Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಫೆಬ್ರವರಿ  3 ರಂದು ಎರೆಹುಳು ಗೊಬ್ಬರ ಉತ್ಪಾದನಾ ತಾಂತ್ರಿಕತೆ ಕುರಿತು ತರಬೇತಿ ಕಾರ್ಯಕ್ರಮ

05:33 PM Feb 01, 2024 IST | suddionenews
Advertisement

ಚಿತ್ರದುರ್ಗ. ಫೆ.01: ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆ.3ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ರೈತರಿಗೆ “ಎರೆಹುಳು ಗೊಬ್ಬರ ಉತ್ಪಾದನಾ ತಾಂತ್ರಿಕತೆ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

Advertisement

ತರಬೇತಿ ಕಾರ್ಯಕ್ರಮದಲ್ಲಿ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ತಜ್ಞ ಡಾ.ರುದ್ರಮುನಿ ಹಾಗೂ ಹಿರಿಯೂರು ತಾಲ್ಲೂಕಿನ ಗುಳಗೊಂಡನಹಳ್ಳಿ ಗ್ರಾಮದ ಎರೆಹುಳು ಗೊಬ್ಬರ ಉತ್ಪಾದನಾ ಪ್ರಗತಿಪರ ಕೃಷಿಕ ನಾಗರಾಜಪ್ಪ ಅವರು ವಿಷಯ ಮಂಡನೆ ಮತ್ತು ಪ್ರಾತ್ಯಕ್ಷಿಕೆ ನೀಡುವರು.

ಆಸಕ್ತ 50 ಜನ ರೈತಭಾಂದವರು ತರಬೇತಿಯಲ್ಲಿ ಭಾಗವಹಿಸಲು ಆರ್.ರಜನೀಕಾಂತ, ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂ (8277931058) ಎಂ.ಉಷಾರಾಣಿ, ಸಹಾಯಕ ಕೃಷಿ ನಿರ್ದೇಶಕರು (ರೈ.ಮ) (9980730696), ಟಿ.ಪಿ. ರಂಜಿತಾ, ಕೃಷಿ ಅಧಿಕಾರಿ (8277930959), ಸಿಕಂದರ್ ಬಾಷಾ, ಕೃಷಿ ಅಧಿಕಾರಿ (8277931028) ಮತ್ತು ಎಂ.ಜೆ. ಪವಿತ್ರಾ (9535412286) ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

Advertisement

ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಎಂದು ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.

Advertisement
Tags :
chitradurgaEarthworm Fertilizer ProductionsuddioneTechnologytraining programಉತ್ಪಾದನಾ ತಾಂತ್ರಿಕತೆಎರೆಹುಳು ಗೊಬ್ಬರಚಿತ್ರದುರ್ಗತರಬೇತಿ ಕಾರ್ಯಕ್ರಮಸುದ್ದಿಒನ್
Advertisement
Next Article