Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೇಕರಿ ಉತ್ಪನ್ನಗಳ ಕುರಿತು ತರಬೇತಿ : ಇಚ್ಛೆಯುಳ್ಳವರು ಸಂಪರ್ಕಿಸಿ...!

02:25 PM Sep 06, 2024 IST | suddionenews
Advertisement

 

Advertisement

ಚಿತ್ರದುರ್ಗ. ಸೆಪ್ಟೆಂಬರ್.06: ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ಥಾಪಿಸಿರುವ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್, ರಾಗಿ ಬಿಸ್ಕತ್, ಕೊಬ್ಬರಿ ಬಿಸ್ಕತ್, ಫ್ರೂಟ್ ಕೇಕ್, ಪ್ಲೇನ್ ಕೇಕ್, ಹನಿ ಕೇಕ್, ಬ್ರೆಡ್, ಬನ್, ಖಾರ ಬನ್, ದಿಲ್ ಪಸಂದ್, ಸಿರಿಧಾನ್ಯಗಳ ಬಿಸ್ಕತ್ ಹಾಗೂ ಇನ್ನಿತರ ಉತ್ಪನ್ನಗಳ ತಯಾರಿಕೆಯ ಕುರಿತು ಇದೇ ಸೆ.23 ರಿಂದ ಅಕ್ಟೋಬರ್ 23 ರವರೆಗೆ ಒಂದು ತಿಂಗಳ ಪ್ರಮಾಣ ಪತ್ರ ಕೋರ್ಸ್ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ತರಬೇತಿಯಲ್ಲಿ ಭಾಗವಹಿಸಲು ಇಚ್ಚೆಯುಳ್ಳವರು ತರಬೇತಿ ಶುಲ್ಕ ರೂ.3000/- ಪಾವತಿಸಿ, ಇದೇ ಸೆಪ್ಟೆಂಬರ್ 20ರೊಳಗಾಗಿ ದೂರವಾಣಿ ಮುಖಾಂತರ ಅಥವಾ ಖುದ್ದಾಗಿ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ. ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಜೆ.ಎಂ.ಸರಸ್ವತಿ ಅವರ ಮೊಬೈಲ್ ಸಂಖ್ಯೆಗೆ 9986647124 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement

Advertisement
Tags :
Bakerybengaluruchitradurgacontactproductssuddionesuddione newstrainingಉತ್ಪನ್ನಗಳುಚಿತ್ರದುರ್ಗತರಬೇತಿಬೆಂಗಳೂರುಬೇಕರಿಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article