ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ : ವಿದ್ಯಾಭ್ಯಾಸ ಶ್ರೀ ಮಠದ ಜವಾಬ್ದಾರಿ : ಮಾದಾರ ಚನ್ನಯ್ಯ ಸ್ವಾಮೀಜಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಮೇ. 10 : ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ ಮಾಡಲಾಗಿದೆ. ಇವರ ವಿದ್ಯಾಭ್ಯಾಸವನ್ನು ಶ್ರೀಮಠ ನೋಡಿಕೊಳ್ಳಲಿದೆ ಇವರನ್ನು ಮುಂದಿನ ದಿನದಲ್ಲಿ ಶ್ರೀಮಠದ ಉತ್ತರಾಧಿಕಾರಿಯಾಗಿ ಮಾಡಬೇಕೇ, ಬೇಡವೇ ಎಂಬ ತೀರ್ಮಾನವನ್ನು ಸಮಾಜದ ಮುಖಂಡರು ಹಿರಿಯರು ಟೆಸ್ಟ್‌ನ ಪದಾಧಿಕಾರಿಗಳು ತೆಗೆದುಕೊಳ್ಳುತ್ತಾರೆ ಈಗ ಸದಸ್ಯಕ್ಕೆ ವಟವಿಗೆ ಶಿಕ್ಷಣವನ್ನು ಕೊಡಿಸಲಾಗುವುದು ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ತಿಳಿಸಿದರು.
ನಗರದ ಹೊರವಲಯದಲ್ಲಿರುವ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ ಸಮಾರಂಭ ಇಂದು ನಡೆದಿದ್ದು, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ವಟು ಸ್ವೀಕಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ವಟುವಿನ ತಂದೆ ತಾಯಿಯವರು ಹಲವಾರು ವರ್ಷದಿಂದ ನಮ್ಮ ಮಠಕ್ಕೆ ಭಕ್ತರಾಗಿದ್ದಾರೆ, ಅವರ ಎರಡನೇ ಮಗವನ್ನು ನಮ್ಮ ಮಠದಲ್ಲಿ ಶಿಕ್ಷಣ ಪಡೆಯಲು ಬಿಟ್ಟಿದ್ದಾರೆ, ಮಗುವಿನ ಶಿಕ್ಷಣದ ಪೂರ್ಣ ಜವಾಬ್ದಾರಿ ಶ್ರೀಮಠದ್ದಾಗಿದೆ ವಟುವನ್ನು ಆದಿ ಚುಂಚನಗಿರಿಯ ಮಠಕ್ಕೆ ಕಳುಹಿಸಿ ಶಿಕ್ಷಣವನ್ನು ಕೂಡಿಸಲಾಗುವುದು. ತದ ನಂತರ ಚಿತ್ರದುರ್ಗ ಬೃಹನ್ಮಠದ ಬಸವತತ್ವ ಮಹಾ ವಿದ್ಯಾಲಯದಲ್ಲಿ ಶಿಕ್ಷಣವನ್ನು ಕೊಡಿಸಲಾಗುವುದು ಎಂದರು.
ಬಸವ ಜಯಂತಿ ದಿನವಾದ ಇಂದು ನಮ್ಮ ಮಠಕ್ಕೆ ಸಹಾ ಸ್ಮರಣೀಯ ದಿನವಾಗಿದೆ ಮಠಕ್ಕೆ ನೂತನವಾಗಿ ಮಟುವನ್ನು ಸ್ವೀಕಾರ ಮಾಡಲಾಗಿದೆ. ನೂತನ ವಟು 4ನೇ ತರಗತಿಯನ್ನು ಅಭ್ಯಾಸ ಮಾಡುತ್ತಿದ್ದಾನೆ. ನಮ್ಮ ಮುಂದಿನ ದಿನಮಾನದಲ್ಲಿ ನಮ್ಮ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗುವುದು ಪರಂಪರೆಯಾಗಿದೆ. ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಿದ್ದಾರೆ.
ಮುಂದಿನ ದಿನದಲ್ಲಿ ನಮ್ಮ ಸಮಾಜದ ಹಿರಿಯರಾದ ಗೋವಿಂದ ಕಾರಜೋಳ, ಮುನಿಯಪ್ಪ, ನಾರಾಯಣಸ್ವಾಮಿ, ಚಂದ್ರಪ್ಪರವರು ಸೇರಿ ತೀರ್ಮಾನದ ನಂತರ ಗುರುಪೀಠದ ಉತ್ತರಾಧಿಕಾರಿಯ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಈ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಅವರು ಸೂಕ್ತವಾದ ಸಮಯದಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ. ಇಂದು ಜಿಲ್ಲೆಯ ಹಲವಾರು ವಿವಿಧ ಮಠಾಧೀಶರ ಸಮ್ಮುಖದಲ್ಲಿ ನೂತನ ವಟುವಿಗೆ ಲಿಂಗದೀಕ್ಷೆಯನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಜಿ, ಭಗಿರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೊಸದುರ್ಗ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಹಂಪಿಯ ಮಾತಂಗಮುನಿ ಮಠದ ಶ್ರೀ ಮಾತಂಗಮುನಿ ಸ್ವಾಮೀಜಿ, ಲಂಬಾಣಿ ಗುರುಪೀಠದ ಶ್ರೀ ನಂದ ಮಸಂದ ಸ್ವಾಮಿಗಳು, ಚಿತ್ರದುರ್ಗದ ಶ್ರೀ ವೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ,ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮಿಗಳು, ರಾಣೆಬೆನ್ನೂರಿನ ಶ್ರೀ ಗಜದಂಡ ಸ್ವಾಮಿಗಳು, ಸಿದ್ದಾರೂಢ ಆಶ್ರಮದ ಶ್ರೀ ಜಯದೇವ ಸ್ವಾಮಿಗಳು, ತಿಳುವಳ್ಳಿಯ ಶ್ರೀ ನಿರಂಜನಾಂದ ಸ್ವಾಮಿಗಳು ಶ್ರೀ ತಿಪ್ಪೇರುದ್ರ ಸ್ವಾಮಿಗಳು ಸತ್ಯಕ್ಕ ಜಯದೇವಿತಾಯಿ ಶ್ರೀ ಪೂರ್ಣಾನಂದ ಸ್ವಾಮಿಗಳು ಇದ್ದರು.
ಇದರೊಂದಿಗೆ ವಟುವಿನ ತಂದೆ-ತಾಯಿಯವರಾದ ಮಹಾಲಿಂಗಪ್ಪ ಶ್ರೀಮತಿ ಸವಿತಾ ಉಪಸ್ಥಿತರಿದ್ದರು.