For the best experience, open
https://m.suddione.com
on your mobile browser.
Advertisement

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಭಾರತೀಯ ವೈದ್ಯಕೀಯ ಸಂಘ ಮನವಿ

03:59 PM May 24, 2024 IST | suddionenews
ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ  ಭಾರತೀಯ ವೈದ್ಯಕೀಯ ಸಂಘ ಮನವಿ
Advertisement

ವರದಿ ಮತ್ತು ಫೋಟೋ ಕೃಪೆ
                        ಸುರೇಶ್ ಪಟ್ಟಣ್,                         
ಮೊ : 98862 95817

Advertisement
Advertisement

ಸುದ್ದಿಒನ್, ಚಿತ್ರದುರ್ಗ ಮೇ. 24 : ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೊಸದಾಗಿ ವಿಶೇಷ ಡಿ.ಪಿ.ಆರ್. ಅನ್ನು ಮುಂದಿನ ನೂರು ವರುಷಗಳಿಗೆ ದೂರದೃಷ್ಠಿಯಲ್ಲಿ ಚಿಂತನೆ ಮಾಡಿ ಸದರಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಾಲೇಜು ಕಟ್ಟಡ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ಸೌಲಭ್ಯಗಳು, ಸಭಾಂಗಣ, ಕ್ರೀಡಾಂಗಣ ಮತ್ತು ಗ್ರಂಥಾಲಯ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿ ಚಿತ್ರದುರ್ಗ ಶಾಖೆಯ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ.

ಈಗಾಗಲೇ ಹಾಲಿ ಡಿ.ಪಿ.ಆರ್.ನಂತೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನ ವೈದ್ಯಕೀಯ ಕಾಲೇಜು ಕಟ್ಟಡವನ್ನು ಸುಸಜ್ಜಿತವಾಗಿರುವ 20 ಕಟ್ಟಡಗಳನ್ನು ಕೆಡವಿ, ಹೊಸ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ ಮಾಡಲು ಕೈಗೊಂಡಿರುತ್ತಾರೆ. ಸದರಿ ಆವರಣದಲ್ಲಿ ಎನ್.ಎಂ.ಸಿ. ಮಾರ್ಗಸೂಚಿ ಪ್ರಕಾರ ಸಭಾಂಗಣ, 24 ಗಂಟೆಗಳು ನಡೆಸುವ ಲೈಬ್ರರಿ ಮತ್ತು ಕ್ರೀಡಾಂಗಣದ ಸವಲತ್ತುಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಅತ್ಯಂತ ಕಳಕಳಿಯಿಂದ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ.

Advertisement
Advertisement

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲ್ತಿಯಲ್ಲಿರುವ ಡಿ.ಪಿ.ಆರ್. ಪ್ರಕಾರವೇ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಎ.ಎನ್.ಎಂ ಶಾಲೆಯ 30 ವಿದ್ಯಾರ್ಥಿನಿಯರು, ಜಿ.ಎನ್.ಎಂ. ಶಾಲೆಯ 90 ವಿದ್ಯಾರ್ಥಿಗಳು, ಬಿ.ಎಸ್ಸಿ. ನರ್ಸಿಂಗ್‍ನ 240 ವಿದ್ಯರ್ಥಿಗಳು ಮತ್ತು ಪ್ಯಾರ ಮೆಡಿಕಲ್ ಕೋರ್ಸ್ 420 ವಿದ್ಯಾರ್ಥಿ (ಅರೆ ವೈದ್ಯಕೀಯ)ಗಳು ಸೇರಿ ಒಟ್ಟಾರೆ ಪ್ರತಿ ವರ್ಷ 780 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಹಾಲಿ ಚಾಲ್ತಿಯಲ್ಲಿರುವ ಡಿ.ಪಿ.ಆರ್.ನಲ್ಲಿರುವಂತೆ ಹೊಸ ಕಟ್ಟಡಗಳು ನಿರ್ಮಾಣಗೊಂಡು ಸದರಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳೇ ಉಪಯೋಗಿಸಲಿ, ಇಲ್ಲಿಯವರೆಗೆ ಸದರಿಯವರಿಗೆ ಆಸ್ಪತ್ರೆ ಆವರಣದಲ್ಲಿ ಯಾವುದೇ ರೀತಿಯ ಕಾಲೇಜು ಕಟ್ಟಡ, ವಸತಿ ಸೌಲಭ್ಯಗಳು, ಗ್ರಂಥಾಲಯ ಮತ್ತು ಕ್ರೀಡಾಂಗಣ ಸೌಲತ್ತುಗಳು ಇರುವುದಿಲ್ಲ. ಸದರಿ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿದ್ಯರ್ಥಿಗಳಿಂದ ಹೊರ ಮತ್ತು ಒಳ ರೋಗಿಗಳಿಗೆ ಮತ್ತು ತುರ್ತು ಚಿಕಿತ್ಸೆಗಳಿಗೆ ಮೂಲ ಸೇವೆಗಳನ್ನು ನೀಡಲು ಆಸ್ಪತ್ರೆಯ ಆವರಣದಲ್ಲಿಯೇ ಇವರಿಗೆ ಮೂಲ ಸೌಕರ್ಯ ಅಂದರೆ ಕಾಲೇಜು ಕಟ್ಟಡ ಮತ್ತು ವಸತಿ ಸೌಕರ್ಯವು ಅತಿ ಅವಶ್ಯಕವಾಗಿ ಬೇಕಾಗಿರುತ್ತದೆ.

Advertisement

ಈಗ ಪ್ರತಿ ನಿತ್ಯ ಸುಮಾರು 1 ಸಾವಿರಕ್ಕಿಂತ ಹೆಚ್ಚಾಗಿ ಹೊರರೋಗಿಗಳು ಮತ್ತು ಒಳರೋಗಿಗಳು 500 ರಿಂದ 600 ರೋಗಿಗಳನ್ನು ಸೇವೆಗಳು ದೊರೆಯುತ್ತಿವೆ ಇದರ ಜೊತೆಗೆ ರೋಗಿಗಳ ಜೊತೆಗೆ ಬರುವ ಸಹಾಯಕರು ಮತ್ತು ಸಂಬಂಧಿಗಳು 2000 ಸಂಖ್ಯೆ ಮೀರುತ್ತದೆ. ಒಟ್ಟಾಗಿ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು ಮತ್ತು ವಾಹನ ದಟ್ಟಣೆ ಹಾಗೂ ವಾಹನಗಳ ಪಾರ್ಕಿಂಗ್ ಮಾಡಲು ಸಹ ಅಸಾಧ್ಯವಾಗಿರುತ್ತದೆ. ತುರ್ತಾಗಿ ಬರುವ ರೋಗಿಗಳಿಗೂ ಸಹ ಚಿಕಿತ್ಸೆ ನೀಡಲು ಸ್ಥಳಾವಕಾಶ ಜೊತೆಗೆ ಸೂಕ್ತ ವಾತಾವರಣ ಇರುವುದಿಲ್ಲ, ಇದೇ ಜಾಗದಲ್ಲಿ ಕಾಲೇಜು ಆಸ್ಪತ್ರೆ ನಿರ್ಮಾಣಗೊಂಡಲ್ಲಿ ಈಗಾಗಲೇ ತಿಳಿಸಿರುವಂತೆ ಹೊರರೋಗಿಗಳು, ಒಳ ರೊಗಿಗಳು, ಸಹಾಯಕರು, ಸಂಬಂಧಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾರ್ಥಿಗಳು, ಭೋಧಕ ವರ್ಗದವರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಎಲ್ಲರೂ ಸೇರಿ ಒಟ್ಟು ಸಂಖ್ಯೆ ಸುಮಾರು 9000 ರಿಂದ 10,000 ಜನರು ಪ್ರತಿ ನಿತ್ಯ ಸೇರುತ್ತಾರೆ. ಇವರುಗಳ ಜೊತೆಗೆ ವಾಹನಗಳ ಓಡಾಟ ಮತ್ತು ಪಾರ್ಕಿಂಗ್ ವ್ಯವಸ್ಥೆ ದಟ್ಟಣೆಯಿಂದ ಕೂಡಿರುವ ವಾತಾವರಣ ನೋಡಲು ಊಹಿಸಲು ಅಸಾಧ್ಯವಾಗಿರುತ್ತದೆ.

ಮೆಡಿಕಲ್ ಕಾಲೇಜಿಗೆ ಪ್ರತಿ ವರುಷ 150 ವಿದ್ಯಾರ್ಥಿಗಳು ಹೊಸದಾಗಿ 2023ರಲ್ಲಿಯೇ ಪ್ರವೇಶ ಪಡೆದು ಜಿಲ್ಲಾ ಆಸ್ಪತ್ರೆ ಆವರಣದ ಹೊರಗಡೆ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ 2013-14ರಲ್ಲಿ ಹಿರೇಗುಂಟನುರು ಹೋಬಳಿ, ಚಿಕ್ಕಪುರ ಗ್ರಾಮದ ಸರ್ವೇ ನಂ: 96ರಲ್ಲಿ 15 ಎಕರೆ 23 ಗುಂಟೆ ಮತ್ತು ಸರ್ವೇ ನಂ:101ರಲ್ಲಿ ದಿನಾಂಕ:12-05-2015 ರಲ್ಲಿಯೇ 14 ಎಕರೆ 17 ಗುಂಟೆ ಒಟ್ಟಾಗಿ 30 ಎಕರೆ ಪಹಣಿ ಪತ್ರಿಕೆ ಆಗಿರುತ್ತದೆ ಆದುದರಿಂದ, ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೊಸದಾಗಿ ವಿಶೇಷ ಡಿ.ಪಿ.ಆರ್ (ವಿವರವಾದ ಯೋಜನಾ ವರದಿ)ಯನ್ನು ಮುಂದಿನ ನೂರು ವರುಷಗಳಿಗೆ ದೂರದೃಷ್ಠಿಯಲ್ಲಿ ಚಿಂತನೆ ಮಾಡಿ ಸದರಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಾಲೇಜು ಕಟ್ಟಡ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ಸೌಲಭ್ಯಗಳು, ಸಭಾಂಗಣ, ಕ್ರೀಡಾಂಗಣ ಮತ್ತು ಗ್ರಂಥಾಲಯ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿದೆ. ಇದರ ಜೊತೆಗೆ ಬೋಧಕ ವರ್ಗದವರಿಗೂ ಸಹ ವಸತಿ ಸೌಲಭ್ಯವನ್ನು ಸಹ ನಿರ್ಮಾಣ ಮಾಡಿಕೊಡಬಹುದು.

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡ 65% ರಷ್ಟು ಜನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ, ಚಿತ್ರದುರ್ಗ ನಗರ ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿ ಇರುವುದರಿಂದ 2 ರಾಷ್ಟ್ರೀಯ ಹೆದ್ದಾರಿಗಳು (ಎನ್.ಹೆಚ್-48 ಮತ್ತು ಎನ್.ಹೆಚ್.369) ಹಾದು ಹೋಗಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೂಪರ್ ಸ್ಪೆಷಾಲಿಟಿಗಳಾದ ಹೃದಯ, ಮೂತ್ರಪಿಂಡ, ನರರೋಗ, ಕ್ಯಾನ್ಸರ್ ರೋಗಗಳು ಮತ್ತು ಇತರೆ ರೋಗಗಳಿಗೂ ಸಹ ಆಸ್ಪತ್ರೆ ಸೌಲಭ್ಯಗಳನ್ನು ನೀಡಿದರೆ ಸಾರ್ವಜನಿಕರಿಗೆ ಅತ್ಯಂತ ಉಪಯೋಗವಾಗುತ್ತದೆ. ಖನಿಜ ಪುನಶ್ಚೇತನ ನಿಧಿಯಲ್ಲಿ ಇನ್ನೂ ಬಾಕಿ ರೂ. 2,000/- ಕೋಟಿ ಹಣ ಲಭ್ಯವಿರುತ್ತದೆ ಇದಲ್ಲದೇ ರಾಜ್ಯದ ಎಸ್.ಇ.ಪಿ/ ಎಸ್.ಟಿ.ಪಿ. ಯೋಜನೆಗಳಲ್ಲೂ ಲಭ್ಯವಿರುವ ಅನುದಾನವನ್ನು ಸಹ ಉಪಯೋಗಿಸಬಹುದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸದರಿ ಜಿಲ್ಲಾ ಖನಿಜ ನಿಧಿಯಿಂದ ರಾಜ್ಯ ಸರ್ಕಾರದ ಅನುದಾನ ನಿರೀಕ್ಷಣೆ ಮಾಡದೇ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಸದರಿ ನಿಧಿಯನ್ನು ಬಳಸಬಹುದು. ಈ ಮೇಲ್ಕಂಡ ಈ ಅಂಶಗಳನ್ನು ವಿಶೇಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಚಿತ್ರದುರ್ಗ ಶಾಖೆಯ ಅಧ್ಯಕ್ಷರಾದ  ಡಾ|| ಪಿ.ಟಿ. ವಿಜಯಕುಮರ್, ಕಾರ್ಯದರ್ಶಿ ಡಾ|| ಕೆ.ಎಂ. ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
Advertisement