For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್ ರವರಿಗೆ ನುಡಿ ನಮನ

04:09 PM Sep 10, 2024 IST | suddionenews
ಚಿತ್ರದುರ್ಗ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್ ರವರಿಗೆ ನುಡಿ ನಮನ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ. ಸೆಪ್ಟೆಂಬರ್. 10 : ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ಪನ್ ಹೆಡ್ಡಿಂಗ್‍ಗಳ ಮೂಲಕವೇ ಕನ್ನಡ ಪತ್ರಿಕೋದ್ಯಮದಲ್ಲಿ ಖ್ಯಾತಿ ಪಡೆದಿರುವ ವಸಂತ ನಾಡಿಗೇರ ಸರಳ ಸಜ್ಜನಿಕೆಯವರಾಗಿದ್ದರು ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಾದ ತುಕರಾಂ ಬಣ್ಣಿಸಿದರು

Advertisement

ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳವಾರ ಪತ್ರಕರ್ತರ ಭವನದಲ್ಲಿ ಇತ್ತಿಚೆಗೆ ನಿಧನರಾದ ಹಿರಿಯ ಪತ್ರಕರ್ತ ವಸಂತ್ ನಾಡಿಗೇರರವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪತ್ರಿಕೆಯಲ್ಲಿ ಅವರು ಶೀರ್ಷಿಕೆಗಳನ್ನು ಕೂಡುವುದರಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಮಾಡುವುದರ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೂಸ ಆಯಾಮವನ್ನು ನೀಡಿದ್ದರು. ತಾವು ಕೆಲಸ ಮಾಡಿದ ವಿವಿಧ ಪತ್ರಿಕೆಗಳಲ್ಲಿ ಉತ್ತಮವಾದ ಶೀರ್ಷಿಕೆಗಳನ್ನು ನೀಡುವುದರ ಮೂಲಕ ಹೆಸರನ್ನು ಪಡೆದಿದ್ದರು. ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿದವರು ಮಾತ್ರ ಉತ್ತಮವಾದ ತಲೆ ಬಹರವನ್ನು ನೀಡಲು ಸಾಧ್ಯವಿದೆ ಇಂತಹ ವ್ಯಕಿತ್ವವನ್ನು ಹೊಂದಿದವರು ವಸಂತರವರು, ಇದ್ದಲ್ಲದೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಳ್ಳುವುದರ ಮೂಲಕ ಅದನ್ನು ತಮ್ಮ ವೃತ್ತಿಯಲ್ಲಿ ಪಾಲಿಸುತ್ತಿದ್ದರು. ಇಂದಿನ ಯುವ ಪತ್ರಕರ್ತರಿಗೆ ಅವರು ಮಾರ್ಗದರ್ಶಕರಾಗಿದ್ದರು ಎಂದರು.

Advertisement

ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕದ ವರದಿಗಾರರಾದ ಬಸವರಾಜು ಮಾತನಾಡಿ, ನನಗೆ ಅವರ ಒಡನಾಟ ಅಷ್ಠಾಗಿ ಇರಲಿಲ್ಲ ದರ್ಶನರವರ ಪ್ರಕರಣದಲ್ಲಿ ಆರೋಪಿಗಳಾದ ಚಿತ್ರದುರ್ಗದ ರವರ ಬಗ್ಗೆ ಅವರ ಮನೆಯ ವಾತಾವರಣದ ಬಗ್ಗೆ ಸುದ್ದಿಯನ್ನು ಮಾಡುವಂತೆ ನಮಗೆ ತಿಳಿಸಿದ್ದರು. ಇದರ ಬಗ್ಗೆ ನಾನು ಸಹಾ ಸುದ್ದಿಯನ್ನು ತಯಾರು ಮಾಡಿ ಕಳುಹಿಸಿದ್ದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡಿ ಪತ್ರಿಕೆಯಲ್ಲಿ ಪ್ರಕಟ ಮಾಡಿದ್ದು ಇದರ ಪೂರ್ಣವಾದ ಹೆಸರು ಅವರಿಗೆ ಸಲ್ಲುತ್ತದೆ ಎಂದು ತಿಳಿಸಿ, ನನಗೆ ಮಾರ್ಗದರ್ಶಕರಾಗಿ ಉತ್ತಮವಾದ ಸಲಹೆಯನ್ನು ನೀಡುವುದರ ಮೂಲಕ ದಾರಿ ದೀಪವಾಗಿದ್ದಾರೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತರು, ಕನ್ನಡಪ್ರಭ ವರದಿಗಾರರಾದ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, 1995ರಲ್ಲಿ ನಾನು ಪತ್ರಕರ್ತನಾಗಿದ್ಧಾಗ ಅವರು ನನಗೆ ಸಹಾಯವನ್ನು ಮಾಡಿದ್ದರು. ಇದ್ದಲ್ಲದೆ ಕನ್ನಡಪ್ರಭ, ವಿಜಯ ಕರ್ನಾಟಕದಲ್ಲಿ ಕೆಲಸವನ್ನು ಮಾಡುವುದರ ಮೂಲಕ ಉತ್ತಮವಾದ ತಲೆ ಬಹರವನ್ನು ನೀಡುವುದರ ಮೂಲಕ ಹೆಸರನ್ನು ಪಡೆದಿದ್ದಾರೆ. ಇವರಲ್ಲಿ ಕಲಿಯುವವರಿಗೆ ಹೆಚ್ಚಿನ ರೀತಿಯ ಪ್ರೋತ್ಸಾಹವನ್ನು ನೀಡುತ್ತಿದ್ದರು, ಈಗ ಅವರಿಗೆ 59 ವರ್ಷ ಸಾಯುವಂತ ವಯಸ್ಸಲ್ಲ, ಅದರೂ ಸಹಾ ಭಗವಂತ ಅವರನ್ನು ಕರೆದುಕೊಂಡಿದ್ದಾನೆ, ಅವರು ಇನ್ನೂ ಬದುಕಿದ್ದರೆ ಹಲವಾರು ಜನರಿಗೆ ನರವಾಗುತ್ತಿದ್ದರು ಎಂದರು.

ಹಿರಿಯ ಪತ್ರಕರ್ತರು ವಿಜಯ ಕರ್ನಾಟಕದ ವರದಿಗಾರರಾದ ಅಹೋಬಲಪತಿ ಮಾತನಾಡಿ, ನಾನು ವಿಜಯ ಕರ್ನಾಟಕದಲ್ಲಿ ಕೆಲಸವನ್ನು ಮಾಡಲು ಒಂದು ರೀತಿಯಲ್ಲಿ ವಸಂತರವರು ನೆರವಾಗಿದ್ದಾರೆ, ನನ್ನ ಹಲವಾರು ಬರಹಗಳನ್ನು ಮೆಚ್ಚಿ ದೂರವಾಣಿಯನ್ನು ಮಾಡಿ ನನಗೆ ಶುಭವನ್ನು ಕೋರಿದ್ದರು. ಸುದ್ದಿ ವಿಷಯದಲ್ಲಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಪತ್ರಿಕೋದ್ಯಮದಲ್ಲಿ ಬೆಳೆಯುವವರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶಕರಾಗಿದ್ದರು. ವಸಂತರವರ ನಿಧನವನ್ನು ಹಲವಾರು ಮಾಧ್ಯಮಗಳು ಸ್ಮರಣೆಯನ್ನು ಮಾಡಿದ್ದಾರೆ. ಇನ್ನೂ ಮುಂದೆ ಇಂತಹ ಪತ್ರಕರ್ತರ ಸಂಖ್ಯೆ ಕಡಿಮೆಯಾಗುವ ನೀರಿಕ್ಷೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ ಮಾತನಾಡಿ, ವಸಂತರವರು ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಉತ್ತಮವಾದ ಹಿಡಿತವನ್ನು ಸಾಧಿಸಿದ್ದರು, ಯುವ ಪತ್ರಕರ್ತರಿಗೆ ದಾರಿ ದೀಪವಾಗಿದ್ದರು, ಅವರನ್ನು ಬೆನ್ನು ತಟ್ಟುವ ಕಾರ್ಯವನ್ನು ಮಾಡಿದ್ದಾರೆ. ಪತ್ರಕರ್ತರು ಯಾವ ರೀತಿ ಇರಬೇಕು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಇವರ ಮಾರ್ಗದರ್ಶನ ಬೇರೆ ಪತ್ರಕರ್ತರಿಗೆ ಮಾದರಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರಾದ ಆಶೋಕ ಸಂಗೇನಹಳ್ಳಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲರಾದ ಯಾದವ ರೆಡ್ಡಿ, ನೀರಾವರಿ ಹೋರಾಟ ಸಮಿತಿಯ ದಯಾನಂದ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

Tags :
Advertisement