Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೋರಾಟದಲ್ಲಿ ಗಟ್ಟಿತನವನ್ನು ಮೂಡಿಸಿದ ಕೀರ್ತಿ ತಿಪ್ಪೇಸ್ವಾಮಿಯವರದ್ದು : ಆಶೋಕ ಸಂಗೇನಹಳ್ಳಿ

05:43 PM Dec 07, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ.ಡಿ. 07 :
ಚಿತ್ರದುರ್ಗದ ಜನ ಚಳುವಳಿಯ ಒಡನಾಡಿ ತಿಪ್ಪೇಸ್ವಾಮಿಯವರು ಬಹುಮುಖಿ ವ್ಯಕ್ತಿಯಾಗಿದ್ದರೆಂದು ನಿವೃತ್ತ ಉಪನ್ಯಾಸಕರಾದ ಆಶೋಕ ಸಂಗೇನಹಳ್ಳಿ ಬಣ್ಣಿಸಿದ್ದಾರೆ.

Advertisement

ನಗರದ ಪತ್ರಿಕಾಭವನದಲ್ಲಿ ತಿಪ್ಪೇಸ್ವಾಮಿಯವರು ನಮ್ಮನ್ನಗಲಿ ಒಂದು ವರ್ಷವಾದ ಹಿನ್ನಲೆಯಲ್ಲಿ  ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಮತ್ತು ಸ್ಮರಣ ಸಭೆಯಲ್ಲಿ ಮನದ ಮಾತುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸುಮಾರು 45 ವರ್ಷಗಳ ಕಾಲ ಹೋರಾಟವನ್ನು ಮಾಡಿಕೊಂಡು ಬಂದಿರುವ ತಿಪ್ಪೇಸ್ವಾಮಿಯವರು, ವೈಯುಕ್ತಿಕ ಬದುಕಿನಲ್ಲಿ ಮಾತ್ರ ತಣ್ಣಗಾಗಿದ್ದರು. ಹೋರಾಟದಲ್ಲಿ ಮಾತ್ರ ಗಟ್ಟಿತನವನ್ನು ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ನನ್ನ ಅವರ ಭೇಟಿ ನಾನು ಅತಿಥಿ ಉಪನ್ಯಾಸಕನ ಹುದ್ದೆಗೆ ಅರ್ಜಿಯನ್ನು ಹಾಕುವಾಗ ಅವರನ್ನು ಮಾತನಾಡಿಸಲಿಲ್ಲ ಎಂದು ನನ್ನ ಅರ್ಜಿಯನ್ನು ತೆಗೆದು ಹಾಕಿದ್ದರು. ಆದರೂ ಸಹಾ ನಾನು ಕೆಲಸವನ್ನು ಪಡೆದೆ ಆಗ ಅವರು ಮಾತನಾಡಿಸುವ ಸಮಯ ಬಂದಿತು ಅವಾಗಿನಿಂದ ಅವರನ್ನು ನಾನು ಮಾಮ ಎನ್ನುತ್ತಿದ್ದೆ ಅವರು ನನ್ನನ್ನು ಅಳಿಯ ಎಂದು ಮಾತನಾಡಿಸುತ್ತಿದ್ದರು ಎಂದರು.

ಅವರು ಈಗ ನಮ್ಮ ಬಳಿ ಇಲ್ಲ ಆದರೆ ಅವರು ಮಾಡಿಕೊಟ್ಟ ಹಲವಾರು ಕಾರ್ಯಗಳು ಇಂದಿಗೂ ಸಹಾ ನೆನಪಿನಲ್ಲಿ ಇವೆ. ಅವರಿಂದ ಸಹಾಯವನ್ನು ಪಡೆಯದವರಿಲ್ಲ ಅಲ್ಲದೆ ಅವರ ಮನೆಯಲ್ಲಿ ಊಟ, ಕಾಫಿ, ಟೀ, ತಿಂಡಿಯನ್ನು ತಿನ್ನದವರಿಲ್ಲ ಮನೆಗೆ ಯಾರೇ ಬಂದರೂ ಸಹಾ ಅವರನ್ನು ಸತ್ಕಾರ ಮಾಡಿಯೇ ಕಳುಹಿಸುತ್ತಿದ್ದರು. ಇದರಲ್ಲಿ ಅವರ ಶ್ರೀಮತಿಯವರ ಪಾತ್ರವೂ ಸಹಾ ಹೆಚ್ಚಾಗಿದೆ. ಕೆಲವರು ಇದ್ದಾಗ ಸತ್ತಿರುತ್ತಾರೆ ಮತ್ತೇ ಕೆಲವರು ಸತ್ತಾಗ ಬದುಕಿರುತ್ತಾರೆ ಈ ವರ್ಗಕ್ಕೆ ಸೇರಿದವರು ನಮ್ಮ ತಿಪ್ಪೇಸ್ವಾಮಿಯವರು. ಅವರ ಬಗ್ಗೆ ಪುಸ್ತಕವೊಂದು ತಯಾರಾಗುತ್ತಿದೆ ಅದನ್ನು ಜ.14 ರಂದು ಹೂರತರಲಾಗುವುದು ಎಂದು ಆಶೋಕ ತಿಳಿಸಿದರು.

ಹಿರಿಯ ಪತ್ರಕರ್ತರಾದ ಉಜ್ಜನಪ್ಪ ಮಾತನಾಡಿ, ಲೋಕದಲ್ಲಿ ಎಲ್ಲರಿಗೂ ಬೇಕಾಗಿದ್ದವರು ತಿಪ್ಪೇಸ್ವಾಮಿಯವರು, ಕಾಲೇಜಿನಲ್ಲಿ ಗುಮಾಸ್ತರಾಗಿದ್ದರೂ ಸಹಾ ಬೇರೆಯವರ ಕೆಲಸವನ್ನು ಅತಿ ಹೆಚ್ಚಾಗಿ ಮಾಡುತ್ತಿದ್ದರು ಸಮಾಜದಲ್ಲಿ ಉತ್ತಮವಾದ ಹೆಸರನ್ನು ಪಡೆದಿದ್ದರು. ಜನಪರವಾದ ಹೋರಾಟಕ್ಕೆ ಯಾವೂತ್ತು ಸಹಾ ತಮ್ಮ ಬೆಂಬಲವನ್ನು ನೀಡುತ್ತಿದ್ದರು. ಅವರ ಹೋರಾಟ ಸಮಾಜ ಮುಖಿಯಾಗಿತ್ತೇ ವಿನಹ ವ್ಯಯುತ್ತಿಕವಾಗಿರಲಿಲ್ಲ ಎಂದು ತಿಳಿಸಿದರು.

ಪತ್ರಕರ್ತರಾದ ಆಹೋಬಳಪತಿ ಮಾತನಾಡಿ, ತಿಪ್ಪೇಸ್ವಾಮಿಯವರ ಹಲವಾರು ಹೋರಾಟಗಳಲ್ಲಿ ಹಿಂದೆ ನಿಂತು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಮಿತ ಭಾಷಿಗಳಾಗಿದ್ದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ತಮ್ಮ ಕಷ್ಠಗಳನ್ನು ಬೇರೆಯವರಿಗೆ ಹೇಲದೆ ಬೇರೆಯವರ ಕಷ್ಠಗಳಿಗೆ ಭಾಗಿಯಾಗಿ ಅದನ್ನು ನಿವಾರಣೆ ಮಾಡುವಲ್ಲಿ ಮುಂದಾಗಿದ್ದರು. ಜಿಲ್ಲೆಯ ಅಪ್ಪರ್ ಭದ್ರಾ ಹೋರಾಟದಲ್ಲಿ ಹಿಂದೆ ನಿಂತು ಅದರ ಏಳ್ಗೆಗೆ ಸೇವೆಯನ್ನು ಸಲ್ಲಿಸಿದರು.

ಇಂತಹ ಮಹಾನ್ ವ್ಯಕ್ತಿಯ ಸ್ಮರಣೆ ಮಾಡುವುದು ಕರ್ತವ್ಯವಾಗಿದೆ ವಿವಿಧ ರೀತಿಯ ಹೋರಾಟಗಳನ್ನು ಜೀವಂತವಾಗಿ ಇಡುವಲ್ಲಿ ತಿಪ್ಪೇಸ್ವಾಮಿಯವರ ಪಾತ್ರ ಬಹಳವಾಗಿದೆ ಎಂದರು.

ಪತ್ರಕರ್ತರಾದ ಚಳ್ಳಕೆರೆ ಬಸವರಾಜು ಮಾತನಾಡಿ, ಚಿತ್ರದುರ್ಗ ಬರಡು ಜಿಲ್ಲೆಯಾಗಿದ್ದು ಇಲ್ಲಿ ನೀರಾವರಿ ಬರಬೇಕೆಂದು ಹೋರಾಟವನ್ನು ಪ್ರಾರಂಭ ಮಾಡಿದಾಗ ಅದಕ್ಕೆ ಮಂಚೂಣಿಯಲ್ಲಿದ್ದು ವಿವಿಧ ರೀತಿಯ ಸಹಾಯವನ್ನು ನೀಡಿದರು. ತಮ್ಮ ಕೆಲಸದ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಸಹಾಯವನ್ನು ಮಾಡುವುದರ ಮೂಲಕ ಉತ್ತಮವಾದ ಸ್ನೇಹಿತರಂತೆ ಕಂಡರು. ಇವರ ಹೋರಾಟ ಬೇರೆಯವರಿಗೆ ಮಾರ್ಗದರ್ಶನವಾಗಬೇಕಿದೆ. ಅವರು ಇಂದು ನಮ್ಮ ನಡುವೆ ಬದುಕಿಲ್ಲ ಆದರೆ ಅವರ ಹೋರಾಟಗಳು ಮಾತ್ರ ಇನ್ನೂ ಜೀವಂತವಾಗಿದೆ ಅದು ನಮ್ಮಗೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಯಾದವ ರೆಡ್ಡಿ, ರಹಮಾನ್ ತಿಪ್ಪೇಸ್ವಾಮಿಯವರ ಬಗ್ಗೆ ಮಾತನಾಡಿದರು. ತಿಪ್ಪೇಸ್ವಾಮಿಯವರ ಅಕ್ಕ ಶಶಿಕಲಾ ಅವರ ಪತ್ನಿ ಪುತ್ರ ಮತ್ತು ಪುತ್ರಿ ಹಾಗೂ ಮೊಮ್ಮಕ್ಕಳು ಭಾಗವಹಿಸಿದ್ದರು. ಕುಮಾರ ಸಮತಾದಳ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Ashoka Sangenahallichitradurgacreditedinstilling toughness in the struggleTippeswamyಆಶೋಕ ಸಂಗೇನಹಳ್ಳಿಚಿತ್ರದುರ್ಗಹೋರಾಟ
Advertisement
Next Article