For the best experience, open
https://m.suddione.com
on your mobile browser.
Advertisement

ರೇಣುಕಾ ಸ್ವಾಮಿ ಮನೆಗೆ ಉಮೇಶ ಕಾರಜೋಳ ಭೇಟಿ  : ಸಾಂತ್ವನ

08:11 PM Jun 16, 2024 IST | suddionenews
ರೇಣುಕಾ ಸ್ವಾಮಿ ಮನೆಗೆ ಉಮೇಶ ಕಾರಜೋಳ ಭೇಟಿ    ಸಾಂತ್ವನ
Advertisement

Advertisement

Advertisement

ವರದಿ ಮತ್ತು ಫೋಟೋ ಕೃಪೆ

Advertisement

ಸುರೇಶ್ ಪಟ್ಟಣ್,                         
ಮೊ : 98862 95817

Advertisement
Advertisement

ಸುದ್ದಿಒನ್, ಚಿತ್ರದುರ್ಗ ಜೂ. 16 : ಚಿತ್ರನಟ ದರ್ಶನ ಸಹಚರರಿಂದ ಕೊಲೆಗೀಡಾಗಿರುವ ರೇಣುಕಾ ಸ್ವಾಮಿ ಅವರ ನಿವಾಸಕ್ಕೆ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜೊತೆಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.

ಮಗನ ಅಗಲಿಕೆಯ ದುಃಖದಲ್ಲಿರುವ ತಂದೆ ತಾಯಿಗಳನ್ನು ಭೇಟಿ ಮಾಡಿ, ಈ ಘಟನೆಯಿಂದ ಎಲ್ಲರಿಗೂ ನೋವಾಗಿದೆ,  ಕರುಳ ಕುಡಿ ಕಳೆದುಕೊಂಡ ದುಃಖ ಕಳೆದುಕೊಂಡವರಿಗೆ ಮಾತ್ರ ಗೊತ್ತಾಗುತ್ತದೆ, ಮೃತ ಕುಟುಂಬಕ್ಕೆ ನ್ಯಾಯ ಒದಗಿಸಲು ನಾನು ಸಹ ಬದ್ದ, ಈ ನಿಟ್ಟಿನಲ್ಲಿ ಕುಟುಂಬದ ಧ್ವನಿಯಾಗುವೆ, ಸರ್ಕಾರ ಸಹ ನೊಂದ ಕುಟುಂಬಕ್ಕೆ ನೆರವಾಗಬೇಕು, ಅಭಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಶಶಿಧರ, ಹಾಗೂ ಮಾಜಿ ನಗರಾಭಿವೃದ್ಧಿ ಅಧ್ಯಕ್ಷರಾದ ಬದ್ರಿನಾಥ ಜೊತೆಗಿದ್ದರು.

Advertisement
Tags :
Advertisement