ಚುನಾವಣೆ ವೇಳೆ ಟಿಕೆಟ್ ಫೈಟ್ ಸಹಜ : ಬಿ ವೈ ರಾಘವೇಂದ್ರ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಮಾ. 23 : ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗೀತಕ್ಕ, ರಾಘಣ್ಣ ಮಧ್ಯದ ಚುನಾವಣೆ ಅಲ್ಲ ಎರಡು ಪಕ್ಷಗಳ ಸಿದ್ಧಾಂತದ ನಡುವಿನ ಚುನಾವಣೆ ಎದುರಾಳಿ ಯಾರೆಂದು ನಾವು ತಲೆ ಕೆಡಿಸಿಕೊಳ್ಳಲ್ಲ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಟಿಕೆಟ್ ಫೈಟ್ ಸಹಜ ಎಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ತಿಳಿಸಿದರು.
ಶನಿವಾರ ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಶಿವಮೊಗ್ಗ ಸಂಸದ B.Y. ರಾಘವೇಂದ್ರರವರು ವಿವಿಧ ಸಮುದಾಯಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅವರು
1) ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ
2) ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಬೋವಿ ಗುರುಪೀಠ ಚಿತ್ರದುರ್ಗ
3) ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ ರಾಜನಳ್ಳಿ, ಹರಿಹರ ತಾಲ್ಲೂಕು
4) ಜಗದ್ಗುರು ಶ್ರೀ ಪುರುಷೋತ್ತಮನಂದಪುರಿ ಸ್ವಾಮಿಗಳು ಭಗೀರಥ ಪೀಠ ಮಧುರೆ
5) ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಗಳು ಯಾದವ ಗುರುಪೀಠ ಚಿತ್ರದುರ್ಗ
6) ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಮಡಿವಾಳ ಗುರುಪೀಠ ಚಿತ್ರದುರ್ಗ
7) ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ ಶ್ರೀ ನಾರಾಯಣ ಗುರು ಪೀಠ ಶಿವಮೊಗ್ಗ
8) ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳು ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿ
9) ಜಗದ್ಗುರು ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು ಕುಂಬಾರ ಗುರುಪೀಠ ತೆಲಸಂಗ ಬೆಳಗಾವಿ ಜಿಲ್ಲೆ
10) ಪೂಜ್ಯ ಶ್ರೀ ಬಸವ ಪ್ರಸಾದ ಸ್ವಾಮಿಗಳು ಶಿವಶಕ್ತಿ ಪೀಠ ಇರಕಲ್ ರಾಯಚೂರು ಜಿಲ್ಲೆ
11) ಪೂಜ್ಯಶ್ರೀ ಮಹಾಲಿಂಗ ಸ್ವಾಮಿಗಳು ಕಾಶಿ ಅನ್ನಪೂರ್ಣೇಶ್ವರಿ ಮಠ ತಂಗನಹಳ್ಳಿ ಕೊರಟಗೆರೆ ತಾಲ್ಲೂಕು
12) ಪೂಜ್ಯಶ್ರೀ ಚನ್ನಬಸವ ಮಹಾಸ್ವಾಮಿಗಳು ವಿರಕ್ತಮಠ ಶಿಕಾರಿಪುರ ಶ್ರೀಗಳ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಬಿಜೆಪಿ ರಾಜ್ಯದ್ಯಕ್ಷ ಬದಲಾವಣೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ರಾಜ್ಯಾದ್ಯಕ್ಷ ಸ್ಥಾನ ಸಂಘಟನೆಗೆ ಶಕ್ತಿ ತುಂಬುವ ಜವಾಬ್ದಾರಿ ವಿಜಯೇಂದ್ರಗೆ ಎಷ್ಟು ದಿನವಿರುತ್ತೆ ಒಳ್ಳೆಯ ಕಾರ್ಯ ಮಾಡುತ್ತಾರೆ. ಕೆ ಎಸ್ ಈಶ್ವರಪ್ಪ ನಮ್ಮ ನಾಯಕರು, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಇನ್ನೆರಡು ದಿನದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದರು.
ಕೈ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ನೀಡ್ತಿದ್ದಾರೆಂದು ಸಿಎಂ ಆರೋಪ ವಿಚಾರದ ಬಗ್ಗೆ ಮಾತನಾಡಿ, ಪಾಪ ಸಿಎಂ ಅವರಿಗೆ ಗ್ಯಾರಂಟಿಯ ಗ್ಯಾರಂಟಿ ಉಳಿಸಿಕೊಳ್ಳಲಾಗ್ತಿಲ್ಲ ಕೈ ಶಾಸಕರಿಗೆ ಕ್ಷೇತ್ರದಲ್ಲಿ ಮುಖ ತೋರಿಸಲು ಆಗುತ್ತಿಲ್ಲ ಅವರ ತಟ್ಟೆ ಮುಚ್ಚಿಕೊಳ್ಳಲು ಇನ್ನೊಬ್ಬರ ಕಡೆ ಬೆರಳು ತೋರುತ್ತಿದ್ದಾರೆ ಎಂದ ಅವರು ಕುಟುಂಬ ರಾಜಕಾರಣಕ್ಕೆ ನಾನು ಸಹ ವಿರೋಧಿಸುತ್ತೇನೆ ಕುಟುಂಬ ರಾಜಕಾರಣ ಎಂದರೆ ಎಲ್ಲವೂ ಒಂದೇ ಕಡೆ ತೀರ್ಮಾನ ಸಿಎಂ, ಅಧ್ಯಕ್ಷ ಎಲ್ಲರೂ ಒಂದೇ ಕುಟುಂಬದವರಾಗಿರುತ್ತಾರೆ. ಕಾಂಗ್ರೆಸ್‍ನ ನೆಹರು ಮನೆತನಕ್ಕೆ ಕುಟುಂಬ ರಾಜಕಾರಣ ಅಂತಾರೆ ಎಂದು ತಿಳಿಸಿದರು.
ನಾನು ಎಬಿವಿಪಿಯಿಂದ ಬಂದು ಸಂಸದನಾಗಿದ್ದೇನೆ ಯಾವುದೋ ಒತ್ತಡಕ್ಕಾಗಿ ನನಗೆ ಪಕ್ಷ ಟಿಕೆಟ್ ನೀಡಿಲ್ಲ ಜನರ ವಿಶ್ವಾಸ ಗಳಿಸಿದ್ದೇನೆ, ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಬಿ ಎಸ್ ವೈ ಚುನಾವಣೆ ರಾಜಕೀಯದಿಂದ ನಿವೃತ್ತರಾಗಿದ್ದಾರೆ ಎಂದು ತಿಳಿಸಿದ ಸಂಸದರು, ಮಕ್ಕಳು ಹೊರಗಡೆ ಹೋದಾಗ ತಾಯಂದಿರು ದೃಷ್ಠಿ ತೆಗೆಯುತ್ತಾರೆ ನಾನು ಸಹ ದೃಷ್ಠಿ ತೆಗೆಸಿಕೊಂಡು ಹೋಗಲು ದುರ್ಗದ ಮಠಗಳಿಗೆ ಬಂದಿದ್ದೇನೆ ಮಠಗಳ ಭೇಟಿ ತಾಯಿ, ತಂದೆಯ ಮಾರ್ಗದರ್ಶನದಿಂದ ಕಲಿತಿದ್ದೇನೆ ಎಂದು ರಾಘವೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ಚಂದ್ರಪ್ಪ, ಬಿಜೆಪಿಯ ವಕ್ತಾರ ದಗ್ಗೆ ಶಿವಪ್ರಕಾಶ್, ನಗರಾಧ್ಯಕ್ಷ ನವೀನ ಚಾಲುಕ್ಯ ನಗರ ಕಾರ್ಯದರ್ಶಿ ಕಿರಣ ಕುಮಾರ್ ತಿಮ್ಮಣ್ಣ, ಯುವ ಮೋರ್ಚಾ ಚಂದ್ರು ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು,