Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಭಾರತೀಯ ವೈದ್ಯಕೀಯ ಸಂಘಕ್ಕೆ 5 ಎಕರೆ ಭೂಮಿ ಕೊಡಿ : ಚಿತ್ರದುರ್ಗ ಜಿಲ್ಲಾ ಶಾಖೆ ಮನವಿ

04:56 PM May 24, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಮೇ. 24 : ಭಾರತೀಯ ವೈದ್ಯಕೀಯ ಸಂಘ, ಚಿತ್ರದುರ್ಗ ಜಿಲ್ಲಾ ಶಾಖೆಗೆ 5 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಬೇಕೆಂದು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು.

Advertisement

ಸಂಘವು ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಅವಿರಿತವಾಗಿ 50 ವರ್ಷಗಳಿಂದಲೂ ಮಾಡುತ್ತಾ ಬಂದಿದೆ.  ಸಂಘಕ್ಕೆ ಸುಮಾರು 5 ಎಕರೆ ಜಮೀನು ಅವಶ್ಯಕತೆ ಇದ್ದು, ಈಗಾಗಲೇ ಇಂಗಳದಾಳು ಕಣಿವೆ ವ್ಯಾಪ್ತಿಯಲ್ಲಿ 5 ಎಕರೆ ಸರ್ವೆಮಾಡಿಸಿ, ಸಂಘಕ್ಕೆಂದು ಕಾಯ್ದಿರಿಸಲಾಗಿದ್ದು, ಸದರಿ ಜಾಗದಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ, ಉಚಿತ ಆರೋಗ್ಯ ಶಿಬಿರಗಳನ್ನು ಹಾಗೂ ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಸಂಘಕ್ಕೆ ಹಾಗೂ ಸದಸ್ಯರಿಗೆ ಅಒಇ ವೈದ್ಯಕೀಯ ಸಮ್ಮೇಳನಗಳನ್ನು ಮಾಡಲು ಅವಶ್ಯಕತೆ ಇದೆ.

ಕೋರೋನ ಮಹಾಮಾರಿಯಂತೆ ಮಾರಣಾಂತಿಕ ಕಾಯಿಲೆಗಳು ಬಂದಾಗ ಸದಸ್ಯೆರಿಗೆ, ಪ್ರತ್ಯೆಕಿಸಿ ಚಿಕಿತ್ಸೆ ನೀಡಲು ಅನುಕೂಲ ವಾಗುವಂತೆ ಜಮೀನಿನ ಅವಶ್ಯಕತೆ ಇರುವುದರಿಂದ ಸರ್ಕಾರಿ ಜಮೀನನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ
ಡಾ|| ಪಿ.ಟಿ. ವಿಜಯಕುಮರ್, ಕಾರ್ಯದರ್ಶಿ
ಡಾ|| ಕೆ.ಎಂ. ಬಸವರಾಜ್, ಡಾ.ಕೃಷ್ಣಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

Advertisement
Tags :
bengalurubranchchitradurgachitradurga districtIndian Medical AssociationLandRequestsuddionesuddione newsಎಕರೆಚಿತ್ರದುರ್ಗಜಿಲ್ಲಾ ಶಾಖೆಬೆಂಗಳೂರುಭಾರತೀಯ ವೈದ್ಯಕೀಯ ಸಂಘಭೂಮಿಮನವಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article