For the best experience, open
https://m.suddione.com
on your mobile browser.
Advertisement

ದಲಿತ ಹೋರಾಟಗಾರ ಓಂಕಾರಪ್ಪ ಪೂಜಾರ್ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಭಾವಪೂರ್ಣ ಶ್ರದ್ದಾಂಜಲಿ

06:16 PM Apr 03, 2024 IST | suddionenews
ದಲಿತ ಹೋರಾಟಗಾರ ಓಂಕಾರಪ್ಪ ಪೂಜಾರ್ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಭಾವಪೂರ್ಣ ಶ್ರದ್ದಾಂಜಲಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.03 : ದಲಿತ ಹೋರಾಟಗಾರ, ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿದ್ದ ಓಂಕಾರಪ್ಪ ಪೂಜಾರ್ ನಿಧನಕ್ಕೆ ವಿವಿಧ ದಲಿತಪರ ಸಂಘಟನೆಗಳಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

Advertisement

ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸಮೀಪ ಓಂಕಾರಪ್ಪ ಪೂಜಾರ್ ಭಾವಚಿತ್ರಕ್ಕೆ ಹೂಮಾಲೆ ಸಲ್ಲಿಸಿ ಮಾತನಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಓಂಕಾರಪ್ಪ ಪೂಜಾರ್ ಅನೇಕ ವರ್ಷಗಳ ಕಾಲ ದಲಿತರ ಪರವಾಗಿ ಹೋರಾಟ ಮಾಡಿಕೊಂಡು ಬಂದವರು. ಎಲ್ಲಿಯೇ ದಲಿತರ ಮೇಲೆ ದೌರ್ಜನ್ಯ, ಹಲ್ಲೆ ದಬ್ಬಾಳಿಕೆಯಾದರೆ ಅಲ್ಲಿ ಹೋರಾಟಕ್ಕೆ ಮುಂಚೂಣಿಯಲ್ಲಿರುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರಿ ದುಃಖತಪ್ತ ಕುಟಂಬಕ್ಕೆ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸಿದರು.

ಪ್ರಕಾಶ್ ಬೀರಾವರ ಮಾತನಾಡಿ ಓಂಕಾರಪ್ಪ ಪೂಜಾರ್ ಹೋರಾಟಕ್ಕಾಗಿಯೇ ಜೀವನವನ್ನು ಮುಡುಪಾಗಿಟ್ಟಿದ್ದರು. ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿದ್ದಾಗ ಆಟೋ ಚಾಲಕರು ಹಾಗೂ ಮಾಲೀಕರುಗಳ ಸಮಸ್ಯೆ ನಿವಾರಣೆ ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಸಾಕಷ್ಟು ಹೋರಾಟ ಮಾಡಿದ್ದನ್ನು ನೆನಪಿಸಿಕೊಂಡರು.

ರವಿ ಇಂಗಳದಾಳ್, ತಿಮ್ಮರಾಜು ಹಿರಿಯೂರು, ವಿಶ್ವನಾಥ, ಕಣಿವೆಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

Advertisement
Tags :
Advertisement