For the best experience, open
https://m.suddione.com
on your mobile browser.
Advertisement

ರೈತರಿಗೆ ಉಪಯುಕ್ತ ಮಾಹಿತಿ | ಏರುಮಡಿ ಪದ್ದತಿಯಲ್ಲಿ ಶೇಂಗಾ ಬೆಳೆ: ಟ್ರ್ಯಾಕ್ಟರ್ ಚಾಲಿತ ಉಪಕರಣದಿಂದ ಪ್ರಾತ್ಯಕ್ಷಿಕೆ

04:48 PM Feb 09, 2024 IST | suddionenews
ರೈತರಿಗೆ ಉಪಯುಕ್ತ ಮಾಹಿತಿ   ಏರುಮಡಿ ಪದ್ದತಿಯಲ್ಲಿ ಶೇಂಗಾ ಬೆಳೆ  ಟ್ರ್ಯಾಕ್ಟರ್ ಚಾಲಿತ ಉಪಕರಣದಿಂದ ಪ್ರಾತ್ಯಕ್ಷಿಕೆ
Advertisement

ಚಿತ್ರದುರ್ಗ. ಫೆ.09 : ಹಿರಿಯೂರಿನ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಜಿಲ್ಲೆಯ ರೈತರಿಗೆ “ಶೇಂಗಾ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ತಂತ್ರಜ್ಞಾನಗಳು ಕುರಿತು ಒಂದು ದಿನದ ತರಬೇತಿ ತರಬೇತಿ ಕಾರ್ಯಕ್ರ ನಡೆಯಿತು.

Advertisement
Advertisement

ಅಖಿಲ ಭಾರತ ಸಮನ್ವಯ ಶೇಂಗಾ ಸಂಶೋಧನಾ ಪ್ರಾಯೋಜನೆ, ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧಾ ಕೇಂದ್ರ ಸಹಭಾಗಿತ್ವದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿ ಕಾರ್ಯಕ್ರಮದಲ್ಲಿ ಬಬ್ಬೂರುಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಏರುಮಡಿ ಪದ್ದತಿಯಲ್ಲಿ ಶೇಂಗಾ ಬೆಳೆಯಲು ಏರು ಮಡಿ ನಿರ್ಮಿಸುವ ಟ್ರ್ಯಾಕ್ಟರ್ ಚಾಲಿತ ಉಪಕರಣದಿಂದ ಪ್ರಾತ್ಯಕ್ಷಿಕೆ ನೀಡಲಾಯಿತು.

Advertisement

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ 70ಕ್ಕೂ ಹೆಚ್ಚು ಆಸಕ್ತ ರೈತ ಮತ್ತು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೂಕ್ತವಾದ ಮಾಹಿತಿ ಪಡೆದುಕೊಂಡರು.

Advertisement
Advertisement


ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಸುರೇಶ ಡಿ.ಏಕಬೋಟೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆ ನಿವಾರಿಸಲು ಕೃಷಿ ಯಾಂತ್ರೀಕರಣ ಅನಿವಾರ್ಯವಾಗಿದೆ, ಶೇಂಗಾ ಬೆಳೆಯಲ್ಲಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಲು ಜೈವಿಕ ಗೊಬ್ಬರವಾದ ರೈಜೋಬಿಯಂ ಮತ್ತು ಬೇರು ಮತ್ತು ಕಾಂಡ ಕೊಳೆ ರೋಗದ ಸಮಸ್ಯೆಕಡಿಮೆ ಮಾಡಲು ಜೈವಿಕ ಪೀಡೆ ನಾಶಕವಾದ ಟ್ರೈಕೋಡರ್ಮಾದಿಂದ ಬೀಜೋಪಚಾರ ಪ್ರಮುಖ ಪಾತ್ರವಹಿಸಿದೆ. ಈ ನಿಟ್ಟಿನಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಿಂದ ಹೊರತಂದಿರುವ ಸಂಶೋಧನಾ ತಾಂತ್ರಿಕತೆಗಳನ್ನು ರೈತರು ಅನುಸರಿಸುವ ನಿಟ್ಟಿನಲ್ಲಿ ನಮ್ಮ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನಕೇಂದ್ರ, ಬಬ್ಬೂರು ಫಾರಂ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಸದಾ ಸಿದ್ಧವೆಂದು ಭರವಸೆ ನೀಡಿದರು.


ಶೇಂಗಾತಳಿ ವಿಜ್ಞಾನಿ ಡಾ.ಬಿ. ಎನ್. ಹರೀಶ್ ಬಾಬು ಮಾತನಾಡಿ, ಕರ್ನಾಟಕ ರಾಜ್ಯದ ಮಧ್ಯ ಒಣವಲಯ ಪ್ರದೇಶಕ್ಕೆ ಸೂಕ್ತವಾದಂತಹ ಶೇಂಗಾ ತಳಿಗಳು ಮತ್ತು ರೈತರು ಅನುಸರಿಸಬೇಕಾದ ಸುಧಾರಿತ ಬೇಸಾಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಇತ್ತೀಚಿಗೆ ಬಿಡುಗಡೆ ಮಾಡಲಾದ ಸುಧಾರಿತ ತಳಿಯಾದ ಡಿ.ಹೆಚ್256 ರೈತರು ಹೆಚ್ಚಾಗಿ ಬೆಳೆಯಬೇಕೆಂದು ಮನವಿ ಮಾಡಿದರು. ಈ ನಿಟ್ಟಿನಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧಾ ಕೇಂದ್ರದಲ್ಲಿ ಪ್ರಸ್ತುತ ಡಿ.ಹೆಚ್256 ಶೇಂಗಾ ತಳಿಯ ಬೀಜಗಳು ಲಭ್ಯವಿದ್ದು, ಆಸಕ್ತ ರೈತರು ಸಂಶೋಧನಾ ಕೇಂದ್ರದಿಂದ ಖರೀದಿಸಬಹುದೆಂದು ತಿಳಿಸಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಮಾತನಾಡಿ, ಶೇಂಗಾ ಜಿಲ್ಲೆಯ ಪ್ರಮುಖ ಎಣ್ಣೇಕಾಳು ಬೆಳೆಯಾಗಿದ್ದು, ಬೀಜೋಪಚಾರ, ಪೋಷಕಾಂಶಗಳ ನಿರ್ವಹಣೆ, ಸೂಕ್ತ ಸಮಯದಲ್ಲಿ ಕೀಟ ರೋಗಗಳ ನಿರ್ವಹಣೆ ಮತ್ತು ನೀರಾವರಿ ಸೌಲಭ್ಯವುಳ್ಳವರು ಏರುಮಡಿ ಪದ್ದತಿಯನ್ನು ಅನುಸರಿಸಿ ಶೇಂಗಾ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ತಾಂತ್ರಿಕ ಅಧಿಕಾರಿ (ಕೀಟಶಾಸ್ತ್ರ) ವಿಜಯ ಎಸ್.ಧಾನರಡ್ಡಿ ಅವರು ಶೇಂಗಾ ಬೆಳೆಗೆ ಬಾಧಿಸುವ ಪ್ರಮುಖಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಂಜಿನಿಯರ್ ಡಾ.ರಾಜಶೇಖರ್ ಡಿ. ಬಾರ್ಕರ್ ಅವರು ಶೇಂಗಾ ಬೆಳೆ ಬಿತ್ತನೆಯಿಂದ ಕೊಯ್ಲು ಮತ್ತು ಕೊಯ್ಲೋತ್ತರ ಚಟುವಟಿಗಳಿಗೆ ಸೂಕ್ತವಾದಂತಹ ಯಂತ್ರೋಪಕರಣಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತಳಕು ಹೋಬಳಿಯ ಪ್ರಗತಿಪರ ರೈತ ಗುಡಿಹಳ್ಳಿ ಬಡಗಿರಂಗಪ್ಪ ಅವರು ಸುಧಾರಿತ ತಾಂತ್ರಿಕತೆ ಅಳವಡಿಸಿಕೊಂಡು ಡಿ.ಹೆಚ್256 ಮತ್ತು ಕದರಿ ಲೇಪಾಕ್ಷಿ ಶೇಂಗಾತಳಿಯಿಂದ ಉತ್ತಮ ಇಳುವರಿ ಪಡೆದ ಹಾಗೂ ಬಿಳಿರಾಗಿ ಬೆಳೆದ ಅನುಭವ ಹಂಚಿಕೊಂಡರು. ಅದೇರೀತಿ ತಳಕು ಹೋಬಳಿಯ ಮತ್ತೋರ್ವ ಪ್ರಗತಿ ಪರರೈತ ಶರಣಪ್ಪ ಅವರು ಹಾಲಿ ನೀರಾವರಿಯಲ್ಲಿ ಏರು ಮಡಿ ಪದ್ದತಿಯಲ್ಲಿ ಡಿ.ಹೆಚ್256 ಉತ್ತಮವಾಗಿ ಬೆಳೆದಿದ್ದು, ಎಕರೆಗೆ 10-12 ಕ್ವಿಂಟಲ್ ಇಳುವರಿ ನಿರೀಕ್ಷಿಸಬಹುದು ಎಂದು ತಮ್ಮ ಅನುಭವ ಹಂಚಿಕೊಂಡರು.

Advertisement
Tags :
Advertisement