Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಗಾಣಿಗ ಸಮುದಾಯದ ವಧು-ವರರ ಸಮಾವೇಶ | ಕಾಯಕವನ್ನು ನಂಬಿದವರು ಗಾಣಿಗ ಸಮಾಜದವರು : ಡಾ. ಜಯಬಸವಕುಮಾರ ಸ್ವಾಮೀಜಿ

04:48 PM Jun 30, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜೂನ್.30 : ವ್ಯಕ್ತಿಯನ್ನು ಆತನ ವ್ಯಕಿತ್ವದಿಂದ ಗುರುತಿಸಬೇಕೇ ವಿನಹಃ ಜಾತಿ, ಹಣದಿಂದ ಅಲ್ಲ, ಪ್ರತಿಭೆಗಳು ನಮ್ಮ ದೇಶದ ಸಂಪತ್ತು ಎಂದು ಶ್ರೀ ಜಗದ್ಗುರು ಮುರುಘಾರಾಜೇಂದ್ರ ವಿದ್ಯಾಪೀಠ, ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರು, ವಿಜಯಪುರದ ವನಶ್ರೀ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಜಯಬಸವಕುಮಾರ ಸ್ವಾಮೀಜಿ ತಿಳಿಸಿದರು.

Advertisement

ಚಿತ್ರದುರ್ಗ ತಾಲ್ಲೂಕು ಅಖಿಲ ಭಾರತ ಗಾಣಿಗರ ಸಂಘ(ರಿ.)ದವತಿಯಿಂದ ಭಾನುವಾರ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ, ಪ್ರಪ್ರಥಮ ಜಿಲ್ಲಾ ಮಟ್ಟದ ಗಾಣಿಗ ಸಮುದಾಯದ ವಧು-ವರರ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ 2023-24 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯದ ವಧು-ವರರ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವೂ ನಮ್ಮ ಸಮಾಜವನ್ನು ಬೆಸೆಯುವ ಕಾರ್ಯಕ್ರಮಗಳಾಗಿವೆ. ಇಲ್ಲಿ ಎಲ್ಲರಿಗೂ ಸಹಾ ಒಂದಲ್ಲ ಒಂದು ಕಡೆಯಿಂದ ನೆಂಟಸ್ತನ ಇದೆ. ಇಂದಿನ ದಿನಮಾನದಲ್ಲಿ ಕೂಡು ಕುಟುಂಬಗಳ ಮರೆಯಾಗುತ್ತಿವೆ. ನಾನು ನಮ್ಮವರು ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡಿದೆ. ಇಂದರಿಂದ ನಮ್ಮಲ್ಲಿನ ಸಂಬಂಧಗಳು ಹಾಳಾಗುತ್ತಿವೆ. ಮಕ್ಕಳಿಗೆ ಯಾರು ಯಾರೂ ಎಂದು ಗೂತ್ತಾಗುತ್ತಿಲ್ಲ ಎಲ್ಲರನ್ನು ಆಂಟಿ, ಅಂಕಲ್ ಎಂದು ಕರೆಯುವುದು ರೂಢಿಯಾಗಿದೆ, ಇದರ ಬದಲು ನಮ್ಮ ಸಂಬಂಧಗಳ ಬಗ್ಗೆ ಅವರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.

ಹಿಂದಿನ ದಿನಮಾನದಲ್ಲಿ ಶಿಕ್ಷಣ ಉತ್ತಮವಾಗಿತ್ತು ಅಲ್ಲಿ ಕಲಿಯುವವರಿಗೆ ಮಾನವೀಯತೆ, ಸಂಸ್ಕಾರ, ಸಾಹಿತ್ಯವನ್ನು ಕಲಿಸುತ್ತಿದ್ದವು ಆದರೆ ಇಂದು ಹಣ ಗಳಿಸುವುದನ್ನು ಶಿಕ್ಷಣ ಕಲಿಸುತ್ತಿದೆ, ಇದರ ಬದಲಾಗಿ ಏನನ್ನು ಸಹಾ ಕಲಿಸುತ್ತಿಲ್ಲ, ನಾವು ಕಲಿಯುವ ವಿದ್ಯೆ ನಮಗೆ ಗೌರವವನ್ನು ತರುವ ಕಾರ್ಯವನ್ನು ಮಾಡಬೇಕಿದೆ. ಮನೆಗಳು ದೂಡ್ಡದಿದೆ ಆದರೆ ಅದರ ಒಳಗಡೆ ಮಾತ್ರ ಒಬ್ಬರೇ ಇದ್ದಾರೆ ಬೇರೆ ಯಾರು ಇಲ್ಲವಾಗಿದ್ದಾರೆ. ನಮ್ಮಲ್ಲಿ ಇರುವ ಸಂಸ್ಕೃತಿ ಮರೆಯಾಗುತ್ತಿದೆ.

ಸಂಬಂಧಿಗಳನ್ನು ಕರೆಯುವ ಊಟವನ್ನು ಬಡಿಸುವ ಕಾರ್ಯ ಮರೆಯಾಗುತ್ತಿದೆ. ಇದರಿಂದ ಕುಟುಂಬದ ಸಂಬಂಧಗಳು ಮರೆಯಾಗುತ್ತಿವೆ. ಗಾಣಿಗ ಸಮುದಾಯ ಎಲ್ಲರನ್ನು ಬೆರೆಯುವ ಸಮುದಾಯವಾಗಿದೆ, ಎಲ್ಲರೊಳಗೆ ಒಂದಾಗಿ ಕೂಡಿ ಕೆಲಸವನ್ನು ಮಾಡುತ್ತದೆ. ನಮ್ಮ ಸಮುದಾಯವನ್ನು ನಂಬಿದವರಿಗೆ ಪ್ರಾಣವನ್ನು ಕೂಡುತ್ತದೆ, ಕಾಯಕವನ್ನು ನಂಬಿದವರು ಗಾಣಿಗ ಸಮಾಜದವರು ಎಂದರು.

ಯಾವುದೇ ಒಬ್ಬ ನಾಯಕರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡುವುದರ ಸರಿಯಲ್ಲ, ಅವರ ನೀಡಿದ ತತ್  ಮತ್ತು ಆದರ್ಶಗಳು ಎಲ್ಲಾ ಜನರಿಗೂ ಸಹಾ ಮಾರ್ಗದರ್ಶನವಾಗಬೇಕಿದೆ. ನಾಯಕರನ್ನು ಅವರ ಜಾತಿಯಿಂದ ಗುರುತಿಸದೇ ಅವರ ವ್ಯಕಿತ್ವದಿಂದ ಗುರುತಿಸುವ ಕಾರ್ಯವಾಗಬೇಕಿದೆ. ಪ್ರತಿಭೆಗಳಿಗೆ ಜಾತಿಯ ಸೂಂಕು ಇರಬಾರದು ಅವರು ದೇಶದ ಸಂಪತ್ತು ಎಂದ ಶ್ರೀಗಳು,  ಮಕ್ಕಳಲ್ಲಿ ಸಂಸ್ಕಾರವನ್ನು ಬೆಳಸಿ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ,  ಸಮಾಜವನ್ನು ಸಂಘಟನೆ ಮಾಡಿ ಬಡವರಿಗೆ ಸಹಾಯವನ್ನು ಮಾಡಿ ಸಂಘಟನೆ ಮಾಡುವಾಗ ಮಾತುಗಳು ಬರುತ್ತವೆ ಅವುಗಳನ್ನು ಬದಿಗೆ ತಳ್ಳುವುದರ ಮೂಲಕ ಸಂಘಟನೆಯ ಕಡೆಗೆ ಒಲವನ್ನು ನೀಡುವಂತೆ ಶ್ರೀಗಳು ಕರೆ ನೀಡಿದರು.

ಶಾಸಕರಾದ  ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ನಮ್ಮ ಸಮಾಜಕ್ಕೆ ವಧು-ವರರ ಸಮಾವೇಶ ಮಾಡುವುದು ಅಗತ್ಯವಾಗಿದೆ. ಇದರೊಂದಿಗೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಅಹಾ ಅಗತ್ಯವಾಗಿದೆ. ಈ ಬಾರಿಯ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿನಲ್ಲಿ ಉತ್ತಮ ಅಂಕಗಳನ್ನು ಪಡೆದ ಹಾಗೇ ಉನ್ನತ ಶಿಕ್ಷಣದಲ್ಲಿಯೂ ಸಹಾ ಉತ್ತಮವಾದ ಅಂಕಗಳನ್ನು ಪಡೆಯುವುದರ ಮೂಲಕ ಸಮಾಜಕ್ಕೆ ಪೋಷಕರಿಗೆ ಶಾಲೆಗೆ ಹೆಸರನ್ನು ತರವಂತೆ ತಿಳಿಸಿ, ನಮ್ಮ ಸಮಾಜ ಕಾಯಕ ಸಮಾಜವಾಗಿದೆ. ನೀವು ಬೆಳೆಯವುದರ ಮೂಲಕ ಸಮಾಜವನ್ನು ಸಹಾ ಬೆಳಸುವ ಕಾರ್ಯವನ್ನು ಮಾಡಿ, ನಿಮ್ಮ ವೃತ್ತಿಯನ್ನು ಆರಾಧನೆ ಮಾಡಿ, ಇಂದಿನ ದಿನದಲ್ಲಿ ವೃತ್ತಿಗಳು ಜಾತಿಗಳಾಗಿ ಮಾರ್ಪಾಟಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷರಾದ ಡಿ.ಎಸ್. ಸುರೇಶ್‍ಬಾಬು (ಸೈಟ್ ಬಾಬಣ್ಣ) ವಹಿಸಿದ್ದರು ಸಮಾರಂಭದಲ್ಲಿ ತಾಲ್ಲೂಕು ಗಾಣಿಗರ ಸಂಘದ ಅಧ್ಯಕ್ಷರಾದ ಎ.ಆರ್. ತಿಪ್ಪೇಸ್ವಾಮಿ ಕೆ.ಡಿ.ಪಿ. ಸದಸ್ಯರು, ವೀರಶೈವ ಸಮಾಜದ ಉಪಾಧ್ಯಕ್ಷರು, ಜಿಲ್ಲಾ ಗಾಣಿಗ ಸಮಾಜದ ಕಾರ್ಯದರ್ಶಿ ಕೆ.ಸಿ. ನಾಗರಾಜ್, ಮಹಿಳಾ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ಕೆ.ಸಿ.ವೀಣಾ, ಅಧ್ಯಕ್ಷರಾದ ಶ್ರೀಮತಿ ಪುಷ್ಪ, ದಾವಣಗೆರೆ ಗಾಣೀಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ರತ್ನಮ್ಮ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಗಾಣಿಗ ಸಮಾಜದ ಪ್ರತಿಭೆಯಾದ ಝೀ ಟಿ.ವಿ.ಮಹಾನಟಿ ರಿಯಾಲಿಟಿ ಷೋನ ಕುಮಾರಿ ಗಗನ ಬಾರಿಯವರನ್ನು ಸನ್ಮಾನಿಸಲಾಯಿತು, ಹಾಗೂ ಶಾಸಕ ವಿರೇಂದ್ರ ಪಪ್ಪಿಯವರ 50ನೇ ಹುಟ್ಟು ಹಬ್ಬದ ಅಂಗವಾಗಿ ಕೇಕ್‍ನ್ನು ಕತ್ತರಿಸಲಾಯಿತು. ಶ್ರೀಮತಿ ಶ್ವೇತ ಪ್ರಾರ್ಥಿಸಿದರೆ, ಶ್ರೀಮತಿ ಜಯಲಕ್ಷ್ಮೀ ಸ್ವಾಗತಿದರು, ಸಮಾಜದ ಪ್ರಧಾನ ಕಾರ್ಯದರ್ಶಿ ಜ್ಞಾನ ಮೂರ್ತಿ ಕಾಯಕ್ರಮವನ್ನು ನಿರೂಪಿಸಿದರು.

Advertisement
Tags :
believedbengaluruchitradurgacommunityDr. Jayabasavakumar SwamijiKayakasuddionesuddione newsಕಾಯಕಗಾಣಿಗ ಸಮಾಜಚಿತ್ರದುರ್ಗಡಾ. ಜಯಬಸವಕುಮಾರ ಸ್ವಾಮೀಜಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article