Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರೈತರಿಗೆ ಉಪಯುಕ್ತ ಮಾಹಿತಿ |  ರೈತ ಉತ್ಪಾದಕ ಸಂಸ್ಥೆಗಳಿಗೆ ಶೇ.4 ರಷ್ಟು ಬಡ್ಡಿ ಸಹಾಯಧನ: ಡಿ.30 ಅರ್ಜಿ ಸಲ್ಲಿಸಲು ಕಡೆಯ ದಿನ

05:33 PM Dec 21, 2023 IST | suddionenews
Advertisement

ಚಿತ್ರದುರ್ಗ. ಡಿ.21: ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ)ಗಳು ಪಡೆದ ರೂ.20 ಲಕ್ಷದವರೆಗಿನ ಸಾಲಕ್ಕೆ ಶೇ.4 ರಷ್ಟು ಬಡ್ಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

Advertisement

ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಲು ಮಾರುಕಟ್ಟೆ ಸಂಪರ್ಕ, ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ/ಮೌಲ್ಯವರ್ಧನೆ ಮತ್ತು ವಿವಿಧ ತಂತ್ರಜ್ಞಾನಗಳನ್ನು ಅಡಳವಡಿಕೆ, ನಷ್ಟ ಕಡಿಮೆಗೊಳಿಸಿ ಆದಾಯ ವೃದ್ಧಿಗೊಳಿಸಲು, ಮೌಲ್ಯ ಸರಪಳಿ ಪ್ರೇರೇಪಿಸುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಮಗ್ರ ಸುಧಾರಣೆಗಾಗಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಹಾಗೂ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳನ್ನು ಸಂಸ್ಕರಣೆ, ಮೌಲ್ಯವರ್ಧಿತ ಸಂಸ್ಕರಣೆಯಲ್ಲಿ ತೊಡಗಿರುವ ರೈತ ಉತ್ಪಾದಕ ಸಂಸ್ಥೆಗಳು ಡಿ.30 ರ ಸಂಜೆ 4 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ, ತಾಲ್ಲೂಕ ಮಟ್ಟದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement
Tags :
4% Interest SubsidychitradurgaDecember 30Farmer Producer OrganizationsFarmerslast day to applyUseful informationಅರ್ಜಿ ಸಲ್ಲಿಸಲು ಕಡೆಯ ದಿನಚಿತ್ರದುರ್ಗಡಿ.30ರೈತ ಉತ್ಪಾದಕ ಸಂಸ್ಥೆರೈತರಿಗೆ ಉಪಯುಕ್ತ ಮಾಹಿತಿಶೇ.4 ರಷ್ಟು ಬಡ್ಡಿ ಸಹಾಯಧನ
Advertisement
Next Article