Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪರಿಸರಕ್ಕೂ ಹಾನಿಯಾಗದ, ದೇಹಕ್ಕೂ ಉತ್ತಮ ವ್ಯಾಯಾಮವಾಗುವ ಸೈಕಲ್ ಬಳಸಿ : ಬ್ರಿಗೇಡಿಯರ್ ರವಿ ಮುನಿಸ್ವಾಮಿ

07:16 AM Jan 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 21 : ಸೈಕಲ್ ತುಳಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಉತ್ತಮವಾದ ಆರೋಗ್ಯವನ್ನು ಹೊಂದುವುದ್ದಲ್ಲದೆ ಪರಿಸರವನ್ನು ಸಹಾ ಸ್ವಚ್ಚವಾಗಿ ಇಡಬಹುದಾಗಿದೆ ಎಂದು ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು.

Advertisement

ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಶನಿವಾರ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರ, ಇಂದಿನ ದಿನಮಾನದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಪರಿಸರ ಮಾಲಿನ್ಯವಾಗುತ್ತಿದೆ ಇದನ್ನು ಸವಿಸುವ ಮಾನವನಿಗೆ ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಅಲ್ಲದೆ ಈಗ ಇರುವ ಪೆಟ್ರೋಲ್ ಡೀಸಲ್ ಬಹಳ ದಿನ ಸಿಗುವುದಿಲ್ಲ ಅಗ ನಮ್ಮಲ್ಲಿರುವ ವಾಹನಗಳು ಮೂಲೆ ಸೇರುತ್ತವೆ, ಈಗಿನಿಂದಲೇ ಇವುಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಪರಿಸರಕ್ಕೆ ಯಾವುದೇ ರೀತಿಯ ಹಾನಿಯನ್ನು ಮಾಡದ ದೇಹಕ್ಕೂ ಉತ್ತಮ ವ್ಯಾಯಾಮವಾಗುವ ಸೈಕಲ್ ತುಳಿಯುವುದನ್ನು ಅಭ್ಯಾಸವನ್ನು ಈಗಿನಿಂದಲೇ ಮಾಡುವಂತೆ ಕರೆ ನೀಡಿದರು.

ನಮ್ಮ ಸಂಸ್ಥೆಯವತಿಯಿಂದ ವರ್ಷದಲ್ಲಿ ಹಲವಾರು ಬಾರಿ ವಿವಿಧ ಸ್ಥಳಿಗಳಿಗೆ ಸೈಕಲ್ ಮೇಲೆ ಪ್ರವಾಸವನ್ನು ಮಾಡುತ್ತೇವೆ ನಮ್ಮಲ್ಲಿರುವವರು ಬಹುತೇಕ ಮಂದಿ 70 ವರ್ಷ ದಾಟಿದವರಾಗಿದ್ದಾರೆ. ಇಷ್ಟು ವಯಸ್ಸಾದರೂ ಸಹಾ ಉತ್ತಮವಾದ ಆರೋಗ್ಯವನ್ನು ಹೊಂದಿದ್ದಾರೆ ಇದಕ್ಕೆ ಕಾರಣ ಸೈಕಲ್ ಯಾತ್ರೆಯಾಗಿದೆ. ಇದುವರೆವಿಗೂ ತಿರುಪತಿ ದಾಂಡೇಲಿ, ಬಾದಾಮಿ,ಮಂತ್ರಾಲಯ ಸೇರಿದಂತೆ ಇತರೆ ಕಡೆಗಳಲ್ಲಿ ಸೈಕಲ್ ಮೇಲೆ ಪ್ರವಾಸವನ್ನು ಹೋಗಲಾಗಿದೆ ದಿನಕ್ಕೆ 200 ರಿಂದ 250 ಕಿ.ಮೀ.ದೂರವನ್ನು ಕ್ರಮಿಸಲಾಗುತ್ತದೆ.

ನಮ್ಮ ತಂಡದಲ್ಲಿ ಇಂಜಿನಿಯರ್, ಡಾಕ್ಟರ್, ಸೈನಿಕರು, ಬ್ಯಾಂಕ್ ನಿವೃತ್ತ ನೌಕರರು ಇದ್ದಾರೆ. ಇವೆರಲ್ಲಾ ಸೇರಿ ವರ್ಷಕ್ಕೋಮ್ಮೆ ಸೈಕಲ್ ಪ್ರವಾಸವನ್ನು ನಡೆಸುತ್ತೆವೆ. ಅಲ್ಲಿನ ರೋಟರಿ ಕ್ಲಬ್ ನವರು ಸಹಕಾರ ಸಹಾಯವನ್ನು ನೀಡುತ್ತಿದ್ದಾರೆ ಎಂದರು.

ಸೈಕಲ್ ಯಾತ್ರೆ ಹೋದ ಕಡೆಯಲ್ಲ ಪರಿಸರದ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ಅದರ ಉಳಿವಿಗಾಗಿ ಎಲ್ಲರು ಸಹಾ ಸಹಕಾರ ಮಾಡೋಣ ಸಾಧ್ಯವಾದಷ್ಟು ಪೆಟ್ರೋಲ್ ಡೀಸಲ್ ಬಳಕೆ ಮಾಡುವ ವಾಹನಗಳ ಬಳಕೆಯನ್ನು ಕಡಿಮೆ ಮಾಡೋಣ ಸೈಕಲ್ ಬಳಕೆಯನ್ನು ಹೆಚ್ಚಾಗಿಸುವುದರ ಮೂಲಕ ಸ್ವಚ್ಚವಾದ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡಬೇಕಿದೆ ಇದರ ಬಗ್ಗೆ ಆಲೋಚಿಸೋಣ ಎಂದು ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು.

ಈ ತಂಡದಲ್ಲಿ ಬಾಲನ್ ರಾಜ ರತ್ನಮ್, ಮೋಹನ್ ಶಣ್ಯೆ, ರಾಮನಾರಾಯಣ, ಮೀರ ನಾರಾಯಣ, ಬಾಬು ಕಮಂಕರ್, ಹೇಮಂತ ಇದ್ದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಕನಕರಾಜು, ಕಾರ್ಯದರ್ಶಿ ವಿಕ್ರಾಂತ್ ಜೈನ್, ರೋ.ಎಸ್.ವಿರೇಶ್, ಡಿಸ್ಟಿಕ್ ಗೌರ್ನರ್ ಗಾಯತ್ರಿ ಶಿವರಾಂ, ಕುರುಬರಹಳ್ಳಿ ಶಿವಣ್ಣ, ಶಿವರಾಂ, ವೀರಭದ್ರಸ್ವಾಮಿ ಮೈಲೇಶ್, ಜಯಶ್ರೀ ಷಾ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
chitradurgasuddionesuddione newsಉತ್ತಮಚಿತ್ರದುರ್ಗದೇಹಪರಿಸರಬ್ರಿಗೇಡಿಯರ್ ರವಿ ಮುನಿಸ್ವಾಮಿವ್ಯಾಯಾಮಸುದ್ದಿಒನ್ಸುದ್ದಿಒನ್ ನ್ಯೂಸ್ಸೈಕಲ್ಹಾನಿ
Advertisement
Next Article