For the best experience, open
https://m.suddione.com
on your mobile browser.
Advertisement

Traffic Violations : ಟ್ರಾಫಿಕ್‌ ಪೊಲೀಸರ ಬಂಪರ್ ಆಫರ್ : ರಸ್ತೆಯಲ್ಲಿ ಈ ಕೆಲಸ ಮಾಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ...!

09:55 PM Sep 02, 2024 IST | suddionenews
traffic violations   ಟ್ರಾಫಿಕ್‌ ಪೊಲೀಸರ ಬಂಪರ್ ಆಫರ್   ರಸ್ತೆಯಲ್ಲಿ ಈ ಕೆಲಸ ಮಾಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ
Advertisement

Advertisement
Advertisement

ಸುದ್ದಿಒನ್, ನವದೆಹಲಿ, ಸೆಪ್ಟೆಂಬರ್. 02 : ವಾಹನ ಸವಾರರು ಸಂಚಾರ ನಿಯಮ ಪಾಲನೆ ಮಾಡದ ಕಾರಣ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಸಂಚಾರ ನಿಯಮ ಪಾಲಿಸದ ವಾಹನ ಸವಾರರಿಗೆ ಪೊಲೀಸರು ಚಲನ್ ನೀಡುತ್ತಲೇ ಇದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದಂತೆ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾಹನ ಸವಾರರು ಈ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಅನೇಕ ವಾಹನ ಸವಾರರು ಅವರನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ. ಸಿಸಿಟಿವಿ ಕ್ಯಾಮೆರಾ, ವೈರಲ್ ವಿಡಿಯೋ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಾಹನ ಸವಾರರನ್ನು ಗುರುತಿಸಿ ಚಲನ್ ವಿತರಿಸಿ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ದೆಹಲಿ ಟ್ರಾಫಿಕ್ ಪೊಲೀಸರು ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.

ದೆಹಲಿ ನಗರದ ಹಲವು ಭಾಗಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಜೊತೆಗೆ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ವಾಹನ ಚಾಲಕರಿರಬಹುದು, ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ಮತ್ತು ಇತರ ನಾಗರಿಕರಿರು ಕೂಡಾ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಾಡಬಹುದು ಎಂದು ದೆಹಲಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ಫೋಟೋ ಹಾಗೂ ವಿವರಗಳನ್ನು ದೆಹಲಿ ಸಂಚಾರ ಪೊಲೀಸರಿಗೆ ನೀಡಿದರೆ ಭಾರಿ ನಗದು ಬಹುಮಾನ ಪಡೆಯಬಹುದು ಎಂದು ಪ್ರಕಟಿಸಿದ್ದಾರೆ.

Advertisement

ರಸ್ತೆಯಲ್ಲಿ ಯಾರಾದರೂ ಸಂಚಾರ ನಿಯಮ ಉಲ್ಲಂಘಿಸಿದರೆ ಅಲ್ಲಿಂದಲೇ ಅದರ ಫೋಟೊ, ವಿಡಿಯೋಗಳನ್ನು ಸೆಲ್ ಫೋನ್ ನಲ್ಲಿ ಕಳುಹಿಸಬಹುದು. ಇದಕ್ಕಾಗಿ ಟ್ರಾಫಿಕ್ ಪ್ರಹರಿ ಎಂಬ ಆ್ಯಪ್ ತಂದಿದೆ. ಈ ಆ್ಯಪ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರು ಫೋಟೋ, ವಿಡಿಯೋ, ವಾಹನ ಸಂಖ್ಯೆ ಸೇರಿದಂತೆ ಹಲವು ವಿವರಗಳನ್ನು ಅಪ್‌ಲೋಡ್ ಮಾಡಬೇಕು. ಸಂಚಾರ ನಿಯಮ ಉಲ್ಲಂಘಿಸುವವರ ವಿವರ ನೀಡಿದವರಿಗೆ ಗರಿಷ್ಠ 50,000 ರೂಪಾಯಿ ಬಹುಮಾನ ನೀಡಲಾಗುವುದು ಎಂದು ದೆಹಲಿ ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.

Advertisement

ಈ ನಿಯಮವನ್ನು ಸೆಪ್ಟೆಂಬರ್ 1 ರಿಂದ ಜಾರಿಗೊಳಿಸಲಾಗಿದೆ. ಈ ಟ್ರಾಫಿಕ್ ಪ್ರಹರಿ ಆ್ಯಪ್ ಮೂಲಕ ಬಂದಿರುವ ದೂರುಗಳನ್ನು ಪರಿಹರಿಸಿದ ನಂತರ, ಸಂಬಂಧಪಟ್ಟ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಆ್ಯಪ್ ಮೂಲಕ ದೂರು ನೀಡಿದವರಿಗೆ ರೂ.10 ಸಾವಿರದಿಂದ ರೂ.50 ಸಾವಿರ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇತ್ತೀಚೆಗೆ ದೆಹಲಿ ಟ್ರಾಫಿಕ್ ಪೊಲೀಸರಿಗೆ ಅಸ್ತಿತ್ವದಲ್ಲಿರುವ ಟ್ರಾಫಿಕ್ ಸೆಂಟಿನಲ್ ಮೊಬೈಲ್ ಅಪ್ಲಿಕೇಶನ್ ಅನ್ನು ನವೀಕರಿಸಲು ಮತ್ತು ಹೊಸ ಟ್ರಾಫಿಕ್ ಅಲರ್ಟ್ ಅಪ್ಲಿಕೇಶನ್ ಅನ್ನು ಪರಿಚಯಿಸಲು ಆದೇಶ ಹೊರಡಿಸಿದ್ದರು. ಯಾರು ಹೆಚ್ಚು ದೂರುಗಳನ್ನು ಸಲ್ಲಿಸುತ್ತಾರೋ ಅವರು ನಗದು ಬಹುಮಾನವನ್ನು ಪಡೆಯುತ್ತಾರೆ. ದೆಹಲಿ ಸಂಚಾರ ಪೊಲೀಸರು 4 ವಿಭಾಗಗಳ ಅಡಿಯಲ್ಲಿ ಈ ನಗದು ಬಹುಮಾನಗಳನ್ನು ನೀಡುತ್ತಾರೆ.

ಮೊದಲ ಬಹುಮಾನವಾಗಿ 50 ಸಾವಿರ, 2ನೇ ಬಹುಮಾನವಾಗಿ 25 ಸಾವಿರ, 3ನೇ ಬಹುಮಾನವಾಗಿ 15 ಸಾವಿರ, 4ನೇ ಬಹುಮಾನವಾಗಿ 10 ಸಾವಿರ ನೀಡಲಾಗುವುದು. ಹೀಗೆ ಮಾಡುವುದರಿಂದ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗಲಿದೆ ಎಂಬುದು ದೆಹಲಿ ಸಂಚಾರ ಪೊಲೀಸರ ಆಶಯ ವ್ಯಕ್ತಪಡಿಸಿದ್ದಾರೆ.

Tags :
Advertisement