Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ : ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ

05:21 PM Dec 15, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.15  : ಮಕ್ಕಳನ್ನು ಕೇವಲ ಪಠ್ಯಪುಸ್ತಕ ಅಂಕಕ್ಕೆ ಸೀಮಿತಗೊಳಿಸದೆ ಜೀವನಕ್ಕೆ ಬೇಕಾಗಿರುವ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಕರೆ ನೀಡಿದರು.

Advertisement

ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವೃತ್ತಿ ಶಿಕ್ಷಣ ಕಲಿಕೋತ್ಸವ ಹಾಗೂ ವಸ್ತು ಪ್ರದರ್ಶನ ಉದ್ಗಾಟಿಸಿ ಮಾತನಾಡಿದರು.

ವೃತ್ತಿ ಶಿಕ್ಷಕರು ಮಕ್ಕಳ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ವಿಷಯಾಧಾರಿತ ಶಿಕ್ಷಕರುಗಳಿಗಿರುವಷ್ಟೆ ಗೌರವ, ಜವಾಬ್ದಾರಿ ನಿಮಗೂ ಇರುವುದರಿಂದ ಮಕ್ಕಳನ್ನು ಸ್ವಾವಲಂಭಿಗಳಾಗಿ ಬದುಕುವತ್ತ ಸಿದ್ದಗೊಳಿಸಬೇಕು. ಮಕ್ಕಳ ಮನಸ್ಸು ಅಂಗಾಂಗ ವೃತ್ತಿ ಕೌಶಲ್ಯದ ಕಾರ್ಯವಾಗಬೇಕು. ಕೌಶಲ್ಯ ಶಿಕ್ಷಣದಿಂದ ಮಕ್ಕಳಲ್ಲಿ ಮಾನಸಿಕ ದೈಹಿಕ ಸಾಮಥ್ರ್ಯ ಬೆಳೆಯುತ್ತದೆ. ಕೇವಲ ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆಗಳಲ್ಲದೆ ವೃತ್ತಿ ಶಿಕ್ಷಣ ಕಲಿತ ವಿದ್ಯಾಥಿ9 ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ ಗಾಂಧಿಜಿಯವರ ಆಸೆಯಂತೆ ಶಿಕ್ಷಣ ಮತ್ತು ತತ್ವದ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ವೃತ್ತಿ ಶಿಕ್ಷಣದ ಕೌಶಲ್ಯಗಳಾದ ತೋಟಗಾರಿಕೆ, ಕೃಷಿ, ಹೊಲಿಗೆ, ರೇಷ್ಮೆಯಂತ ಕೌಶಲಗಳನ್ನು ಬೆಳೆಸಿದರೆ ಟಚ್ ಅಂಡ್ ಫೀಲ್ ಅನುಭವವಾಗುತ್ತದೆ ಎಂದು ತಿಳಿಸಿದರು.

ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ ಮಾತನಾಡುತ್ತ ವೃತ್ತಿ ಶಿಕ್ಷಣ ಶಿಕ್ಷಕರು ಪಠ್ಯದ ಜೊತೆಗೆ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗುವಂತೆ ಮಕ್ಕಳನ್ನು ಅಣಿಗೊಳಿಸಿದಾಗ ಮಕ್ಕಳ ಮನಸ್ಸು ಆಹ್ಲಾದಗೊಳ್ಳುತ್ತದೆ ಎಂದರು.

ಡಿ.ವೈ.ಪಿ.ಸಿ. ಸಮಗ್ರ ಶಿಕ್ಷಣ ಕರ್ನಾಟಕ ವೆಂಕಟೇಶಪ್ಪ ಸಿ.ಎಸ್. ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪಠ್ಯ ಸಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿದ್ದು, ವೃತ್ತಿ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಹುದುಗಿರುವ ಕೌಶಲ್ಯಕ್ಕೆ ಸಾಣೆ ಹಿಡಿಯುವ ಕೆಲಸ ಮಾಡಬೇಕೆಂದರು.

ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕರಾದ ಬಸವರಾಜ್ ಓಲೇಕಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತ ನಮ್ಮ ದೇಶ ಕೃಷಿ ಆಧಾರಿತ ಹಳ್ಳಿಗಳಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಪ್ರೌಢಶಿಕ್ಷಣದ ಹಂತದಲ್ಲಿಯೇ ವೃತ್ತಿ ಶಿಕ್ಷಣದ ಮಾರ್ಗದರ್ಶನವಾಗಬೇಕು. ಇದರಿಂದ ಪ್ರೌಢ ಶಿಕ್ಷಣದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ವೃತ್ತಿ ಶಿಕ್ಷಣದ ಮಹತ್ವ ತಿಳಿಸಿದರು.

ವಿಷಯ ಪರಿವೀಕ್ಷಕರುಗಳಾದ ಶ್ರೀಮತಿ ಸವಿತ, ಹೆಚ್.ಗೋವಿಂದಪ್ಪ, ಕೆ.ಶಿವಣ್ಣ, ಹೆಚ್.ಟಿ.ಚಂದ್ರಣ್ಣ, ಜಿಲ್ಲೆಯ ಎಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement
Tags :
chitradurgaDDPI K. Ravi Shankar ReddyDDPI K. Ravishankar ReddyThe responsibility of imparting skill-based educationಚಿತ್ರದುರ್ಗಡಿಡಿಪಿಐ ಕೆ.ರವಿಶಂಕರ್ ರೆಡ್ಡಿಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣ
Advertisement
Next Article