಡಿದರು.

Advertisement
Advertisement

ಅಗ್ನೇಯ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರವಾಗಿ ನಗರದ ಹೊಳಲ್ಕೆರೆ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಸಂಪಿಗೆ ಹೈಸ್ಕೂಲ್ ನಂತರ ಬರಗೇರಮ್ಮ ಶಾಲೆ, ಜ್ಞಾನಭಾರತಿ ಶಾಲೆ ಹಾಗೂ  ಎಸ್ ಜೆ ಎಂ ಕಾಲೇಜುಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ಕೇಂದ್ರ ಸರ್ಕಾರ ದೇಶದಲ್ಲಿ ಎನ್.ಇ.ಪಿ.ಯನ್ನು ಜಾರಿ ಮಾಡಲು ಹೊರಟಿದೆ ಇದರಿಂದ ಈಗ ಅಲ್ಲದಿದ್ದರೂ ನಮ್ಮ ಮುಂದಿನ ಪೀಳೀಗೆಗೆ ಇದರ ಪ್ರಯೋಜನ ದೊರಕಲಿದೆ. ಅದರೆ ರಾಜ್ಯ ಸರ್ಕಾರ ಇದನ್ನು ವಿರೋಧಿಸುತ್ತಿದೆ.

ಇದರ ಬದಲಿಗೆ ಎಸ್.ಇ.ಪಿ.ಯನ್ನು ಜಾರಿ ಮಾಡಲು ಮುಂದಾಗಿದ್ದು ಕಾಂಗ್ರೆಸ್ ಸರ್ಕಾರ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಕಾನೂನುಗಳನ್ನು ಮಾಡಿ ಪರಿಷತ್‌ಗೆ ಕಳುಹಿಸುತ್ತಾರೆ ಇಲ್ಲಿ ನಮ್ಮ ಬಿಜೆಪಿಯ ಸಂಖ್ಯೆ ಹೆಚ್ಚಾಗಿದ್ದರೆ ಅದು ಸರಿಯಾಗಿ ಇದ್ದರೆ ಪಾಸು ಮಾಡಬಹುದು ಆದರೆ ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗ ಅದನ್ನು ತಿರಸ್ಕರಿಸಬಹುದು ಇದಕ್ಕೆ ನಮ್ಮ ಸಂಖ್ಯಾ ಬಲ ಹೆಚ್ಚಾಗಿರಬೇಕಿದೆ ಇದರ ಬದಲು ಕಾಂಗ್ರೆಸ್ ಪಕ್ಷದ ಬಳ ಹೆಚ್ಚಾಗಿದ್ದರೆ ಅದು ಪಾಸಾಗುತ್ತದೆ ಇದರಿಂದ ಮುಂದೆ ಮಕ್ಕಳು ಮತ್ತ ಶಿಕ್ಷಕರಿಗೆ ತೊಂದರೆಯಾಗುತ್ತಿದೆ.

ಈ ಹಿನ್ನಲೆಯಲ್ಲಿ ನಿಮ್ಮ ಸಹಾಯ ಅಗತ್ಯವಿದೆ ಎಂದ ಅವರು, ನಾರಾಯಣಸ್ವಾಮಿಯವರು ಕಳೆದ ಮೂರು ಬಾರಿ ಶಾಸಕರಾಗಿ ಉತ್ತಮವಾಗಿ ಕೆಲಸವನ್ನು ಮಾಡಿದ್ದಾರೆ ಇದರ ಬಗ್ಗೆ ನಿಮಗೂ ಸಹಾ ತಿಳಿದಿದೆ. ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಮುಂದೆಯೂ ಸಹಾ ನಿಮ್ಮ ಸೇವೆ ಮಾಡಬೇಕಾದರೆ ನಾರಾಯಣಸ್ವಾಮಿಯವರನ್ನು ಬೆಂಬಲಿಸಿ ಚುನಾವಣೆಯಲ್ಲಿ ಅವರಿಗೆ ಮತವನ್ನು ಹಾಕಬೇಕಿದೆ ಬೇರೆಯವರಿಂದಲೂ ಸಹಾ ಹಾಕಿಸಿ ಎಂದು ನವೀನ್ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಚಿತ್ರದುರ್ಗ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೈಲಜ ರೆಡ್ಡಿ, ವಕ್ತಾರರಾದ ನಾಗರಾಜ್ ಬೇದ್ರೇ, ನವೀನ ಚಾಲುಕ್ಯ, ಮಂಜುಳಮ್ಮ, ಬಸಮ್ಮ, ನಗರಸಭಾ ಸದಸ್ಯರಾದ ಹರೀಶ್, ಮಾಧುರಿ ಗೀರಿಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
Advertisement