For the best experience, open
https://m.suddione.com
on your mobile browser.
Advertisement

ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದರೆ ಸಂಘಟನೆಯಲ್ಲಿ ಒಡಕು ಇರಬಾರದು : ಕೃಷ್ಣಾ ಡಿ.ನಾಯ್ಕ

05:55 PM Jan 09, 2024 IST | suddionenews
ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದರೆ ಸಂಘಟನೆಯಲ್ಲಿ ಒಡಕು ಇರಬಾರದು   ಕೃಷ್ಣಾ ಡಿ ನಾಯ್ಕ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.09 : ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದರೆ ಸಂಘಟನೆಯಲ್ಲಿ ಒಡಕು ಇರಬಾರದು ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾ ಡಿ.ನಾಯ್ಕ ಪಡಿತರ ನ್ಯಾಯಬೆಲೆ ಅಂಗಡಿ ಮಾಲೀಕರುಗಳಿಗೆ ಕರೆ ನೀಡಿದರು.

Advertisement

ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ನ್ಯಾಯಬೆಲೆ ಅಂಗಡಿ ಮಾಲೀಕರುಗಳ ಸಮಸ್ಯೆಗಳನ್ನು ನಿವಾರಿಸುವಂತೆ ಆಹಾರ ಸಚಿವರಿಗೆ ಈಗಾಗಲೆ ಸಾಕಷ್ಟು ಬಾರಿ ಗಮನ ಸೆಳೆಯಲಾಗಿದೆ. ಪಡಿತರ ಅಂಗಡಿ ಮಾಲೀರಕಗಳ ನಡುವೆ ಯಾವುದೇ ಜಾತಿ ತಾರತಮ್ಯ ಇರಬಾರದು. ಯಾರಿಗೆ ತೊಂದರೆಯಾದರೂ ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ. ಒಂದು ಸಾವಿರ ಪಡಿತರ ಚೀಟಿಯಿರುವ ಯಾವುದೇ ಸೊಸೈಟಿಯನ್ನು ವಿಭಜನೆ ಮಾಡಬಾರದು. ಎರಡು ಗುಂಪುಗಳಾಗುವುದು ಬೇಡ. ಕಡ್ಡಾಯವಾಗಿ ಸದಸ್ಯತ್ವ ಪಡೆದುಕೊಳ್ಳಿ. ನಿರ್ಲಕ್ಷೆ ತೋರಬೇಡಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಡಿ.ಎಮ್.ಹಾಲಸ್ವಾಮಿ ಮಾತನಾಡಿ ಸಂಘದ ಎದುರು ಅನೇಕ ಸಮಸ್ಯೆ ಸವಾಲುಗಳಿವೆ. ಹಾಗಾಗಿ ಪಡಿತರ ನ್ಯಾಯಬೆಲೆ ಅಂಗಡಿಗಳವರು ಒಗ್ಗಟ್ಟಾಗಿರಬೇಕು. ಯಾವುದೇ ಕಾರಣಕ್ಕೂ ಭಿನ್ನಾಭಿಪ್ರಾಯವಿರಬಾರದು. ಹೋರಾಟದಿಂದ ಮಾತ್ರ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಶಿ ಮಾತನಾಡುತ್ತ ಸಂಘಟನೆಯಲ್ಲಿ ಯಾವುದೇ ಬಿರುಕು ಬರಬಾರದೆಂದರೆ ಹೊಂದಾಣಿಕೆ ಮುಖ್ಯ. ನ್ಯಾಯಬೆಲೆ ಅಂಗಡಿ ನಡೆಸುತ್ತಿರುವವರಿಗೆ ಆಹಾರ ಇಲಾಖೆಯವರು ವಿನಾ ಕಾರಣ ತೊಂದರೆ ಕೊಟ್ಟರೆ ಸಂಘದ ಗಮನಕ್ಕೆ ತನ್ನಿ. ಆಗ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದರು.

ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ಸಹ ಕಾರ್ಯದರ್ಶಿ ರಾಜುಗೊಂದಿ ಮಾತನಾಡಿ ಸಂಘಟನೆ ಎಂದ ಮೇಲೆ ಸಣ್ಣಪುಟ್ಟ ಲೋಪಗಳಿರುವುದು ಸಹಜ. ಒಗ್ಗಟ್ಟಿನಿಂದ ಇದ್ದರೆ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಒಂದಾಗಿದ್ದರೆ ಸಮಸ್ಯೆ ಬಗೆಹರಿದಂತೆ ಎಂದರು.  ನಗರಾಧ್ಯಕ್ಷ ಭೀಮಣ್ಣ, ನಗರದ ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags :
Advertisement