Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡಿಸೆಂಬರ್ 16 ರಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಡೆಸ್ಟಿನಿ 2023ರ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

09:46 PM Dec 15, 2023 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.15 :  ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಡಿಯಲ್ಲಿ ಪ್ರತಿವರ್ಷವೂ ಆಯೋಜಿಸುವ “ಡೆಸ್ಟಿನಿ” - ಬೃಹತ್ ಸಾಂಸ್ಕøತಿಕ ಹಬ್ಬವನ್ನು ನಾಳೆ ಡಿಸೆಂಬರ್ 16 ರಂದು ಆಯೋಜಿಸಲಾಗಿದೆ.

“ವಿಜ್ಞಾನ ವಸ್ತುಪ್ರದರ್ಶನ”ವನ್ನು ಚಳ್ಳಕೆರೆ ಸಮೀಪವಿರುವ ಕುದಾಪುರದ ಡಿ.ಆರ್.ಡಿ.ಓ ಸಂಸ್ಥೆಯ ವಿಜ್ಞಾನಿಗಳಾಗಿರುವ ಡಾ. ಆರ್ ಮಹೇಶ್‍ಬಾಬು ಹಾಗೂ ಡಾ. ಸಲೀಂ ಸಾಜಿದ್‍ರವರು ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

Advertisement

ಮುಖ್ಯ ಅತಿಥಿಗಳಾಗಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಾಸಕ ಎಂ.ಚಂದ್ರಪ್ಪ,  ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ, ಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಸಿ.ರಘುಚಂದನ್ ಹಾಗೂ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಜ್ಞಾನ ವಸ್ತುಪ್ರದರ್ಶನವು ಅಂತರ್-ಶಾಲಾ ಹಾಗೂ ಅಂತರ್-ಕಾಲೇಜು ಸ್ಪರ್ಧೆಯಾಗಿದ್ದು, ಮೂರು ಹಂತಗಳಲ್ಲಿ ಆಯೋಜನೆಯಾಗಿದೆ. ಮೊದಲನೇ ಹಂತದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಎರಡನೇ ಹಂತದಲ್ಲಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಹಾಗೂ ಮೂರನೇ ಹಂತದಲ್ಲಿ ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿದೆ. ಚಿತ್ರದುರ್ಗ ನಗರದ ವಿವಿಧ ಶಾಲಾ ಕಾಲೇಜುಗಳಿಂದ ಒಟ್ಟು 182 ವಿವಿಧ ವಿಜ್ಞಾನ ಮಾದರಿಗಳು ಮತ್ತು ಪರಿಕಲ್ಪನೆಗಳನ್ನು ಪ್ರದರ್ಶನಗೊಳ್ಳುತ್ತಿವೆ.

Advertisement
Tags :
chitradurgaDestiny 2023Devaraj Aras Educational Institutionfeaturedscience fairsuddioneಕಾರ್ಯಕ್ರಮಡಿಸೆಂಬರ್ಡೆಸ್ಟಿನಿ 2023ದೇವರಾಜ್ ಅರಸ್ ಶಿಕ್ಷಣ ಸಂಸ್ಥೆವಿಜ್ಞಾನ ವಸ್ತು ಪ್ರದರ್ಶನಸುದ್ದಿಒನ್
Advertisement
Next Article