For the best experience, open
https://m.suddione.com
on your mobile browser.
Advertisement

ವಚನಗಳು ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿವೆ :  ಡಾ.ಶ್ರೀನಿವಾಸಶೆಟ್ಟಿ

07:12 PM Jan 23, 2024 IST | suddionenews
ವಚನಗಳು ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿವೆ    ಡಾ ಶ್ರೀನಿವಾಸಶೆಟ್ಟಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.23 : ವಚನಗಳು ಅಳಿಸಲ್ಲ. ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದು ಡಾ.ಶ್ರೀನಿವಾಸಶೆಟ್ಟಿ ಹೇಳಿದರು.

Advertisement

ಗುರು ಪುಟ್ಟರಾಜ ಸಂಗೀತ ಸಭಾ ಮೈಸೂರು, ಚಿಲಿಪಿಲಿ ಸಂಗೀತ ಸಾಂಸ್ಕøತಿಕ ಕಲಾ ಅಕಾಡೆಮಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಮಟಕಲ್ಲು ರಸ್ತೆಯಲ್ಲಿರುವ ಸರಿಗಮಪ ಸಂಗೀತ ಪಾಠಶಾಲೆಯಲ್ಲಿ ನಡೆದ ವಚನ ಗಾಯನ ಸ್ಪರ್ಧೆಯನ್ನು ತಬಲ ಬಾರಿಸುವ ಮೂಲಕ ಉದ್ಗಾಟಿಸಿ ಮಾತನಾಡಿದರು.

ಸಂಗೀತದಲ್ಲಿ ಎಲ್ಲರಿಗೂ ಆಸಕ್ತಿಯಿರುತ್ತದೆ. ಸಂಗೀತ ಹಾಡಲು ಗಂಟಲೇ ಇರಬೇಕೆಂದಿಲ್ಲ. ಆಸ್ವಾಧಿಸುವ ಕಿವಿಗಳಿದ್ದರೆ ಸಾಕು. ಹಿಂದೂಸ್ತಾನಿ ಸಂಗೀತವೆಂದರೆ ನನಗೆ ತುಂಬಾ ಇಷ್ಟ. ಸಮಾಜದಿಂದ ಎಲ್ಲಾ ತೆಗೆದುಕೊಂಡಿದ್ದೇವೆ. ಆದರೆ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆಂದು ಯೋಚಿಸುವುದು ಮುಖ್ಯ. ಕೆ.ಆರ್.ಎಸ್. ಡ್ಯಾಂ ಕಟ್ಟುವಾಗ ಮೈಸೂರು ಮಹಾರಾಜರು ಹಾಗೂ ಅವರ ಪತ್ನಿ ಇಬ್ಬರು ಸೇರಿ ತಮ್ಮಲ್ಲಿದ್ದ ಬೆಳ್ಳಿ, ಬಂಗಾರ, ವಜ್ರ, ವೈಡೂರ್ಯಗಳನ್ನೆಲ್ಲಾ ಮಾರಿ ಸಾರ್ವಜನಿಕರಿಗೆ ಉಪಯೋಗ ಮಾಡಿದ್ದಾರೆ. ಸಂಗೀತಕ್ಕೆ ಎಲ್ಲರನ್ನು ತಲೆದೂಗಿಸುವ ಶಕ್ತಿಯಿದೆ ಎಂದರು.

ಡಾ.ಎ.ಎಲ್.ದೇಸಾಯಿ, ಭೀಮಾಶಂಕರ ಬಿದನೂರು, ಸುಜೀತ ಕುಲಕರ್ಣಿ, ರಿಜ್ವಾನ್ ಬುದ್ದಹಳ್ಳಿ, ಗಂಗಾಧರ್ ಇವರುಗಳು ವೇದಿಕೆಯಲ್ಲಿದ್ದರು. ವಚನ ಗಾಯನ ಸ್ಪರ್ಧೆಯಲ್ಲಿ ಗಗನ್ ಕೆರೆನಹಳ್ಳಿ ಪ್ರಥಮ, ಶಾಲೂಮ್ ದ್ವಿತೀಯ, ಮಾರುತಿ ಟಿ. ತೃತೀಯ ಬಹುಮಾನ ಪಡೆದುಕೊಂಡರು. ಮೈಲಾರಿ ಎಸ್.ತುರುವನೂರು, ರಿದಾ ಹಸನ್ ಇವರುಗಳು ಸಮಾಧಾನಕರ ಬಹುಮಾನ ಗಿಟ್ಟಿಸಿಕೊಂಡರು.

Tags :
Advertisement