Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪಾಳೆಯಗಾರರನ್ನು ನಿರ್ಲಕ್ಷಿಸಿದ್ದಕ್ಕೆ ವಿಜಯನಗರ ಸಾಮ್ರಾಜ್ಯ ಪಥನ : ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್

04:15 PM Jul 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 01 : ಮದಕರಿ ಎನ್ನುವ ಹೆಸರಿಗೆ ಶಕ್ತಿ ತುಂಬಿದ ರಾಜವೀರ ಮದಕರಿನಾಯಕ ಮಠಮಾನ್ಯಗಳನ್ನು ಬೆಳೆಸಿ ದಾನ ದತ್ತಿಗಳನ್ನು ಸಮರ್ಪಿಸಿದ್ದಾರೆಂದು ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್ ಸ್ಮರಿಸಿದರು.

Advertisement

ನಾಯಕ ಸಮಾಜದಿಂದ ತ.ರಾ.ಸು. ರಂಗಮಂದಿರದಲ್ಲಿ ಸೋಮವಾರ ನಡೆದ ರಾಜಾವೀರ ಮದಕರಿನಾಯಕನ 270 ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಉಪನ್ಯಾಸ ನೀಡಿದ ಅವರು ಚಿತ್ರದುರ್ಗಕ್ಕೆ ತನ್ನದೆ ಆದ ಇತಿಹಾಸ, ಸಾಂಸ್ಕøತಿಕ ಪರಂಪರೆಯಿದೆ ಎಂದರೆ ಅದಕ್ಕೆ ಕೋಟೆ ಆಳಿದ ಪಾಳೆಯಗಾರರು ಕಾರಣ.

ಕದಂಬರು, ಶಾತವಾಹನರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು ಇಲ್ಲಿ ಆಳ್ವಿಕೆ ನಡೆಸಿದ್ದಾರೆನ್ನುವುದಕ್ಕೆ ಶಾಸನಗಳು ಸಾಕ್ಷಿ. 20 ನೇ ಶತಮಾನದಲ್ಲಿ ಉತ್ತರಾರ್ಧ ಭಾಗದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಪ್ರಜಾಪ್ರಭುತ್ವ ಕಲ್ಯಾಣ ಬಂದಿದ್ದು, ಪಾಳೆಯಗಾರರ ಮನೆತನದಿಂದ. ವಿಜಯನಗರದ ಸಾಮ್ರಾಜ್ಯಕ್ಕೆ ಭದ್ರವಾದ ಅಡಿಪಾಯ ಹಾಕಿದವರು ಪಾಳೆಯಗಾರರು ಎನ್ನುವುದನ್ನು ಮರೆಯುವಂತಿಲ್ಲ ಎಂದು ನೆನಪಿಸಿದರು.

ಪಾಳೆಯಗಾರರನ್ನು ನಿರ್ಲಕ್ಷಿಸಿದ್ದಕ್ಕೆ ವಿಜಯನಗರ ಸಾಮ್ರಾಜ್ಯ ಪಥನವಾಯಿತು. 211 ವರ್ಷಗಳ ಕಾಲ ಹನ್ನೊಂದು ಅರಸರು ಚಿತ್ರದುರ್ಗದ ಕೋಟೆಯನ್ನು ಆಳಿದ್ದಾರೆ. ಹುಲ್ಲೂರು ಶ್ರೀನಿವಾಸ್ ಜೋಯಿಸ್, ಲಕ್ಷ್ಮಣ ತೆಲಗಾವಿ, ಸಾಹಿತಿ ಬಿ.ಎಲ್.ವೇಣು ಇವರುಗಳು ಚಿತ್ರದುರ್ಗದ ಇತಿಹಾಸವನ್ನು ಸರಣಿಯಾಗಿ ಬರೆದಿದ್ದಾರೆ.
ತ.ರಾ.ಸು.ರವರು ದುರ್ಗಾಸ್ತಮಾನ ಕಾದಂಬರಿ ಬರೆಯದೆ ಹೋಗಿದ್ದರೆ ಇತಿಹಾಸ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.

ಮತ್ತಿ ತಿಮ್ಮಣ್ಣನಾಯಕ, ಭರಮಣ್ಣನಾಯಕ, ಹಿರೇಮದಕರಿನಾಯಕ ಇವರುಗಳು ಪರಾಕ್ರಮಿಗಳಾಗಿದ್ದರು. ಹನ್ನೆರಡನೆ ವರ್ಷಕ್ಕೆ ಪಟ್ಟಕ್ಕೇರಿದ ರಾಜಾವೀರಮದಕರಿನಾಯಕನಲ್ಲಿ ಶೌರ್ಯ ಪರಾಕ್ರಮವನ್ನು ಬೆಳೆಸುವಲ್ಲಿ ಗಂಡೋಬವ್ವಳ ನಾಗತಿ ಪಾತ್ರವು ಅಡಗಿದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹೈದರಾಲಿಗೆ ರಾಜತ್ವದ ಪರಿಕಲ್ಪನೆ ಅಧಿಕಾರ ತೋರಿಸಿಕೊಟ್ಟಿದ್ದು, ರಾಜಾವೀರಮದಕರಿನಾಯಕ, ಚಿತ್ರದುರ್ಗದ ಚರಿತ್ರೆಯಲ್ಲಿ ಧೀಮಂತ, ರೋಚಕವಾಗಿ ಆಳ್ವಿಕೆ ನಡೆಸಿದ ರಾಜಾವೀರ ಮದಕರಿನಾಯಕನ ಅಂತ್ಯ ಅತ್ಯಂತ ಭೀಕರವಾಗಿತ್ತು. ಏಷ್ಯಾ ಖಂಡದಲ್ಲಿಯೇ ಇಂತಹ ಭದ್ರವಾದ ಏಳುಸುತ್ತಿನ ಕೋಟೆ ಎಲ್ಲಿಯೂ ಇಲ್ಲ ಎಂದು ಫ್ರೆಂಚ್ ಅಧಿಕಾರಿ ಹೇಳಿದ್ದಾರೆ. ಚಿತ್ರದುರ್ಗದ ಬಗ್ಗೆ ಎಲ್ಲರೂ ಅಭಿಮಾನ ಮೂಡಿಸಿಕೊಂಡು ಇತಿಹಾಸವನ್ನು ಸಂರಕ್ಷಿಬೇಕಿದೆ ಎಂದು ತಿಳಿಸಿದರು.

 

Advertisement
Tags :
bengaluruchitradurgadestroyedDr. N.S. MahanteshHistory researcherNeglectingsuddionesuddione newsVijayanagar Empireಇತಿಹಾಸ ಸಂಶೋಧಕಚಿತ್ರದುರ್ಗಡಾ.ಎನ್.ಎಸ್.ಮಹಂತೇಶ್ನಿರ್ಲಕ್ಷ್ಯಪಥನಪಾಳೆಯಗಾರರುಬೆಂಗಳೂರುವಿಜಯನಗರ ಸಾಮ್ರಾಜ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article