For the best experience, open
https://m.suddione.com
on your mobile browser.
Advertisement

ಹಿರಿಯೂರು | ತಂದೆ ಕಲಿತ ಶಾಲೆಗೆ ಕಂಪ್ಯೂಟರ್ ಗಳ ಕೊಡುಗೆ ನೀಡಿದ ಮಗ

07:04 PM May 31, 2024 IST | suddionenews
ಹಿರಿಯೂರು   ತಂದೆ ಕಲಿತ ಶಾಲೆಗೆ ಕಂಪ್ಯೂಟರ್ ಗಳ ಕೊಡುಗೆ ನೀಡಿದ ಮಗ
Advertisement

ಸುದ್ದಿಒನ್, ಹಿರಿಯೂರು, ಮೇ.31  : ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿ, ಸ್ವತಃ ತಾವೇ ದುಡಿದು ಗಳಿಸಿದ ಹಣದಲ್ಲಿ ತನ್ನ ತಂದೆ ಕಲಿತ ಶಾಲೆಗೆ 16 ಕಂಪ್ಯೂಟರ್ ಗಳನ್ನು ಕೊಡುಗೆ ನೀಡಲಾದ ಪ್ರಯುಕ್ತ ತಾಲೂಕಿನ ವಾಣಿವಿಲಾಸ ಸಾಗರದ ಶ್ರೀ ಬಿ.ಎಲ್. ಗೌಡ ಪ್ರೌಢಶಾಲೆಯಲ್ಲಿ ಸೋಮವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು.

Advertisement

ಈ ಶಾಲೆಯಲ್ಲಿ 1986-87 ನೇ ಸಾಲಿನ ವಿದ್ಯಾರ್ಥಿಯಾಗಿರುವ ಸಂದೀಲ್ ಕುಮಾರ್ ರವರ ಸುಪುತ್ರ ಎಸ್ ಅಖಿಲ್ ರವರು ವಿದೇಶದಲ್ಲಿ ಓದಿ, ಹಣ ಸಂಪಾದಿಸಿ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಬೆಳಕಾಗಿ ನಿಂತಿದ್ದಾರೆ.

Advertisement

Advertisement

ಸಮಾರಂಭ ದಲ್ಲಿ ಸಂದೀಲ್ ಕುಮಾರ್ ಹಾಗೂ ಅಖಿಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ. ಎ. ಅನ್ನಪೂರ್ಣಮ್ಮ ವಹಿಸಿದ್ದರು, ಶಿಕ್ಷಕರಾದ ಗುರುಸಾಗರ್ , ಅನುಪಮ, ಕುಮಾರ್, ತಿಪ್ಪೇಸ್ವಾಮಿ, ಶಾಲೆಯ ವಿದ್ಯಾರ್ಥಿಗಳು ಇದ್ದರು.

Advertisement
Advertisement

Advertisement
Tags :
Advertisement