Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೇಂದ್ರ ಸಚಿವರು ಕ್ಷೇತ್ರದ ಋಣ ತೀರಿಸದೆ ಪಲಾನಯನವನ್ನು ಮಾಡುತ್ತಿರುವುದು ಸರಿಯಲ್ಲ : ನೇರ್ಲಗುಂಟೆ ರಾಮಪ್ಪ

03:48 PM Jan 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 01 :  ಅಧಿಕಾರ ಇದ್ಧಾಗ ಏನು ಮಾಡಲಾಗದೇ ಅಧಿಕಾರಿಗಳು ಸ್ಫಂದಿಸಲಿಲ್ಲ ಇದರಿಂದ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವುದು ಸರಿಯಾದ ಕ್ರಮವಲ್ಲ ಅಧಿಕಾರ ಇದ್ದಾಗ ಸರಿಯಾಗಿ ಕೆಲಸವನ್ನು ಮಾಡಿಸಿ ಕ್ಷೇತ್ರದ ಋಣವನ್ನು ತೀರಿಸಬೇಕಿದೆ ಎಂದು ಕೇಂದ್ರ ಸಚಿವರ ಮೇಲೆ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನೇರ್ಲಗುಂಟೆ ರಾಮಪ್ಪ ವಾಗ್ದಾಳಿಯನ್ನು ನಡೆಸಿದ್ದಾರೆ.

Advertisement

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕುವರೆ ವರ್ಷದಿಂದ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿದ್ದ ನೀವುಗಳು ಚಿತ್ರದುರ್ಗ ಹಲವಾರು ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ವಿಫಲರಾಗಿದ್ದೀರಾ, ಜನಪ್ರತಿನಿಧಿಯಾಗಿ ಮತದಾರರ ಸಮಸ್ಯೆಗಳನ್ನು ಸಹಾ ಬಗೆಹರಿಸುವಲ್ಲಿಯೂ ಸಹಾ ಹಿನ್ನಡೆಯನ್ನು ಸಾಧಿಸಲಾಗಿದೆ. ರೈಲ್ವೆಗಳಲ್ಲಿ ಅಗತ್ಯವಾಗಿ ಬೇಕಾದ ಅಂಡರ್‌ಪಾಸ್‌ಗಳನ್ನು ಅಗತ್ಯ ಇರುವ ಕಡೆಗಳಲ್ಲಿ ನಿರ್ಮಾಣ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿಲ್ಲ ಇದರಿಂದ ಹಲವಾರು ಕಡೆಯಲ್ಲಿ ವಾಹನ ಸವಾರರು ಕಷ್ಟವನ್ನು ಅನುಭವಿಸಬೇಕಿದೆ. ಇದ್ದಲ್ಲದೆ ರಾ.ಹೆ.ಯಲ್ಲಿಯೂ ಸಹಾ ಸರಿಯಾದ ರೀತಿಯಲ್ಲಿ ಅಂಡರ್ ಪಾಸ್‌ಗಳನ್ನು ನಿರ್ಮಾಣ ಮಾಡಿಲ್ಲ,  ನಿರ್ಮಾಣ ಮಾಡಿದ ಕೆಲವೆಡೆಗಳಲ್ಲಿ ಮಳೆ ಬಂದಾಗ ನೀರು ನಿಂತು ವಾಹನ ಸವಾರರು ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇದರ ಬಗ್ಗೆ ನಿಮಗೆ ಅರಿವು ಇಲ್ಲವೇ ಎಂದು ಸಚಿವರನ್ನು ಪ್ರಶ್ನಿಸಿದರು.

ಕ್ಷೇತ್ರ ಸಂಸದರಾಗಿ ಸಚಿವರಾಗಿ ಕ್ಷೇತ್ರವನ್ನು ಅಭಿವೃದ್ದಿ ಮಾಡುವ ಯಾವ ಕೆಲಸವನ್ನು ಸಹಾ ನಿಮ್ಮ ಅಧಿಕಾರದ ಅವಧಿಯಲ್ಲಿ ಮಾಡಿಲ್ಲ, ಈಗಾಗಲೇ ನಾಲ್ಕುವರೆ ವರ್ಷ ಕಳೆದಿದೆ ಉಳಿದ ಕೆಲವು ತಿಂಗಳಲ್ಲಾದರು ಉತ್ತಮವಾದ ಕೆಲಸವನ್ನು ಮಾಡಿ ಎಂದ ಅವರು ನನ್ನ ಅವಧಿಯಲ್ಲಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಫಂದಿಸಿಲ್ಲ ಇದರಿಂದ ಕೆಲಸ ಮಾಡಲಾಗಿಲ್ಲ ಅಲ್ಲದೆ ಮುಂದಿನ ಚುನಾವಣೆಯಲ್ಲಿ ನಾನು ಇಲ್ಲಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವುದರ ಮೂಲಕ ಪಲಾನಯನವನ್ನು ಮಾಡುತ್ತಿರುವುದು ಸರಿಯಲ್ಲ, ಇದ್ಧಾಗ ಉತ್ತಮವಾದ ಕೆಲಸವನ್ನು ಮಾಡಬೇಕಿದೆ. ಆಗ ಮತದಾರರಿಗೆ ಸಂತೋಷವಾಗುತ್ತದೆ. ಇದರ ಬಗ್ಗೆ ಆಲೋಚನೆಯನ್ನು ಮಾಡಬೇಕಿದೆ ಎಂದು ರಾಮಪ್ಪ ಕಿವಿ ಮಾತು ಹೇಳಿದರು.

ಅರಣ್ಯ ಇಲಾಖೆಯಲ್ಲಿ 5500 ರೈತರರು ಜಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ 300 ಅರ್ಜಿಗಳನ್ನು ಮಾತ್ರವೇ ವಿಲೇವಾರಿ ಮಾಡಲಾಗಿದೆ ಇನ್ನೂ 5200 ಅರ್ಜಿಗಳು ಬಾಕಿ ಇವೆ. ಇದನ್ನು ವಿಲೇವಾರಿ ಮಾಡುವಲ್ಲಿ ಸಚಿವರು ಸೋತ್ತಿದ್ದಾರೆ. ಅಧಿಕಾರಿಗಳನ್ನು ಸರಿಯಾದ ರೀತಿಯಲ್ಲಿ ಹಿಡಿತದಲ್ಲಿ ಇಟ್ಟುಕೊಳ್ಳಲಾಗಿಲ್ಲ, ಗಣಿಭಾದಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಭೀವೃದ್ದಿಯನ್ನು ಮಾಡಿಲ್ಲ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕಿತ್ತು ಆದರೆ ಇದರ ಬಗ್ಗೆ ಗಮನ ನೀಡದೇ ಕಟ್ಟಡಗಳನ್ನು ನಿರ್ಮಾಣ ಮಾಡುವಲ್ಲಿ ಮುಂದಾಗಿರುವುದು ಸರಿಯಲ್ಲ, ಬಿಜೆಪಿ ಎಲ್ಲಾ ಜಾತಿ ಧರ್ಮದವರನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗದೇ ಅವರಲ್ಲಿ ಒಡಕನ್ನು ಉಂಟು ಮಾಡುವ ಕೆಲಸವನ್ನು ಮಾಡುತ್ತಿದೆ. ರಾಮಮಂದಿರ ಉದ್ಘಾಟನೆ ಮಾಡಿ ಹಿಂದು ಧರ್ಮದವರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ. ರಾಮ ಬರೀ ಅಯೋಧ್ಯಯಲ್ಲಿಯೇ ಇಲ್ಲ ಎಲ್ಲ ಕಡೆಯಲ್ಲಿಯೂ ಸಹಾ ಇದ್ದಾನೆ ಎಲ್ಲರ ಮನದಲ್ಲಿಯೂ ಸಹಾ ಇದ್ದಾನೆ ರಾಮ ಬರೀ ಬಿಜೆಪಿಯ ಸೊತ್ತಲ್ಲ ಎಲ್ಲರ ದೇವರು ಎಂದರು.

ಕರ್ನಾಟಕ ಜಿಎಸ್.ಟಿ.ಯನ್ನು ನೀಡುವಲ್ಲಿ 4ನೇ ಸ್ಥಾನವನ್ನು ಪಡೆದಿದೆ ಆದರೆ ಅದನ್ನು ಮರಳಿ ನೀಡುವಲ್ಲಿ ಕೇಂದ್ರ ಸರ್ಕಾರ ಹಿನ್ನಡೆಯಾಗಿದೆ ನಮಗೆ ಬದಲಿಗೆ ಗುಜರಾತ್‌ಗೆ ಹೆಚ್ಚಿನ ಅದ್ಯತೆಯನ್ನು ನೀಡಲಾಗುತ್ತಿದೆ. ಇದು ಕೇಂದ್ರ ಸರ್ಕಾರ ಮಾಡುತ್ತಿರುಚವ ಮಲತಾಯಿ ಧೋರಣೆಯಾಗಿದೆ. ರಾಜ್ಯದಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಲ್ಲಿ ಮೂರು ಜನ ಮಂತ್ರಿಗಳಿದ್ದು 25 ಜನ ಸಂಸದರಿದ್ದಾರೆ ಅವರಾರು ಸಹಾ ಮೋದಿಯ ಮುಂದೆ ಧ್ವನಿ ಎತ್ತುತ್ತಿಲ್ಲ. ನಮ್ಮ ಹೈಕಮಾಂಡ್ ಚಿತ್ರದುರ್ಗ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡುತ್ತಾರೂ ಅವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ ಅವರನ್ನು ಗೆಲುವುದಕ್ಕೆ ಸಹಾಯವನ್ನು ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ 2024ರ ಹೂಸ ವರ್ಷದ ಅಂಗವಾಗಿ ಕಾಂಗ್ರೆಸ್ ಕಚೇರಿಯಲ್ಲಿ ನೆರದಿದ್ದವರೆಲ್ಲಾ ಸೇರಿ ಕೇಕ್ ಕಟ್ ಮಾಡುವುದರ ಮೂಲಕ ನೂತನ ವರ್ಷವನ್ನು ಬರ ಮಾಡಿಕೊಂಡರು.

ಗೋಷ್ಟಿಯಲ್ಲಿ ಡಿಸಿಸಿ ಅಧ್ಯಕ್ಷ ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ಉಪಾಧ್ಯಕ್ಷರಾದ ನಜ್ಮಾತಾಜ್, ಯಶವಂತ, ಮುದಸಿರ್ ಶಬ್ಬೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
authoritieschitradurgaNerlagunte Ramappanot respondThe Union Ministerಕೇಂದ್ರ ಸಚಿವರು ಕ್ಷೇತ್ರಚಿತ್ರದುರ್ಗನೇರ್ಲಗುಂಟೆ ರಾಮಪ್ಪ
Advertisement
Next Article