For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಅವೈಜ್ಞಾನಿಕಾಗಿ ನಿರ್ಮಿಸಿದ್ದ ಡಿವೈಡರ್ ತೆರವಿಗೆ ಕೂಡಿಬಂದ ಕಾಲ...!

08:02 AM Feb 10, 2024 IST | suddionenews
ಚಿತ್ರದುರ್ಗದಲ್ಲಿ ಅವೈಜ್ಞಾನಿಕಾಗಿ ನಿರ್ಮಿಸಿದ್ದ ಡಿವೈಡರ್ ತೆರವಿಗೆ ಕೂಡಿಬಂದ ಕಾಲ
Advertisement

ಸುದ್ದಿಒನ್, ಚಿತ್ರದುರ್ಗ, ಫೆ.10 : ನಗರದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದ್ದ ಅವೈಜ್ಞಾನಿಕ ಡಿವೈಡರ್ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಶುಕ್ರವಾರ ರಾತ್ರಿ ಚಾಲನೆ ನೀಡಿದರು. 

Advertisement

ಆರ್‌ಟಿಒ ಕಚೇರಿಯ ಮುಂಭಾಗ

Advertisement

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಯೂನಿಯನ್ ಟಾಕೀಸ್ ಮುಂಭಾಗದಿಂದ ಗಾಂಧಿ ವೃತ್ತದವರೆಗೂ ಇರುವ ಒನ್‍ವೇ ರಸ್ತೆ, ಜೆಸಿಆರ್ ಬಡಾವಣೆ ಮಾರ್ಗದ ಸಾಯಿಬಾಬಾ ಮಂದಿರದ ಬಳಿ, ವಿಪಿ ಬಡಾವಣೆಯ ಬಳಿ, ಹಾಗೂ ಆರ್‌ಟಿಒ ಕಚೇರಿಯ ಬಳಿ ಸೇರಿದಂತೆ ಒಟ್ಟು 6 ಕಡೆ ಅವೈಜ್ಞಾನಿಕ ಡಿವೈಡರ್ ಗಳನ್ನು ತೆರವುಗೊಳಿಸಲಾಗಿದೆ.

ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಗಾಂಧಿ ವೃತ್ತ

ಈ ಅವೈಜ್ಞಾನಿಕ ಡಿವೈಡರ್ ಗಳನ್ನು ತೆರವುಗೊಳಿಸಲು ಶಾಸಕ ವೀರೇಂದ್ರ ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು ಮತ್ತು ಬೆಳಗಾವಿ ಅಧಿವೇಶನದಲ್ಲಿಯೂ ಈ ಕುರಿತು ಧ್ವನಿ ಎತ್ತಿದ್ದರು. ನಂತರ ಜಿಲ್ಲಾಧಿಕಾರಿಗಳು, ಪಿಡಬ್ಲುಡಿ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿ, ನಗರಸಭೆ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದರು.ಇದಲ್ಲದೆ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕರು ಅನಾವಶ್ಯಕ ಡಿವೈಡರ್‍ಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಜೆಸಿಆರ್ ಬಡಾವಣೆಯ ಮುಖ್ಯ ರಸ್ತೆ 

ಅಷ್ಟೇ ಅಲ್ಲದೇ ಕೆಡಿಪಿ ಸಭೆಯಲ್ಲಿಯೂ ಈ ಕುರಿತು ಚರ್ಚಿಸಲಾಗಿತ್ತು. ನಗರದಲ್ಲಿ ನಿರ್ಮಿಸಿರುವ ಡಿವೈಡರ್‍ಗಳನ್ನು ತೆರವುಗೊಳಿಸುವ ಬಗ್ಗೆ ವಿಚಕ್ಷಣದಳ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಪರಿವೀಕ್ಷಣಾ ವರದಿ ನಂತರ ವರದಿಯಲ್ಲಿ ಸೂಚಿಸಿರುವಂತೆ ಡಿವೈಡರ್ ತೆರವುಗೊಳಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಈ ಹಿಂದೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ‌ಅದರಂತೆ ನಗರದಲ್ಲಿ 6 ಕಡೆ ಡಿವೈಡರ್ ಗಳನ್ನು ತೆರವುಗೊಳಿಸಿದ್ದಾರೆ. ಇದರಿಂದಾಗಿ ನಗರದಲ್ಲಿ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಅವೈಜ್ಞಾನಿಕ ಡಿವೈಡರ್ ಗಳ ನಿರ್ಮಾಣ ಸಂದರ್ಭದಲ್ಲಿಯೂ ಕೂಡ ಕೆಲವೆಡೆ‌ ಜನ, ವಾಹನಗಳು ಸಂಚರಿಸದ ಕಾರಾಗೃಹ ರಸ್ತೆಯಲ್ಲೂ ವಿಭಜಕ ನಿರ್ಮಿಸಲಾಗಿದೆ. ಇಲ್ಲಿ ಅಗತ್ಯವಿರಲಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಈ ರೀತಿಯ ಡಿವೈಡರ್ ಗಳು ನಿರ್ಮಿಸುವ ಅಗತ್ಯವೇ ಇರಲಿಲ್ಲ ಎಂದು  ಕೆಲವು ಸಂಘಟನೆಗಳು ಈ ಹಿಂದೆ ಬೀದಿಗಿಳಿದು ಪ್ರತಿಭಟನೆ ಕೂಡ ನಡೆಸಿದ್ದವು.

ಅಕ್ಟೋಬರ್ 25, 2022 ರಲ್ಲಿ ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರ ಬಳಿ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿ ಮೂವರು ಸಾವನ್ನಪ್ಪಿದ್ದನ್ನು ಸ್ಮರಿಸಬಹುದು.

Tags :
Advertisement