Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ 35ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ | ಉತ್ತಮ ಶಿಕ್ಷಣ ನೀಡುವ ಮೂಲಕ  ಶಾಲೆ ನಂ 1 ಆಗಿದೆ‌ : ಕೆ.ಎಸ್. ನವೀನ್

05:28 PM Jan 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 21 : ಶಿಕ್ಷಕರು ಪಾಠ ಮಾಡಬೇಕು, ವಿದ್ಯಾರ್ಥಿಗಳು ಓದಬೇಕು, ಪೋಷಕರು ಅದನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಬೇಕು ಆಗ ಮಾತ್ರ ಒಂದು ಶಿಕ್ಷಣ ಸಂಸ್ಥೆ ಉತ್ತಮ ಸಂಸ್ಥೆಯಾಗಲು ಸಾಧ್ಯವಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

Advertisement

ನಗರದ ಅನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ 35ನೇ ವರ್ಷದ ವಿಜಯೋತ್ಸವವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಬೇಕಿದೆ. ಇಂದಿನ ದಿನಮಾನದಲ್ಲಿ ಅಂಕಗಳ ಜೊತೆಗೆ ಮೌಲ್ಯಯುತವಾದ ಸಂಸ್ಕಾರದ ಅಗತ್ಯ ಇದೆ. ಇಲ್ಲಿನ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ಮಕ್ಕಳಿಗೆ ಕಲಿಸುವುದರ ಮೂಲಕ ಸಂಸ್ಕಾರವಂತರನ್ನಾಗಿ ಮಾಡುತ್ತಿದೆ. ಒಂದು ಶಿಕ್ಷಣ ಸಂಸ್ಥೆಯ ಯಶಸ್ವಿಗೆ ಅಲ್ಲಿನ ಆಡಳಿತ ಮಂಡಲಿ, ಶಿಕ್ಷಕರು, ಮಕ್ಕಳು ಹಾಗೂ ಪೋಷಕರ ಪಾತ್ರ ಹೆಚ್ಚಿನದಾಗಿದೆ ಎಂದರು.

ಬಡತನದಲ್ಲಿ ಶಿಕ್ಷಣವನ್ನು ಪಡೆದ ಹಲವಾರು ಜನತೆ ಉನ್ನತ ಸ್ಥಾನವನ್ನು ಪಡೆದಿದ್ದಾರೆ, ಬಡತನದಲ್ಲಿ ಶಿಕ್ಷಣವನ್ನು ಪಡೆದಿರುವ ಇವರು ತಮ್ಮ ಮುಂದಿನ ಜೀವನದಲ್ಲಿ ಉನ್ನತವಾದ ಸ್ಥಾನಕ್ಕೆ ತಲುಪಿದ್ದಾರೆ. ಅಬ್ದುಲ್ ಕಲಂ, ಲಾಲ್ ಬಹದ್ದೂರ ಶಾಸ್ತ್ರಿ, ಸರ್ವಪಲ್ಲಿ ರಾಧಕೃಷ್ಣ ಸೇರಿದಂತೆ ಹಲವಾರು ಜನತೆ ಈ ರೀತಿಯಾದ ಸಾಧನೆಯನ್ನು ಮಾಡಿದ್ದಾರೆ. ಇವರೆಲ್ಲಾ ಬಡತನದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಇಂದಿನ ನಮ್ಮ ಮೋದಿಯವರು ಸಹಾ ಕಡು ಬಡತನದಲ್ಲಿ ಇದ್ದು, ಈಗ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ದೇಶದ ಎಲ್ಲ ಜನತೆಗೂ ಸಹಾ ಉಚಿತವಾದ ಲಸಿಕೆಯನ್ನು ನೀಡುವುದರ ಮೂಲಕ ದೇಶದ ಜನತೆಯನ್ನು ಕೋವಿಡ್‍ನಿಂದ ಕಾಪಾಡಿದ್ದಾರೆ ಎಂದರು.

ಇಂದಿನ ಮಕ್ಕಳು ಮುಂದಿನ ದೇಶದ ಪ್ರಜೆಗಳು ಅವರನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡುವುದು ಚಿಕ್ಕ ವಯಸ್ಸಿನಲ್ಲಿಯೇ ಆಗಬೇಕಿದೆ. ಆದ್ದರಿಂದ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡುವುದರ ಮೂಲಕ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಶಾಲೆಯಲ್ಲಿ ಅಧ್ಯಾಪಕರು ಮಕ್ಕಳಿಗೆ ಉತ್ತಮವಾಗಿ ಭೋಧನೆಯನ್ನು ಮಾಡುವುದರ ಮೂಲಕ ಮಕ್ಕಳನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡಬೇಕಿದೆ. ತಂದೆ-ತಾಯಿಗಳು ಸಹಾ ಮಕ್ಕಳಲ್ಲಿ ಗುರಿಯನ್ನು ನೀಡುವುದರ ಮೂಲಕ ಅದನ್ನು ಸಾಧಿಸುವ ಹೊಣೆಯನ್ನು ನೀಡಬೇಕಿದೆ. ಮಕ್ಕಳಿಗೆ ಆಸ್ತಿಯನ್ನು ಮಾಡದೇ ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಿದ್ದೇಶ್ವರ ತಿಳಿಸಿದರು.

ಮಕ್ಕಳಿಗೆ ನಮ್ಮ ರೀತಿಯಲ್ಲಿ ಹೊಡೆದು ಶಿಕ್ಷಣವನ್ನು ಕಲಿಸುವಂತಿಲ್ಲ, ಮಕ್ಕಳಿಗೆ ಹೊಡೆತವನ್ನು ನೀಡದೆ ಶಿಕ್ಷಣವನ್ನು ಕಲಿಸಬೇಕಿದೆ ಅವರನ್ನು ಪ್ರೀತಿ, ವಿಶ್ವಾಸದಿಂದ ಭೋಧನೆಯನ್ನು ನೀಡುವುದರ ಮೂಲಕ ಶಿಕ್ಷಣವನ್ನು ಕಲಿಸಬೇಕಿದೆ.  ಶಿಕ್ಷಕರ ಕೆಲಸ ಜವಾಬ್ದಾರಿಯುತವಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕಿದೆ. ಆಗ ಮಾತ್ರ ಉತ್ತಮವಾದ ಮಕ್ಕಳು ನಿರ್ಮಾಣವಾಗಲು ಸಾಧ್ಯವಿದೆ. ಕಲ್ಲನ್ನು ಯಾವ ರೀತಿ ಶಿಲ್ಪಿಯ ಕೈಯಲ್ಲಿ ಶಿಲೆಯನ್ನಾಗುತ್ತದೆಯೂ ಅದೇ ರೀತಿ ಶಿಕ್ಷಕರ ಕೈಯಲ್ಲಿ ಮಕ್ಕಳು ಉತ್ತಮವಾದ ವಿದ್ಯಾವಂತನಾಗಿ ಹೂರ ಹೊಮ್ಮಬೇಕಿದೆ ಇದರ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಕಳೆದ 35 ವರ್ಷಗಳಿಂದ ವಿಜಯಕುಮಾರ್ ರವರು ಉತ್ತಮವಾದ ಶಿಕ್ಷಣವನ್ನು ನೀಡುವುದರ ಮೂಲಕ ಉತ್ತಮವಾದ ಪ್ರಜೆಗಳನ್ನು ರೂಪಿಸಿದ್ದಾರೆ. ಇದರಿಂದ ನಗರದಲ್ಲಿ ಇವರ ಶಾಲೆ ನಂ 1 ಆಗಿದೆ. ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಇತರೆ ಚಟುವಟಿಕೆಗಳನ್ನು ಮಾಡುವುದರ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲಾಗುತ್ತಿದೆ. ದೇಶದಲ್ಲಿ ಪ್ರಧಾನ ಮಂತ್ರಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶಿಕ್ಷಣಕ್ಕೆ ಅಗ್ರವಾದ ಸ್ಥಾನವನ್ನು ನೀಡಿದ್ದಾರೆ. ಶಿಕ್ಷಣದ ಜೊತೆಗೆ ಇತರೆ ಚಟುವಟಿಕೆಗಳನ್ನು ಮಾಡುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ವಿಜಯಕುಮಾರ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡುವುದರ ಮೂಲಕ ನಗರಕ್ಕೆ ಉತ್ತಮವಾದ ಕೂಡುಗೆಯನ್ನು ನೀಡಿದ್ದಾರೆ. 35 ವರ್ಷದಲ್ಲಿ ಲಕ್ಷಾಂತರ ಮಕ್ಕಳನ್ನು ವಿದ್ಯಾವಂತರನ್ನಾಗಿ ನಿರ್ಮಾಣ ಮಾಡುವುದರ ಮೂಲಕ ದೇಶಕ್ಕೆ ಉತ್ತಮವಾದ ಪ್ರಜೆಗಳನ್ನು ನೀಡಿದ್ದಾರೆ. ನಾನು ಸಹಾ ಹಲವಾರು ಬಾರಿ ಈ ಶಾಲೆಯಲ್ಲಿ ಸೀಟು ಕೊಡಿಸುವ ಸಲುವಾಗಿ ದೂರವಾಣಿಯ ಮೂಲಕ ಸಂಪರ್ಕ ಮಾಡುವುದರ ಮೂಲಕ ಬಡವರಿಗೆ ಸೀಟನ್ನು ಕೊಡಿಸಿದ್ದೇನೆ. ಇದೆ ರೀತಿ ವಿಜಯ ಕುಮಾರ್ ಸಹಾ ನಮ್ಮ ಮಾತನ್ನು ಮೀರದೆ ಸೀಟನ್ನು ನೀಡಿದ್ದಾರೆ. ಮಕ್ಕಳಲ್ಲಿ ಬುದ್ದಿವಂತಿಕೆ ಇದೆ ಅದನ್ನು ಹೂರವ ತೆಗೆಯುವ ಕಾರ್ಯವನ್ನು ಮಾಡಬೇಕಿದೆ ಎಂದರು.

ನಮ್ಮ ದೇಶದ ಮಕ್ಕಳು ಬುದ್ದಿವಂತಿರಿದ್ದಾರೆ ಇವರ ಬುದ್ದಿವಂತಿಕೆಯನ್ನು ನೋಡಿ ಹೊರ ದೇಶದವರು ನಮ್ಮ ದೇಶದ ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಅಲ್ಲಿನ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇದು ನಮ್ಮ ದೇಶದ ಮಕ್ಕಳ ಗತ್ತು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆಯ ಬಗ್ಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಅವರನ್ನು ಉತ್ತಮ ಕ್ರೀಡಾಪಟುಗಳನ್ನಾಗಹಿ ರೂಪಿಸಬೇಕಿದೆ. ಇದರಿಂದ ಪ್ರತಿ ಶಾಲೆಯಲ್ಲಿಯೂ ಸಹಾ ದೈಹಿಕ ಶಿಕ್ಷಕರನ್ನು ನೇಮಕ ಮಾಡುವುದರ ಮೂಲಕ ಮಕ್ಕಳನ್ನು ಉತ್ತಮವಾದ ಕ್ರೀಡಾ ಪಟುಗಳನ್ನಾಗಿ ರೂಪಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನೀತಾ ವಿಜಯಕುಮಾರ್, ಆಕಾಡೆಮಿಕ್ ಆಡಳಿತಾಧಿಕಾರಿಗಳಾದ ಡಾ.ಸ್ವಾಮಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ತ್ರಿಶಾ ಮತ್ತು ಅನಿಷಾ ಪ್ರಾರ್ಥಿಸಿದರೆ, ಶಿಕ್ಷಕಿ ಚಿನ್ನಾಂಬೆ ಸ್ವಾಗತಿಸಿದರು, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಯರಾದ ಸಂಪತ್ ಕುಮಾರ್ ಶಾಲಾ ವರದಿಯನ್ನು ವಾಚನ ಮಾಡಿದರು, ಶಿಕ್ಷಕರಾದ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ 1,2,3,4 ಮತ್ತು 5ನೇ ತರಗತಿಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ವಿದ್ಯಾ ವಿಕಾಸ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆದು ಈಗ ಉನ್ನತ ಸ್ಥಾನದಲ್ಲಿರುವ ಡಾ.ವಿ.ಎಲ್ ಪ್ರಶಾಂತ, ಡಾ|| ಶಶಿಧರ್ ಹಾಗೂ ಸುಜಯ ಉರ್ ರಹಮಾನ್ ರವರನ್ನು ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕಗಳನ್ನು ಪಡೆದ ಕು. ಹೆಚ್.ಬಿ.ಮಾನ್ಯ ಹಾಗೂ ನಿತಿನ್ ರವರನ್ನು ಗೌರವಿಸಲಾಯಿತು.

Advertisement
Tags :
Anniversary ProgramchitradurgaeducationK s naveenschoolsuddionesuddione newsVidya vikas vidya samstheಉತ್ತಮ ಶಿಕ್ಷಣಕೆ.ಎಸ್. ನವೀನ್‍ಚಿತ್ರದುರ್ಗವಿಜಯೋತ್ಸವ ಕಾರ್ಯಕ್ರಮವಿದ್ಯಾ ವಿಕಾಸ ವಿದ್ಯಾ ಸಂಸ್ಥೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article