ತುರುವನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರಿಗೆ ಬೆಳೆವಿಮೆ ಹಣವನ್ನು ಖಾತೆಗೆ ಜಮಾಮಾಡುವಂತೆ ಒತ್ತಾಯಿಸಿ ರೈತರ ಮನವಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,ಮೇ.08 : ತಾಲ್ಲೂಕಿನ ತುರುವನೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬೆಳೆ ವಿಮೆಯ ಕಟ್ಟಿದ ರೈತರಿಗೆ ವಿಮಾ ಕಂಪನಿಯವರು ಹಣವನ್ನು ನಿಗದಿಪಡಿಸಿದ್ದಾರೆ. ಆದರೆ ರೈತರ ಖಾತೆಗೆ ನಯಾ ಪೈಸೆ ಹಾಕದೆ ಇರುವ ಕಾರಣ ಅಪರ ಜಿಲ್ಲಾಧಿಕಾರಿರವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿಬಣದಿಂದ ಮನವಿಯನ್ನು ಸಲ್ಲಿಸಲಾಯಿತು.
2023 - 24ನೇ ಸಾಲಿನ ಮುಂಗಾರು ಬೆಳೆಯಾದ ಮೆಕ್ಕೆಜೋಳಕ್ಕೆ ಈ ಭಾಗದ ರೈತರು ಬೆಳೆ ವಿಮೆಯನ್ನು ಪಾವತಿಸಿದ್ದರು, ಸಕಾಲಕ್ಕೆ ಮಳೆ ಬಾರದೆ ಬೆಳೆ ಹಾಳಾಯಿತು, ಈ ಹಿನ್ನಲೆಯಲ್ಲಿ ವಿಮಾ ಕಂಪನಿಯವರು ಬೆಳೆ ವಿಮೆಯ ಹಣವನ್ನು ನಿಗಧಿ ಮಾಡಿದ್ದಾರೆ ಆದರೆ ನಮ್ಮ ಖಾತೆಗಳಿಗೆ ಹಣವನ್ನು ಹಾಕಿಲ್ಲ ಬಡವರಾದ ನಮಗೆ ವಿಮಾ ಕಂಪನಿಯಿಂದ ಬೆಳೆ ವಿಮೆಯ ಹಣವನ್ನು ಕೂಡಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಲಾಯಿತು.
ನಮ್ಮ ಮನವಿಯನ್ನು ಸ್ವೀಕಾರ ಮಾಡಿದ ಅಪರ ಜಿಲ್ಲಾಧಿಕಾರಿಯವರಾದ ಕುಮಾರಸ್ವಾಮಿಯವರು ಶೀಘ್ರದಲ್ಲಿಯೇ ಹಣವನ್ನು ಪಾವತಿಸಲು ಸಂಬಂಧ ಪಟ್ಟ ಇಲಾಖೆಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಶೀಘ್ರವೇ ರೈತರ ಖಾತೆಗೆ ಹಣವನ್ನು ನೀಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್, ತಿಪ್ಪಾರೆಡ್ಡಿ, ನಾಗರಾಜ್, ಪೂಜಾರಪ್ಪ, ದೀಕ್ಷಿತ, ಶ್ರೀನಿವಾಸ್, ಜಯ್ಯಣ್ಣ, ವಾಸುದೇವರೆಡ್ಡಿ ಹಾಜರಿದ್ದರು