ಹಿರಿಯೂರು | ನಕಲಿ ಕ್ಲಿನಿಕ್ ಮೇಲೆ ಟಿಹೆಚ್ಓ ಡಾ. ಜಿ. ವೆಂಕಟೇಶ್ ದಾಳಿ : ಸೂಕ್ತ ಕ್ರಮದ ಎಚ್ಚರಿಕೆ...!
04:33 PM Dec 21, 2023 IST | suddionenews
ಸುದ್ದಿಒನ್, ಹಿರಿಯೂರು, ಡಿಸೆಂಬರ್.21 : ಪರವಾನಗಿ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ. ಜಿ. ವೆಂಕಟೇಶ್ ನೇತೃತ್ವದಲ್ಲಿ ದಿಡೀರ್ ದಾಳಿ ನಡೆಸಿದ್ದಾರೆ.
Advertisement
ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿರುವ ಎಂ.ಆರ್.ಎನ್ ಕ್ಲಿನಿಕ್ ಗೆ ಖಚಿತ ಮಾಹಿತಿ ಮೇರೆಗೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಭೇಟಿ ವೇಳೆ ಕ್ಲಿನಿಕ್ ನಡೆಸುವ ಬಗ್ಗೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದಾಗ, ಸ್ವಚ್ಛತೆಯಿಲ್ಲದೆ, ಅನಧಿಕೃತವಾಗಿರುವುದು ಕಂಡ ಬಂದ ಹಿನ್ನಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.
ದಾಳಿ ಕುರಿತು ಮಾತನಾಡಿದ ಟಿಹೆಚ್ಓ ಕ್ಲಿನಿಕ್ ಗಳು ಕೆಪಿಎಂಇಎ ಕಾಯ್ದೆ ಅಡಿಯಲ್ಲಿ ಪರವಾನಗಿ ಮತ್ತು ಸ್ವಚ್ಛತೆಯಿಂದ ಕೂಡಿರಬೇಕು. ಜೊತೆಗೆ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು. ಈ ದಾಳಿ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳು ಜೊತೆಗಿದ್ದರು.
Advertisement