Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದುರ್ಗೋತ್ಸವ ಆಚರಿಸದಿದ್ದರೆ ಉಗ್ರ ಹೋರಾಟ : ಕೆ.ಟಿ.ಶಿವಕುಮಾರ್ ಎಚ್ಚರಿಕೆ

04:04 PM Oct 10, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ :  ಸುರೇಶ್ ಪಟ್ಟಣ್,            ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಅಕ್ಟೋಬರ್.10 : ಬರುವ ಡಿಸೆಂಬರ್ ತಿಂಗಳೊಳಗೆ ದುರ್ಗೋತ್ಸವವನ್ನು ಮಾಡದೇ ಇದ್ದರೆ ನಮ್ಮ ಸಂಘಟನೆಯಿಂದ ಉಗ್ರವಾದ ಹೋರಾಟ ಮಾಡಲಾಗುವುದೆಂದು ಜಿಲ್ಲಾಡಳಿತಕ್ಕೆ ಕರುನಾಡ ವಿಜಯಸೇನೆಯ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದುರ್ಗೋತ್ಸವ ಕಾರ್ಯಕ್ರಮ ನಡೆಸುವುದು ಜಿಲ್ಲೆಯ ಪ್ರತಿನಿಧಿಗಳಿಗೆ ಸ್ವಾಭಿಮಾನ ಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ಅಸಡ್ಡೆ ವರ್ತನೆ ತೋರಿಸುತ್ತಿದ್ದಾರೆ.ನಿನ್ನೆ ಕಿತ್ತೂರು ಉತ್ಸವದ ರಥಯಾತ್ರೆ ಜಿಲ್ಲೆಗೆ ಆಗಮಿಸಿದಾಗ ಜಿಲ್ಲಾಡಳಿತ ಸ್ವಾಗತಿಸಿ ಬೀಳ್ಕೊಡುಗೆ ಮಾಡಿದ್ದು ಸಂತೋಷದ ವಿಷಯ.. ಆದರೆ ಜಿಲ್ಲೆಯ ದುರ್ಗೋತ್ಸವವನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಹೆಚ್.ಆಂಜನೇಯರವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ದುರ್ಗೋತ್ಸವ ಕಾರ್ಯಕ್ರಮ ನಡೆದಿದ್ದು ಅಲ್ಲಿಂದ ಇಲ್ಲಿಯವರೆಗೆ ನಡೆದೇ ಇಲ್ಲ.ನಾವು ಈ ಬಗ್ಗೆ ಹೋರಾಟ ಮಾಡಿ ಮನವಿಯನ್ನು ಸಲ್ಲಿಸಿದರು ಸಹ ಇಲ್ಲಿವರೆಗೂ ಯಾವುದೇ ಉತ್ತರ ಬಂದಿಲ್ಲ. ಕೋಟೆಯನ್ನಾಗಿದ ಮದಕರಿ ನಾಯಕರು ಹಿಂದುಳಿದ ಸಮುದಾಯದ ನಾಯಕನ ದೃಷ್ಟಿಯಿಂದ ನೀವು ದುರ್ಗೋತ್ಸವ ಮಾಡಲಿಕ್ಕೆ ಹಿಂಜರಿಯುತ್ತಿರಬಹುದು ಎಂದು ದೂರಿದರು.

ಕರ್ನಾಟಕ ಸರ್ಕಾರದಿಂದ ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು ಉತ್ಸವ, ಕಿತ್ತೂರು ಉತ್ಸವ ಈ ರೀತಿ ಕೆಲವು ಜಿಲ್ಲೆಗಳಲ್ಲಿ ಇತಿಹಾಸವುಳ್ಳ ಹೆಸರುಗಳ ಮೇಲೆ ಉತ್ಸವಗಳನ್ನು ಆಚರಿಸುತ್ತಾ ಬಂದಿರುತ್ತದೆ. ಆದರೆ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿನ ದುಗೋತ್ಸವವನ್ನು ಆಚರಣೆ ಮಾಡಲು ಮಾತ್ರ ಯಾವ ಚುನಾಯಿತ ಪ್ರತಿನಿಧಿಯೂ ಸಹಾ ಮುಂದೆ ಬಾರದಿರುವುದು ನಮ್ಮ ಜಿಲ್ಲೆಯ ದುರಂತವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಯಾವುದೇ ರೀತಿಯಲ್ಲಿ ಅಪಮಾನ.. ಅವಮಾನ ಆಗುವುದಕ್ಕೆ ನಾವು ಬಿಡುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಗೋಷ್ಟಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ನಿಸಾರ್, ಅವಿನಾಶ್, ಮುಜಾವಿಲ್ಲಾ ಭಾಗವಹಿಸಿದ್ದರು.

Advertisement
Tags :
bengalurucelebratedchitradurgaDurgotsavaKT Shivakumarstrugglesuddionesuddione newsviolentwarnsಆಚರಣೆಉಗ್ರ ಹೋರಾಟಎಚ್ಚರಿಕೆಕೆ.ಟ.ಶಿವಕುಮಾರ್ಚಿತ್ರದುರ್ಗದುರ್ಗೋತ್ಸವಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article