Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು | ತಂದೆ ಕಲಿತ ಶಾಲೆಗೆ ಕಂಪ್ಯೂಟರ್ ಗಳ ಕೊಡುಗೆ ನೀಡಿದ ಮಗ

07:04 PM May 31, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಮೇ.31  : ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿ, ಸ್ವತಃ ತಾವೇ ದುಡಿದು ಗಳಿಸಿದ ಹಣದಲ್ಲಿ ತನ್ನ ತಂದೆ ಕಲಿತ ಶಾಲೆಗೆ 16 ಕಂಪ್ಯೂಟರ್ ಗಳನ್ನು ಕೊಡುಗೆ ನೀಡಲಾದ ಪ್ರಯುಕ್ತ ತಾಲೂಕಿನ ವಾಣಿವಿಲಾಸ ಸಾಗರದ ಶ್ರೀ ಬಿ.ಎಲ್. ಗೌಡ ಪ್ರೌಢಶಾಲೆಯಲ್ಲಿ ಸೋಮವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು.

Advertisement

ಈ ಶಾಲೆಯಲ್ಲಿ 1986-87 ನೇ ಸಾಲಿನ ವಿದ್ಯಾರ್ಥಿಯಾಗಿರುವ ಸಂದೀಲ್ ಕುಮಾರ್ ರವರ ಸುಪುತ್ರ ಎಸ್ ಅಖಿಲ್ ರವರು ವಿದೇಶದಲ್ಲಿ ಓದಿ, ಹಣ ಸಂಪಾದಿಸಿ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಬೆಳಕಾಗಿ ನಿಂತಿದ್ದಾರೆ.

 

Advertisement

ಸಮಾರಂಭ ದಲ್ಲಿ ಸಂದೀಲ್ ಕುಮಾರ್ ಹಾಗೂ ಅಖಿಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ. ಎ. ಅನ್ನಪೂರ್ಣಮ್ಮ ವಹಿಸಿದ್ದರು, ಶಿಕ್ಷಕರಾದ ಗುರುಸಾಗರ್ , ಅನುಪಮ, ಕುಮಾರ್, ತಿಪ್ಪೇಸ್ವಾಮಿ, ಶಾಲೆಯ ವಿದ್ಯಾರ್ಥಿಗಳು ಇದ್ದರು.

Advertisement
Tags :
bengaluruchitradurgacomputersdonatedfatherhiriyuruschoolstudiedsuddionesuddione newsಕಂಪ್ಯೂಟರ್ಕೊಡುಗೆಚಿತ್ರದುರ್ಗತಂದೆಬೆಂಗಳೂರುಮಂಗಶಾಲೆಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article