Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಾರ್ಚ್ 02ರಂದು ಸೂಕ್ಷ್ಮ ಮತ್ತು ತುಂತುರ ನೀರಾವರಿ ಘಟಕಗಳ ಅಳವಡಿಕೆ ಉಪಯೋಗ ಮತ್ತು ನಿರ್ವಹಣೆ ಕುರಿತು ತರಬೇತಿ

03:59 PM Feb 29, 2024 IST | suddionenews
Advertisement

 

Advertisement

ಚಿತ್ರದುರ್ಗ. ಫೆ.29:  ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಾರ್ಚ್ 02ರಂದು ಬೆಳಿಗ್ಗೆ 10.30ಕ್ಕೆ ಹೊಳಲ್ಕೆರೆ ತಾಲ್ಲೂಕಿನ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಮತ್ತು ತುಂತುರ ನೀರಾವರಿ ಘಟಕಗಳ ಅಳವಡಿಕೆ, ಅವುಗಳ ಉಪಯೋಗ ಮತ್ತು ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಎರಡು ತಂಡಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಬೆಂಗಳೂರು ಜೈನ್ ಇರೀಗೇಷನ್‍ನ ಬೇಸಾಯ ತಜ್ಞ ಕೆ.ದೇವರಾಜು ಅವರು, ನೀರಿನ ಸಮರ್ಥ ಬಳಕೆ, ಹನಿ ನೀರಾವರಿ ಮತ್ತು ಸ್ಪ್ರೀಂಕ್ಲರ್ ಘಟಕಗಳ ಅಳವಡಿಕೆ, ಉಪಯೋಗ ಮತ್ತು ಅವುಗಳ ನಿರ್ವಹಣೆಯ ಕುರಿತು ವಿಷಯ ಮಂಡನೆ ಮತ್ತು ಪ್ರಾತ್ಯಕ್ಷಿಕೆ ಮಾಡಲಿದ್ದಾರೆ. ನಂತರ ತರಬೇತಿಗೆ ಹಾಜರಾದ ರೈತರನ್ನು ಬಬ್ಬೂರಿನ ಜವಳಿ ಫಾರಂನ ಸಮಗ್ರ ಕೃಷಿ ಪದ್ದತಿ ತಾಕನ್ನು ವೀಕ್ಷಣೆಗೆ ಕರೆದುಕೊಂಡು ಹೋಗಲಾಗುವುದು.

Advertisement

ಆದ ಪ್ರಯುಕ್ತ ಹೊಳಲ್ಕೆರೆ ತಾಲ್ಲೂಕಿನ 100 ಜನ ಆಸಕ್ತ ರೈತ ಭಾಂದವರು ತರಬೇತಿಯಲ್ಲಿ ಭಾಗವಹಿಸಲು ರಜನೀಕಾಂತ. ಆರ್, ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂ (8277931058), ಟಿ.ಪಿ.ರಂಜಿತಾ, ಕೃಷಿ ಅಧಿಕಾರಿ (8277930959), ಸಿಕಂದರ್ ಬಾಷಾ, ಕೃಷಿ ಅಧಿಕಾರಿ (8277931058) ಮತ್ತು ಪವಿತ್ರಾ ಎಂ. ಜೆ. (9535412286) ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

ಮೊದಲು ನೋಂದಾವಣಿ ಮಾಡಿಕೊಂಡ 100 ಜನ ರೈತರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
bengaluruchitradurgainstallationirrigationmaintenanceMarchmicrosprinklersuddionesuddione newstrainingunitsಅಳವಡಿಕೆಉಪಯೋಗಘಟಕಗಳುಚಿತ್ರದುರ್ಗತರಬೇತಿತುಂತುರ ನೀರಾವರಿನಿರ್ವಹಣೆಬೆಂಗಳೂರುಮಾರ್ಚ್‌ಸುದ್ದಿಒನ್ಸುದ್ದಿಒನ್ ನ್ಯೂಸ್ಸೂಕ್ಷ್ಮ
Advertisement
Next Article