ವಾಲ್ಮೀಕಿ ಹಗರಣ : ಬಿ.ನಾಗೇಂದ್ರಗೆ ಷರತ್ತು ಬದ್ಧ ಜಾಮೀನು ಮಂಜೂರು..!
ರಾಜ್ಯದಲ್ಲಿ ದೊಡ್ಡಮಟ್ಟಕ್ಕೆ ಸದ್ದು ಮಾಡಿದ್ದು ಎಂದರೆ ಅದು ವಾಲ್ಮೀಕಿ ಹಗರಣ. ವಿಪಕ್ಷ ನಾಯಕರು ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ದೊಡ್ಡ ಹೋರಾಟವನ್ನೇ ಮಾಡಿದರು. ಇದರಿಂದ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು ರಾಜೀನಾಮೆಯನ್ನು ನೀಡಿದರು. ಪೊಲೀಸರು ನಾಗೇಂದ್ರ ಅವರನ್ನು ವಶಕ್ಕೆ ಪಡೆದು, ವಿಚಾರಣೆಯನ್ನು ನಡೆಸಿದ್ದರು. ಇದೀಗ ನಾಗೇಂದ್ರ ಅವರಿಗೆ ಜಾಮೀನು ಮಂಜೂರಾಗಿದೆ.
ಜನಪ್ರತಿನಿಧಿಗಳ ನ್ಯಾಯಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಇಂದು ನಾಗೇಂದ್ರ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. 2 ಲಕ್ಷದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಲು ನ್ಯಾಯಾಲಯವೂ ಸೂಚನೆ ನೀಡಲಾಗಿತ್ತು. ಕೋರ್ಟ್ ಕೇಳಿದ್ದನ್ನು ನೀಡಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರು ಜಾಮೀನು ಪಡೆದಿದ್ದಾರೆ.
ವಾಲ್ಮೀಕಿ ಹಗರಣ ಸಣ್ಣ ಮಟ್ಟದ ಹಗರಣವಲ್ಲ. ತೀರಾ ದೊಡ್ಡಮಟ್ಟದ ಕೋಟ್ಯಾಂತರ ರೂಪಾಯಿಯ ಹಗರಣವಾಗಿದೆ. 197 ಕೋಟಿ, ಸಚಿವರ ಗಮನಕ್ಕೆ ಬಾರದೆ ಅವ್ಯವಹಾರ ನಡೆದಿದೆ ಎಂದೇ ವಾದ ಮಾಡಲಾಗಿತ್ತು. ಈ ಕೇಸ್ ದೊಡ್ಡದಾಗುತ್ತಾ ಹೋದಂತೆ, ಸಚುವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿದರು. ಬಳಿಕ ರಾಜ್ಯ ಸರ್ಕಾರ ಈ ಕೇಸನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಲಾಗಿತ್ತು. ಇಡಿ ಕೂಡ ಈ ಕೇಸಲ್ಲಿ ತನಿಖೆ ನಡೆಸುವುದಕ್ಕೆ ಶುರು ಮಾಡಿತ್ತು. ಮೊದಲಿಗೆ ಲೋಕಾಯುಕ್ತ ಪೊಲೀಸರು ತಮ್ಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದರು. ಆದರೆ ಅದರಲ್ಲಿ ನಾಗೇಂದ್ರ ಅವರ ಹೆಸರು ಉಲ್ಲೇಖ ಮಾಡಿರಲಿಲ್ಲ. ಬಳಿಕ ಇಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಅವರದ್ದೇ ಬಹುಪಾಲು ಪಾತ್ರವಿದೆಯೆಂದು ತೋರಿಸಲಾಗಿತ್ತು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.