Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಕ್ರಮ ಜಾನುವಾರುಗಳ ಸಾಗಾಟ | ಹಿಂದೂ ಕಾರ್ಯಕರ್ತರಿಂದ 23 ಜಾನುವಾರುಗಳ ರಕ್ಷಣೆ, ಮೂವರ ಬಂಧನ

08:27 AM Dec 01, 2023 IST | suddionenews
Advertisement

ಸುದ್ದಿಒನ್, ಹಿರಿಯೂರು, ಡಿಸೆಂಬರ್.01 :ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 23 ಜಾನುವಾರುಗಳನ್ನು ದಾಳಿ ನಡೆಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ ಘಟನೆ ತಾಲೂಕಿನ ಗುಯಿಲಾಳು ಟೋಲ್ ಬಳಿ ಶುಕ್ರವಾರ ನಡೆದಿದೆ.

Advertisement

ಇಂದು ಬೆಳಗಿನ ಜಾವ 3:00 ಸಮಯದಲ್ಲಿ
ಖಚಿತ ಮಾಹಿತಿ ಮೇರೆಗೆ ಹಿಂದೂ ಕಾರ್ಯಕರ್ತರು ದಾವಣಗೆರೆ ಕಡೆಯಿಂದ ಹಿರಿಯೂರು ಮಾರ್ಗವಾಗಿ ಕೇರಳ ಕಡೆಗೆ ಕ್ಯಾಂಟರ್ ಲಾರಿಯಲ್ಲಿ 23 ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರ ಸಹಕಾರದಿಂದ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ 14 ಕೋಣಗಳು, 5 ಎಮ್ಮೆಗಳು ಹಾಗೂ 4 ಎತ್ತುಗಳನ್ನು ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಚಾಲಕ ಇದಾಯತ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಜಾನುವಾರುಗಳನ್ನು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀನಿವಾಸ್, ಗೋ ರಕ್ಷಾ ಪ್ರಮುಖ್ ವಿಶ್ವನಾಥ್, ವಿ ಹಿಂ‌ ಪ ತಾ ಉಪಾಧ್ಯಕ್ಷ ಚರಣ್, ಬಜರಂಗದಳ ಸಂಯೋಜಕ್ ಗೋವರ್ಧನ್ ಇದ್ದರು.

Advertisement
Tags :
23 cattle rescued23 ಜಾನುವಾರುಗಳ ರಕ್ಷಣೆchitradurgaHindu activistshiriyurThree arrestedTrafficking of illegal cattleಅಕ್ರಮ ಜಾನುವಾರುಗಳ ಸಾಗಾಟಚಿತ್ರದುರ್ಗಮೂವರ ಬಂಧನಹಿಂದೂ ಕಾರ್ಯಕರ್ತಹಿರಿಯೂರು
Advertisement
Next Article