Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಂದಿನ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಅಗತ್ಯವಿದೆ : ಆಶೋಕ ಹಾರನಹಳ್ಳಿ

09:15 PM Jan 27, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜ. 27:  ಸಂಘಟನೆ, ಸಂಸ್ಕಾರ ಮತ್ತು ಸ್ವಾವಲಂಬನೆ ನಮ್ಮ ಮೂಲಭೂತ ಅವಶ್ಯಕತೆಯಾಗಬೇಕಿದೆ ಎಂದು ನ್ಯಾಯಾವಾದಿಗಳು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಆಶೋಕ ಹಾರನಹಳ್ಳಿ ತಿಳಿಸಿದರು.

Advertisement

ನಗರದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕಳೆದ 20 ರಿಂದ ನಡೆಯುತ್ತಿರುವ ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕನಕಪುರಂದರಾದಿ ಹರಿದಾಸರುಗಳ ಸ್ಮರಣೆಯ ಹರಿದಾಸ ಹಬ್ಬ 2024 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಅಗತ್ಯ ಇದೆ ಇದನ್ನು ಯಾವ ಶಾಲೆಯಲ್ಲಿಯೂ ಹೇಳಿ ಕೊಡುವುದಿಲ್ಲ ಇದರ ಬದಲಾಗಿ ನಮ್ಮ ನಮ್ಮ ಮನೆಗಳಲ್ಲಿ ತಿಳಿಸುವ ಕಾರ್ಯವನ್ನು ಮಾಡಬೇಕಿದೆ, ಇದರಿಂದ ಮುಂದೆ ನಮ್ಮ ಮಕ್ಕಳು ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ. ಇದರೊಂದಿಗೆ ನಾವುಗಳು ಸಹಾ ನಮ್ಮ ಉದ್ದಾರವನ್ನು ನಾವೇ ಮಾಡಿಕೊಳ್ಳಬೇಕಿದೆ ಬೇರೆ ಯಾರೂ ಬಂದು ಮಾಡುತ್ತಾರೆ ಎಂಬ ಭ್ರಮೆಯಲ್ಲಿ ಇರಬಾರದು ಇದರಿಂದ ಸ್ವಾವಲಂಬೀಯ ಬದುಕನ್ನು ಸಾಗಿಸಬೇಕಿದೆ, ನಮ್ಮಲ್ಲಿ ಸಂಘಟನೆಯ ಅಗತ್ಯ ಇದೆ ಇದಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಿದೆ ಇದರಿಂದ ನಾವುಗಳು ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದರು.

ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಹಾ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಕೇಂದ್ರಗಳ ಅಗತ್ಯ ಇದೆ. ನಾವು ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸದಿದ್ದರೆ ಬೇರೆಯವರು ಯಾರೂ ಕಲಿಸುತ್ತಾರೆ, ಸಂಸ್ಕಾರದಿಂದ ಸಂಸ್ಕøತಿಯ ರಕ್ಷಣೆಯಾಗಬೇಕಿದೆ. ಇದರ ಬಗ್ಗೆ ಯುವ ಜನಾಂಗ ಆಲೋಚನೆಯನ್ನು ಮಾಡಬೇಕಿದೆ. ಅಲ್ಲದೆ ಇದರ ಬಗ್ಗೆ ತಿಳಿಸುವ ಕಾರ್ಯವನ್ನು ಸಹಾ ಮಾಡಬೇಕಿದೆ ಎಂದ ಅವರು, ಬ್ರಾಹ್ಮಣ ಜಾತಿಯಲ್ಲಿ ದೋಷವನ್ನು ಹುಡುಕುವ ಕೆಟ್ಟ ಸಂಪ್ರದಾಯ ಈಗ ಪ್ರಾರಂಭವಾಗಿದೆ. ಇದರ ಬಗ್ಗೆ ಆಲೋಚನೆಯನ್ನು ಮಾಡಬೇಕಿದೆ. ನಮಗೆ ನಾವೇ ಸಹಾಯವನ್ನು ಮಾಡಿಕೊಳ್ಳಬೇಕಿದೆ. ಸರ್ಕಾರ ನಮ್ಮ ಸಹಾಯಕ್ಕೆ ಇದೆ ಎನ್ನುವುದನ್ನು ಮರೆಯಬೇಕಿದೆ. ಸನಾತನವಾದ ಧರ್ಮ ಬ್ರಾಹ್ಮಣ ಧರ್ಮವಾಗಿದೆ ಎಂದರು.

ಈ ವರ್ಷ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯವಾಗಿದೆ ಇದು ಎಲ್ಲಾ ಹಿಂದುಗಳ ಉತ್ತಮವಾದ ಕೆಲಸವಾಗಿದೆ.  ಸಂತೋಷದಿಂದ ಆ ದಿನವನ್ನು ನಾವು ಆಚರಣೆ ಮಾಡಿದ್ದೇವೆ, ದೇಶದ ಎಲ್ಲಾ ಭಾಗದಲ್ಲಿಯೂ ಸಹಾ ಇದನ್ನು ಆಚರಣೆ ಮಾಡಿದ್ದಾರೆ, ಆಯೋಧ್ಯೆ ಹಿಂದುಗಳ ಶ್ರದ್ದಾ ಕೇಂದ್ರವಾಗಿದೆ. ಶ್ರೀರಾಮ ಮಂದಿರದ ನಿರ್ಮಾಣದ ತಳಹದಿಯ ನಿರ್ಮಾಣದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು ನಿಮ್ಮ ಚಿತ್ರದುರ್ಗದ ತಳುಕಿನವು ಇದೇ ರೀತಿ ದೇವಾಲಯದ ಪ್ರಾರಂಭದಲ್ಲಿ ಗಣಪತಿಯ ವಿಗ್ರಹವನ್ನು ಕೆತ್ತಿ ಕೊಟ್ಟವರು ನಿಮ್ಮ ಚಿತ್ರದುರ್ಗದವರು ಇದು ಹೆಮ್ಮೆಯ ವಿಷಯವಾಗಿದೆ.

ನಮ್ಮಲ್ಲಿ ನಮ್ಮ ಧರ್ಮದ ಬಗ್ಗೆ ಶ್ರದ್ದೇ ಇರಬೇಕಿ ಇದರ ಬಗೆಗ ಕಿಳೀರಿಮೆ ಇರಬಾರದು ನಮ್ಮಲ್ಲಿಯೇ ಈ ರೀತಿ ಇದ್ದರೆ ಬೇರೆಯವರು ಯಾವ ರೀತಿ ನಮ್ಮ ಧರ್ಮವನ್ನು ಕಾಣುತ್ತಾರೆ ಮೊದಲು ನಾವು ನಮ್ಮ ಧರ್ಮಕ್ಕೆ ಮಾನ್ಯತೆಯನ್ನು ನೀಡಬೇಕಿದೆ. ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಿಂದ ನಮ್ಮಲ್ಲಿ ಹೂಸದಾದ ಚೈತನ್ಯ ಮೂಡಿದೆ. ರಾಮ ಸನಾತನ ಧರ್ಮನಾಗಿದ್ದು ಶಕ್ತಿಯನ್ನು ತುಂಬಿದ್ದಾನೆ ಎಂದು ಆಶೋಕ ಹಾರನಹಳ್ಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ರಾಮ ದೇವಾಲಯದಲ್ಲಿ ಗಣಪತಿ ಮೂರ್ತಿಯನ್ನು ಕೆತ್ತಿಕೊಟ್ಟ ಚಿತ್ರದುರ್ಗದ ಹುಡುಗ ಕೀರ್ತಿಯನ್ನು ಸನ್ಮಾನಿಸಲಾಯಿತು. ಇಂದು ಬೆಳ್ಳಿಗೆ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ವಾಯುಸ್ತುತಿ ಪುನಃಶ್ಚರಣ ಹೋಮ, ಪುಣ್ಯಾಹ, ಕಳಶ ಸ್ಥಾಪನೆ, ಹೋಮ ಪೂರ್ಣಾಹುತಿ ಕಾರ್ಯಕ್ರಮ ನಡೆಯಿತು.ಸಂಜೆ  ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶ್ರೀರಾಮ ಸಂಕೀರ್ತನ ಶ್ರೀ ಬೃಂದಾವನ ಭಜನಾ ಮಂಡಲಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಟಿ.ಕೆ.ನಾಗರಾಜರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಮುರಳಿಧರ ಹಾಗೂ ದಾಸ ಲಹರಿಯ ಮನೋಜವಂ ಆತ್ರೇಯ ಭಾಗಹಿಸಿದ್ದರು. ಟ್ರಸ್ಟ್ ನ ಕಾರ್ಯದರ್ಶಿ ಜೋಯಿಸ್ ಹುಲಿರಾಜ್ ಸ್ವಾಗತಿಸಿದರು. ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Ashoka Haranahallichitradurgataught cultureToday's childrenಆಶೋಕ ಹಾರನಹಳ್ಳಿಚಿತ್ರದುರ್ಗಮಕ್ಕಳುಸಂಸ್ಕಾರ ಕಲಿಸುವ ಅಗತ್ಯವಿದೆ
Advertisement
Next Article